More

    ಏಕೈಕ ಮಗನ ಚಿಕಿತ್ಸೆಗಾಗಿ ಆರ್ಥಿಕ ನೆರವಿಗೆ ಮೊರೆ

    ಬೆಳಗಾವಿ: ಸುಮಾರು 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನಮಾಡಿದ ತಾಯಿಗೆ ಈಗ ಆರ್ಥಿಕ ನೆರವು ಬೇಕಾಗಿದೆ.

    ಅಥಣಿ ತಾಲೂಕಿನ ಮದಬಾವಿಯ ಪ್ರಜ್ವಲ್ ಮಹಾದೇವ ನಿವಳಗಿ 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ. ಈತ ಶೋಭಾ, ಮಹಾದೇವ ದಂಪತಿಯ ಏಕೈಕ ಪುತ್ರ. ಶೋಭಾ 2 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಮಹಾದೇವ ನಿವಳಗಿ ಇಹಲೋಕ ತ್ಯಜಿಸಿದರು. ಮಗನನ್ನು ಸಾಕಲು ಶೋಭಾ ಕೃಷಿ ಕೂಲಿಕಾರ್ಮಿಕಳಾಗಿ ದುಡಿಯುತ್ತಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಜ್ವಲ್‌ಗೆ 2018ರಲ್ಲಿ ಮಿರಜ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ತಿಳಿದಿದೆ. ಬಳಿಕ ತಾಯಿಯೇ ಕಿಡ್ನಿ ನೀಡಲು ಮುಂದಾಗಿದ್ದು, ಡಾ.ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯ ಪಿಡಿಯಾಟ್ರಿಕ್ ನೆಫ್ರಾಲಜಿ ವಿಭಾಗದಲ್ಲಿ ಪಿಡಿಯಾಟ್ರಿಕ್ ನೆಫ್ರಾಲಜಿಸ್ಟ್ ಡಾ. ಮಹಾಂತೇಶ ಪಾಟೀಲ ನೇತೃತ್ವದಲ್ಲಿ ಮೂತ್ರಶಾಸ್ತ್ರಜ್ಞ ಡಾ.ಆರ್.ಬಿ.ನೇರ್ಲಿ ಮತ್ತು ಡಾ.ವಿಕ್ರಮಪ್ರಭ, ಅರಿವಳಿಕೆ ತಜ್ಞ ಡಾ.ರಾಜೇಶ ಮಾನೆ, ನಾಳೀಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಸಾಲ್ಡಾನಾ ಅವರ ತಂಡ ಬಾಲಕನಿಗೆ ಯಶಸ್ವಿಯಾಗಿ ಕಿಡ್ನಿಕಸಿ ಶಸ್ತ್ರಚಿಕಿತ್ಸೆ ಮಾಡಿದೆ.

    ಜೆಎನ್‌ಎಂಸಿ ವೈದ್ಯಕೀಯ ಕಾಲೇಜಿನ ಡಾ.ಎನ್.ಎಸ್.ಮಹಾಂತಶೆಟ್ಟಿ ಅವರ ನೆರವಿನೊಂದಿಗ ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಉಚಿತ ಹಿಮೋಡಯಾಲಿಸಿಸ್, ಔಷಧಗಳನ್ನು ನೀಡಲಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ. ಆದರೆ, ಚಿಕಿತ್ಸೆ, ಔಷಧ ಇತ್ಯಾದಿಗೆ ತಗುಲಿದ ವೆಚ್ಚದ 5ರಿಂದ 7 ಲಕ್ಷ ರೂ. ಭರಿಸಲು ಶೋಭಾ ಅವರಿಂದ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಹೀಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಕೋರಿದ್ದಾರೆ. ಮಾತೃಹೃದಯಿಗಳು ಸಹಾಯ ಮಾಡಬೇಕೆಂದಿದ್ದರೆ ಅವರನ್ನು ಸಂಪರ್ಕಿಸಬಹುದು.

    ನೆರವು ನೀಡಲು ಸಂಪರ್ಕಿಸಿ: ನೆರವು ನೀಡಲು ಬಯಸುವವರು ಶೋಭಾ ಮಹಾದೇವ ನಿವಳಗಿ (ಮೊ.9611467167). ಬ್ಯಾಂಕ್: ಕೆವಿಜಿ ಬ್ಯಾಂಕ್. ಖಾತೆ ಸಂಖ್ಯೆ: 17217089504 ಐಎಫ್‌ಎಸ್‌ಸಿ ಕೋಡ್: ಓ್ಖಎಆ0002007

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts