More

    ಎಸ್ಸೆಸ್‌ಗೆ ಸಿಎಂ ಸ್ಥಾನ ನೀಡಲು  ವೀರಶೈವ ಮಹಾಸಭಾ ಆಗ್ರಹ 

    ದಾವಣಗೆರೆ: ರಾಜ್ಯದಲ್ಲಿ 39 ವೀರಶೈವ ಲಿಂಗಾಯತ ಶಾಸಕರು ಚುನಾಯಿತರಾದ ಹಿನ್ನೆಲೆಯಲ್ಲಿ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್ ಕಾಂಗ್ರೆಸ್ ವರಿಷ್ಠರಲ್ಲಿ ಆಗ್ರಹಿಸಿದ್ದಾರೆ.
    ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಹಾಗೂ ಎಂ.ಬಿ.ಪಾಟೀಲ್ ಮೂವರಿಗೂ ಡಿಸಿಎಂ ಆಗುವ ಅರ್ಹತೆ ಇದೆ. ಎಸ್ಸೆಸ್ ಅವರಿಗೆ ಸಿಎಂ ಸ್ಥಾನ ನೀಡದಿದ್ದಲ್ಲಿ ಈ ಮೂವರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಉಳಿದಂತೆ 8ರಿಂದ 9 ಶಾಸಕರಿಗೆ ಸಚಿವ ಸ್ಥಾನಮಾನ ನೀಡಬೇಕೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
    ಕರ್ನಾಟಕದಲ್ಲಿ 2 ಕೋಟಿ ವೀರಶೈವರಿದ್ದೇವೆ. ನಂತರ ಮಹಾರಾಷ್ಟ್ರದಲ್ಲಿ ನಮ್ಮ ಜನಸಂಖ್ಯೆ ಇದೆ. ನಮ್ಮ ಸಮಾಜಕ್ಕೆ ಪ್ರಾತಿನಿಧ್ಯವನ್ನು ಕರ್ನಾಟಕದಲ್ಲಿ ಕೇಳದೆ ಉತ್ತರಪ್ರದೇಶದಲ್ಲಿ ಕೇಳಬೇಕೆ ಎಂದು ಪ್ರಶ್ನಿಸಿದರು.
    ವಿಪಕ್ಷ ಸ್ಥಾನವನ್ನು ಸಹ ಬಿಜೆಪಿ ಹೈಕಮಾಂಡ್ ಬಸವರಾಜ ಬೊಮ್ಮಾಯಿ ಅವರಿಗೆ ನೀಡಬೇಕೆಂದು ಮಹಾಸಭಾ ಆಗ್ರಹಿಸಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿ.ಜೆ. ರಮೇಶ್, ಕರೇಶಿವಪ್ಳ ಸಿದ್ದೇಶ್, ಐಗೂರು ಚಂದ್ರಶೇಖರ್, ಬಳ್ಳಾಪುರ ವಿಶ್ವನಾಥ, ಕೊರಟಿಕೆರೆ ಶಿವಕುಮಾರ್, ನಿರ್ಮಲಾ ಸುಭಾಷ್ ಇದ್ದರು.
    ———–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts