More

    ಎಸ್ಸೆಸ್ಸೆಲ್ಸಿ ಪರೀಕ್ಷಾ ಹಬ್ಬ ಶುರು  ಪ್ರಥಮ ಭಾಷೆಗೆ 155 ಮಂದಿ ಗೈರು 

    ದಾವಣಗೆರೆ:ಒಂದೆಡೆ ಚುನಾವಣೆ, ಮತ್ತೊಂದೆಡೆ ಬಿಸಿಲಿನ ಕಾವಿನ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಹಬ್ಬ ಶುರುವಾಗಿದೆ. ಜಿಲ್ಲೆಯ 89 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಸುಗಮ ಆರಂಭ ಕಂಡಿದೆ. ಪ್ರಥಮ ಭಾಷೆ (ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್) ಪರೀಕ್ಷೆ ನಡೆಯಿತು.
    ಪರೀಕ್ಷೆಗೆ ನೋಂದಣಿಯಾಗಿದ್ದ ಒಟ್ಟು 20,791 ವಿದ್ಯಾರ್ಥಿಗಳಲ್ಲಿ 20,636 ವಿದ್ಯಾರ್ಥಿಗಳುಹಾಜರಾಗಿದ್ದರು. 155 ಮಂದಿ ಗೈರಾದರು. ಪರೀಕ್ಷಾ ಕೇಂದ್ರಗಳ ಹೊರಗೆ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಹಾಕಿ ಒಳಬಿಡಲಾಯಿತು.
    ಮಾತು ಮತ್ತು ಕಿವಿ ನ್ಯೂನ್ಯತೆಯುಳ್ಳ ಮಕ್ಕಳಿಗೆ ಬಾಲಕರ ಸರ್ಕಾರಿ ಪ್ರೌಢಶಾಲೆ, ಅಂಧರಿಗೆ ವೀರಮದಕರಿನಾಯಕ ವೃತ್ತದಲ್ಲಿನ ದುರ್ಗಾಂಬಿಕಾ ಶಾಲೆ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸರಸ್ವತಿ ನಗರದ ಕೆಎಸ್‌ಎಸ್ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು.
    ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯಲ್ಲಿ ಪರೀಕ್ಷೆಯಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಡಿಡಿಪಿಐ ಜಿ.ಆರ್.ತಿಪ್ಪೇಶಪ್ಪ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts