More

    ಎಸ್ಸೆಸ್ಸೆಲ್ಸಿಗೆ 15 ನಿಮಿಷ ಹೆಚ್ಚು ಟೈಮ್

    • ಬೀದರ್: ಮಾರ್ಚ್​ 27ರಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ವಿವಿಧ ಕ್ರಮಗಳು ಕೈಗೊಳ್ಳುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಈ ಸಲ ಪರೀಕ್ಷಾ ನಡೆಯುವ ಕೇಂದ್ರಗಳ ಪ್ರತಿ ಕೋಣೆಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಪ್ರಶ್ನೆಪತ್ರಿಕೆ ಓದಲು ಹೆಚ್ಚುವರಿಯಾಗಿ 15 ನಿಮಿಷ ಕಾಲವಕಾಶ ನೀಡಿದೆ.
      ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ಪರೀಕ್ಷೆ ಪ್ರಾರಂಭದಲ್ಲಿ ಅವಕಾಶ ನೀಡಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ 3 ಗಂಟೆ ಬರೆಯಲು ಮತ್ತು 15 ನಿಮಿಷ ಪ್ರಶ್ನೆ ಪತ್ರಿಕೆ ಓದಲು ಹಾಗೂ ದ್ವಿತೀಯ, ತೃತೀಯ ಭಾಷೆಗೆ 2 ಗಂಟೆ 45 ನಿಮಿಷ ಬರೆಯಲು ಮತ್ತು 15 ನಿಮಿಷ ಓದಲು ಪರೀಕ್ಷಾ ಮಂಡಳಿ ಸಮಯ ನಿಗದಿಪಡಿಸಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.45 ರವರೆಗೆ ಹಾಗೂ ದ್ವಿತೀಯ, ತೃತೀಯ ಭಾಷೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ರವರೆಗೆ ಸಮಯ ನೀಡಲಾಗಿದೆ.
      ಬೀದರ್ ಜಿಲ್ಲೆಯಲ್ಲಿ 99 ಪರೀಕ್ಷಾ ಕೇಂದ್ರ ಸ್ಥಾಪಿಸಿದ್ದು, ಬಹುತೇಕ ಎಲ್ಲ ಕಡೆ ಸಿಸಿ ಕ್ಯಾಮರಾ ಅಳವಡಿಕೆ ವ್ಯವಸ್ಥೆ ಇದೆ. ಕ್ಯಾಮರಾ ವ್ಯವಸ್ಥೆ ಇರುವ ಶಾಲೆಗಳನ್ನು ಕೇಂದ್ರವಾಗಿ ಮಾಡಲಾಗಿದೆ. ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 500ಕ್ಕೂ ಅಧಿಕ ಶಾಲೆಗಳ 26,809 (ಹೊಸ, ಪುನರಾವರ್ತಿ ತ, ಖಾಸಗಿ ಸೇರಿ) ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 99 ಕೇಂದ್ರಗಳ ಪೈಕಿ 3 ಸೂಕ್ಷ್ಮೂ ಹಾಗೂ 2 ಅತಿ ಸೂಕ್ಷ್ಮ ಕೇಂದ್ರ ಗುರುತಿಸಲಾಗಿದೆ.
      ಪರೀಕ್ಷಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ಸ್ಥಾನಿಕ ಜಾಗೃತದಳದ ತಂಡದ ಸದಸ್ಯರು, ಕೊಠಡಿ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ. ಪರೀಕ್ಷಾ ಕರ್ತವ್ಯದ ಸಂದರ್ಭದಲ್ಲಿ ತಮ್ಮ ಮೊಬೈಲ್ಗಳನ್ನು ಕೇಂದ್ರದ ಮುಖ್ಯಅಧೀಕ್ಷಕರ ಸುಪರ್ದಿಗೆ ವಹಿಸಬೇಕು. ಪರೀಕ್ಷೆ ಮುಗಿದು ಉತ್ತರಪತ್ರಿಕೆ ಬಂಡಲ್ ಮಾಡುವವರೆಗೂ ಯಾವುದೇ ಕಾರಣಕ್ಕೂ ಮೊಬೈಲ್ ನೀಡಬಾರದು ಎಂದೂ ನಿರ್ದೇಶನ ನೀಡಲಾಗಿದೆ.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ ಮತ್ತು ಸುವ್ಯವಸ್ಥಿತ ನಡೆಸುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಕೇಂದ್ರಕ್ಕೆ ಸ್ಥಾನಿಕ ಜಾಗೃತ ದಳ, ಕಸ್ಟಡಿಯನ್ ಸೇರಿ ಅಕ್ರಮ ತಡೆಗೆ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಪರೀಕ್ಷೆ ಪಾರದರ್ಶಕ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
    |ಶಿವಕುಮಾರ ಸ್ವಾಮಿ
    ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts