More

    ಏಕಾಗ್ರತೆಯ ಸಾಧನೆಗೆ ಯೋಗ ಸಹಕಾರಿ

    ಚಿತ್ರದುರ್ಗ: ಯೋಗಾಭ್ಯಾಸದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಬಿಇಒ ಎಸ್.ನಾಗಭೂಷಣ್ ಹೇಳಿದರು. ಚಿನ್ಮಯ ಮಯೂರ ಯೋಗ ಕ್ರೀಡಾ ಸಾಂಸ್ಕೃತಿಕ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ವಿವೇಕಾನಂ ದನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ‘ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ಧ್ಯೇಯವಾಕ್ಯದೊಂದಿಗೆ ಕನ್ನಡಗೀತೆಗಳೊಂದಿಗೆ ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನ ಏ ಕಾಗ್ರತೆಗೆ ಸಹಕಾರಿಯಾಗಿರುವ ಯೋಗಾಭ್ಯಾಸವನ್ನು ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕೆ ರೂಢಿಸಿಕೊಳ್ಳ ಬೇಕೆಂದರು.
    ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಟಿ.ಷಣ್ಮುಖಪ್ಪ,ನಗರಸಭೆ ಮಾಜಿಸದಸ್ಯ ಜೆ.ಮಹೇಶ್, ಶಿಕ್ಷಣ ಸಂಯೋಜಕ ಜೆ.ಬಿ.ರವೀಂದ್ರನಾಥ್, ಎಸ್‌ಡಿಎಂಸಿ ಅಧ್ಯಕ್ಷ ಕೆ.ಕುಮಾರ್,ಶಿಕ್ಷಕಿಯರಾದ ಬಿ.ವಿಮಲಾಕ್ಷಿ, ಟಿ.ಎನ್.ಶೋಭಾ ಬಾದರದಿನ್ನಿ ಆರ್ಟ್ಸ್ ಅಕಾಡೆಮಿ ಅಧ್ಯಕ್ಷ ಪ್ರಕಾಶ್ ಬಾದರದಿನ್ನಿ ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
    ಸಂಪನ್ಮೂಲ ವ್ಯಕ್ತಿಗಳಾದ ಕೆ.ಪಿ.ಎಂ.ಗಣೇಶಯ್ಯ,ಯೋಗಶಿಕ್ಷಕ ಎಂ.ಬಿ.ಮುರುಳಿ ಇದ್ದರು. ಹರ್ಷಿತಾ ಮತ್ತು ಸಿಂಚನಾ ಪ್ರಾರ್ಥಿದ ರು. ಶಿಕ್ಷಕಿ ಪಿ.ಬಿ.ಅನುಸೂಯಮ್ಮ ನಿರೂಪಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts