More

    ಏಕತಾ ಫೌಂಡೇಷನ್‌ನಿಂದ ಅಂತ್ಯ‘ಸಂಸ್ಕಾರ’

    ಏಕತಾ, ಫೌಂಡೇಷನ್‌ನಿಂದ, ಅಂತ್ಯ, ಸಂಸ್ಕಾರ, ಕರೊನಾದಿಂದ, ಮೃತಪಟ್ಟವರ, ಮಣ್ಣು, ಮಾಡುತ್ತಿರುವ, ಸಮಾನ, ಮನಸ್ಕರ, ತಂಡ, ಸಾಮಾಜಿಕ, ಹೊಣೆಗಾರಿಕೆಗೆ, ಜನಮೆಚ್ಚುಗೆ, ಸುಯೋಗ, ಕಿಲ್ಲೇದಾರ, ಬೋರಗಾಂವ, ಬೆಳಗಾವಿ, Ekta, Foundation, End, Burial, Corona, Dead, Soil, Doing, Equal, Mindful, Team, Social, Responsibility, Populism, Yoga, Killeader, Boragav, Belagavi
    ವಿಶ್ವವನ್ನೇ ನಡುಗಿಸಿದ ಮಹಾಮಾರಿ ಕರೊನಾದಿಂದ ವ್ಯಕ್ತಿ ಸತ್ತರೆ ಸಂಬಂಧಿಗಳೇ ಶವ ಸಂಸ್ಕಾರ ಮಾಡಲು ಹಿಂಜರಿಯುತ್ತಿದ್ದಾರೆ. ಆದರೆ, ನಿಪ್ಪಾಣಿ ನಗರದ ಏಕತಾ ಫೌಂಡೇಷನ್ ಯುವಕರ ತಂಡ ಕರೊನಾದಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರ ಮಾಡುವ ಮೂಲಕ ಸಾಮಾಜಿಕ ಹಾಗೂ ಮಾನವೀಯ ಮೌಲ್ಯ ಎತ್ತಿಹಿಡಿದಿದೆ.
    ಆ.21 ರಂದು ಸ್ಥಾಪನೆಯಾದ ಏಕತಾ ಫೌಂಡೇಷನ್‌ನಿಂದ ಇಲ್ಲಿಯವರಿಗೆ ಸುಮಾರು 55 ಜನ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಉಚಿತ ಶವ ಸಂಸ್ಕಾರ ಮಾಡಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಾಮಾಜಿಕ ಚಿಂತನೆ ಹೊಂದಿರುವ ಫೌಂಡೇಷನ್ ಸದಸ್ಯರ ಮಾನವೀಯ ಕಾರ್ಯಕ್ಕೆ ಗಡಿಭಾಗದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
    ದಿನದಿಂದ ದಿನಕ್ಕೆ ಗಡಿಭಾಗದ ನಿಪ್ಪಾಣಿ, ಚಿಕ್ಕೋಡಿ, ತಾಲೂಕು ವ್ಯಾಪ್ತಿಯಲ್ಲಿ ಕರೊನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಪ್ರತಿದಿನ ನಾಲ್ಕೈದು ಜನ ಮೃತಪಡುತ್ತಿದ್ದಾರೆ. ಅಂತಹ ಕರೊನಾ ಪೀಡಿತರ ಶವ ಸಂಸ್ಕಾರ ಮಾಡಲು ಕುಟುಂಬದವರೇ ನಿರಾಕರಿಸುತ್ತಿದ್ದಾರೆ. ಇಂಥ ಸಮಯದಲ್ಲಿ ಏಕತಾ ಸಂಸ್ಥೆ ಶವ ಸಂಸ್ಕಾರ ಮಾಡಲು ಮುಂದಾಗುತ್ತಿದೆ. ಮೈನುದ್ದೀನ್ ಮುಲ್ಲಾ, ಪುಷ್ಕರ ತಾರಳೆ, ಜುಬೇರ್ ಬಾಗವಾನ, ಇರ್ಫಾನ್ ಮಹಾತ, ವಿನಾಯಕ ಕಮತೆ, ರಾಜ್ ಪಠಾಣ, ನಾವೇದ್ ದೇಸಾಯಿ, ಪಾಂಡುರಂಗ ಭೂಯಿ, ವಿಕಾಸ್ ಚವ್ಹಾಣ, ಗೌರಂಗ್ ತಿಳವೆ ಸೇರಿ 14 ಜನ ಯುವಕರ ತಂಡ ಆ.21 ರಿಂದ ಕರೊನಾ ಸೋಂಕಿತರ ಅಂತ್ಯ ಸಂಸ್ಕಾರ ನೆರವೇರಿಸುತ್ತಿದೆ.
    ಅಗತ್ಯವಿದ್ದರೆ ಉಚಿತ ಆಂಬುಲೆನ್ಸ್: ಏಕತಾ ಫೌಂಡೇಷನ್ ಆಂಬುಲೆನ್ಸ್ ಸೇವೆಯನ್ನೂ ನೀಡುತ್ತಿದೆ. ವೈದ್ಯರ ಸಲಹೆ ಮೇರೆಗೆ ಅಗತ್ಯವಿದ್ದಲ್ಲಿ ಆಂಬುಲೆನ್ಸ್ ಒದಗಿಸಲಾಗುತ್ತದೆ. ಕರೊನಾ ವ್ಯಕ್ತಿಯ ಕುಟುಂಬದವರು ಬಡವರು ಇದ್ದರೆ ಅಂತಹವರಿಗೆ ಆಕ್ಸಿಜನ್ ವ್ಯವಸ್ಥೆ ಇರುವ ಬೇರೆ ಕಡೆ ಬೆಡ್ ನೀಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಫೌಂಡೇಷನ್ ಕಾರ್ಯದರ್ಶಿ ಜುಬೇರ್ ಬಾಗವಾನ ತಿಳಿಸಿದರು.
    ನಿಪ್ಪಾಣಿ ನಗರದಲ್ಲಿ-51, ಚಿಕ್ಕೋಡಿಯಲ್ಲಿ-3 ಹಾಗೂ ಮಹಾರಾಷ್ಟ್ರದ ಚಿಗಲೆ ಗ್ರಾಮದಲ್ಲಿ ಇಬ್ಬರ ಶವ ಸಂಸ್ಕಾರ ನೆರವೇರಿಸಿದ್ದಾರೆ. ಕರೊನಾದಿಂದ ಯಾರೇ ಮೃತಪಟ್ಟರೂ ಫೌಂಡೇಷನ್ ಸದಸ್ಯರು ಅಲ್ಲಿಗೆ ಹೋಗಿ ಮೃತದೇಹ ಪಡೆಯುತ್ತಾರೆ. ಪಿಪಿಇ ಕಿಟ್, ಸ್ಯಾನಿಟೈಸರ್ ಸೇರಿ ಮುಂತಾದ ಸುರಕ್ಷತಾ ಕ್ರಮ ಅಳವಡಿಸಿಕೊಂಡು ಆಯಾ ಧರ್ಮದ ವಿಧಿ-ವಿಧಾನದೊಂದಿಗೆ ಅಂತ್ಯ ಸಂಸ್ಕಾರ ನಡೆಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts