More

    ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದ ಬಾಪುಗೌಡರು

    ಶಹಾಪುರ : ದೂರದೃಷ್ಟಿ ಮತ್ತು ಜನಪರ ಕಾಳಜಿಯಿಂದ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ದಿ.ಬಾಪುಗೌಡ ದರ್ಶನಾಪುರ ಅವರು ಪ್ರೇರಕ ಶಕ್ತಿಯಾಗಿದ್ದರು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಹೇಳಿದರು.

    ಶ್ರೀ ಚರಬಸವೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ದಿ.ಬಾಪುಗೌಡ ದರ್ಶನಾಪುರ ಅವರ ೩೫ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದ ಅವರು, ಬಾಪುಗೌಡರು ಸಗರನಾಡಿನ ರೈತರ ಭೂಮಿಗೆ ನೀರುಣಿಸುವ ಮಹತ್ವದ ಕಾರ್ಯಕ್ಕೆ ಪಟ್ಟ ಶ್ರಮದಿಂದ ಇಂದು ಈ ಭಾಗದ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ. ದಿ.ಬಾಪುಗೌಡರು ದೀನ ದುರ್ಬಲರ, ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ಹೊಂದಿದ ನಾಯಕರಾಗಿದ್ದರು ಎಂಬುದಕ್ಕೆ ನಾವೆಲ್ಲರೂ ಉನ್ನತ ಸ್ಥಾನಕ್ಕೆ ತಲುಪಿರುವುದೇ ನಿದರ್ಶನವಾಗಿದೆ ಎಂದರು.

    ವಲಯ ಸಾಹಿತ್ಯ ಪರಿಷತ್ ಅಧÀ್ಯಕ್ಷ, ಹಿರಿಯ ಸಹಕಾರಿ ಧುರೀಣ ಲಿಂಗಣ್ಣ ಪಡಶೆಟ್ಟಿ ಮಾತನಾಡಿ, ಬಾಪುಗೌಡರು ಶಿಕ್ಷಣವೇ ಮೂಲಮಂತ್ರವೆAಬ ಚಿಂತನೆಯಿAದ ಮಹಿಳಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅರಿವಿನ ಬೆಳಕು ನೀಡಿದ ಪುಣ್ಯಪುರುಷರಾಗಿದ್ದರು. ಆದರ್ಶ ರಾಜಕಾರಣಿಯಾಗಿ, ಶಿಕ್ಷಣ ತಜ್ಞರಾಗಿ, ಎಲ್ಲರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದಿದ್ದಾರೆ ಎಂದು ಸ್ಮರಿಸಿದರು.

    ಶ್ರೀ ಚರಬಸವೇಶ್ವರ ಸಂಸ್ಥಾನ ಮಠದ ಶ್ರೀ ಬಸವಯ್ಯ ಶರಣರು, ನಗನೂರಿನ ಶ್ರೀ ಶರಣಪ್ಪ ಶರಣರು, ಕಂಭಾವಿ ಶ್ರೀ ಚನ್ನಬಸವ ಶಿವಾಚಾರ್ಯ, ಹೆಗ್ಗಣದೊಡ್ಡಿಯ ಶ್ರೀಗಳು, ನಾಗನಟಗಿಯ ಶ್ರೀಗಳು, ಹಿರಿಯ ಧುರೀಣ ಬಸವರಾಜಪ್ಪಗೌಡ ದರ್ಶನಾಪುರ, ಜಿಲ್ಲೆ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಭೀಮರಡ್ಡಿ ಭೈರಡ್ಡಿ, ಶರಣಪ್ಪ ಸಲಾದಪುರ, ಶಂಕ್ರಣ್ಣ ವಣಿಕ್ಯಾಳ, ಸನ್ನಿಗೌಡ ಪಾಟೀಲ್ ತುನ್ನೂರು, ಸೋಮಶೇಖರ ಗೋನಾಯಕ, ಮರಿಗೌಡ ಹುಲ್ಕಲ್, ರಾಜಶೇಖರ ಪಾಟೀಲ್ ವಜ್ಜಲ, ಮಾನಸಿಂಗ್ ಚವ್ಹಾಣ್, ಬಸವರಾಜಪ್ಪಗೌಡ ತಂಗಡಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ, ಹಿರಿಯರಾದ ಮಾಣಿಕರೆಡ್ಡಿ ಗೋಗಿ, ವಿನೋದ ಪಾಟೀಲ್, ಸೋಮಶೇಖರ, ಬಸವರಾಜಪ್ಪಗೌಡ ವಡಗೇರಾ, ಸಿದ್ದಲಿಂಗಣ್ಣ ಆನೇಗುಂದಿ, ಬಸನಗೌಡ ಸುಬೇದಾರ, ಇಬ್ರಾಹಿಂ ಶಿರವಾಳ, ವಸಂತಕುಮಾರ ಸುರಪುರ, ಶಿವುಮಹಾಂತ ಚಂದಾಪುರ, ಸಯ್ಯದ್ ಮುಸ್ತಫಾ ದರ್ಬಾನ್, ಸುರೇಶ ಸಜ್ಜನ್ ಇತರರಿದ್ದರು.

    ಹಿರಿಯ ಮುಖಂಡ ಘೇವರಚಂದ ಜೈನ್ ಪ್ರಾಸ್ತಾವಿಕ ಮಾತನಾಡಿದರು, ಪ್ರಾಚಾರ್ಯ ಶಿವಲಿಂಗಣ್ಣಗೌಡ ಸಾಹು ವಂದಿಸಿದರು. ಶಿಕ್ಷಕ ಅರುಣಕುಮಾರ ಜೇವರ್ಗಿ ನಿರೂಪಣೆ ಮಾಡಿದರು.

    ಭೀ.ಗುಡಿ ವೃತ್ತದಲ್ಲಿರುವ ದಿ.ಬಾಪುಗೌಡ ಪುತ್ಥಳಿಗೆ ದರ್ಶನಾಪುರ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು ಗೌರವಸಮರ್ಪಣೆ ಸಲ್ಲಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚರಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts