More

    ಎಸಿ ಕಚೇರಿ ಸಾಮಗ್ರಿ ಜಪ್ತಿ

    ಚಿಕ್ಕೋಡಿ ಗ್ರಾಮೀಣ: ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿ ಗುರುವಾರ ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿ ವಾಹನ ಹಾಗೂ ವಿವಿಧ ಸಾಮಗ್ರಿಗಳನ್ನು ಗುರುವಾರ ಜಪ್ತಿ ಮಾಡಿದರು. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ರಸ್ತೆ ನಿರ್ಮಾಣಕ್ಕೆಂದು ಸರ್ಕಾರ 15 ವರ್ಷಗಳ ಹಿಂದೆ ಖಾಸಗಿ ಜಮೀನು ಪಡೆದು, ಜಮೀನಿನ ಮಾಲೀಕನಿಗೆ ಪರಿಹಾರ ನೀಡದಿರುವ ಕಾರಣಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ವಾಹನ ಹಾಗೂ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಚಿಕ್ಕೋಡಿ ತಾಲೂಕಿನ ಮಾಂಗೂರ ಗ್ರಾಮದ ನಿವಾಸಿ ಬುದ್ದಿರಾಜ ಶಾಂತಿನಾಥ ಪಾಟೀಲ ಎಂಬುವವರ ಜಮೀನನ್ನು ಸರ್ಕಾರ ಪಡೆದಿತ್ತು. ಪರಿಹಾರ ನೀಡದ ಕಾರಣ ಬುದ್ದಿರಾಜ ಅವರು ನ್ಯಾಯಾಲಯ ಮೊರೆ ಹೋಗಿದ್ದರು. 2021ರಲ್ಲಿ ಬುದ್ದಿರಾಜ ಅವರಿಗೆ 11,70,757 ರೂ. ಪರಿಹಾರ ನೀಡುವಂತೆ ಚಿಕ್ಕೋಡಿ ನ್ಯಾಯಾಲಯ ಆದೇಶ ಮಾಡಿತ್ತು. ಆದೇಶವಾಗಿ ವರ್ಷ ಕಳೆದರೂ ಪರಿಹಾರ ನೀಡದಿರುವ ಕಾರಣ, ಉಪವಿಭಾಗಾಧಿಕಾರಿ ಕಚೇರಿ ಸಾಮಗ್ರಿಗಳು, ವಾಹನ, ಲೋಕೋಪಯೋಗಿ ಇಲಾಖೆ ವಾಹನವನ್ನು ಸಹ ಜಪ್ತಿ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts