More

    ಎಲ್ಲರ ಮನದಲ್ಲೂ ಹಾರಲಿ ರಾಷ್ಟ್ರಧ್ವಜ

    ಹುಲಸೂರು: ಬರುವ 13ರಿಂದ 15ರವರೆಗೆ ಮನೆ ಮೇಲೆ ರಾಷ್ಟ್ರೀಯ ಧ್ವಜ ಹಾರಿಸುವುದರ ಜತೆಗೆ ಎಲ್ಲರ ಮನಸ್ಸಿನಲ್ಲೂ ತಿರಂಗಾ ಧ್ವಜ ಹಾರಬೇಕು ಎಂದು ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.

    ಪಟ್ಟಣದ ಅಲ್ಲಂಪ್ರಭು ಶೂನ್ಯ ಪೀಠ ಅನುಭವ ಮಂಟಪದ ಪರಿಸರದಲ್ಲಿ ಕಂದಾಯ ಇಲಾಖೆ ಮತ್ತು ಗ್ರಾಪಂ ವತಿಯಿಂದ ಶುಕ್ರವಾರ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಸ್ವಾತಂತೊ್ರೃತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಅವರು, ಮೊದಲು ರಾಷ್ಟ್ರೀಯ ಧ್ವಜವನ್ನು ಸಕರ್ಾರಿ ಕಚೇರಿಗಳ ಮೇಲೆ ಮಾತ್ರ ಹಾರಿಸಲಾಗುತ್ತಿತ್ತು. ಆದರೆ ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಅಷ್ಟೇ ಅಲ್ಲ, ವಿಶ್ವದ ಎಲ್ಲ ರಾಷ್ಟ್ರಗಳಲ್ಲಿ ವಾಸಿಸುವ ಭಾರತೀಯರಿಗೆ ತಮ್ಮ ಮನೆ ಮೇಲೆ ಧ್ವಜ ಹಾರಿಸುವ ಸಂದೇಶ ನೀಡಿರುವುದು ಸಂತಸ ತಂದಿದೆ ಎಂದರು.

    ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹಾನ್ ಪುರುಷರ ನೆನಪು ಮಾಡುವುದು ಅವಶ್ಯಕವಾಗಿದೆ. ಮಕ್ಕಳಿಗೆ ಅವರ ಚರಿತ್ರೆ ಮತ್ತು ಹೋರಾಟದ ಬಗ್ಗೆ ಪಾಲಕರು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

    ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಸಕರ್ಾರಿ ಕಚೇರಿ, ಸಂಘ-ಸಂಸ್ಥೆಗಳು ಸೇರಿದಂತೆ ತಾಲೂಕಿನ ಸಾರ್ವಜನಿಕರು ತಮ್ಮ ಮನೆಯ ಮೇಲೆ 13ರಂದು ಬೆಳಗ್ಗೆ ಧ್ವಜಾರೋಹಣ ಮಾಡಬೇಕು. ಅದು 15ರವರೆಗೆ ಇಳಿಸದೆ ಹಾಗೆ ಇರಬೇಕು. ಈಗಾಗಲೇ ಗ್ರಾಪಂ ಮಟ್ಟದಲ್ಲಿ ಸ್ವ-ಸಹಾಯ ಸಂಘದ ಸದಸ್ಯರು ತಿರಂಗಾ ಧ್ವಜ ತಯಾರಿಸಿ ವಿತರಿಸುತ್ತಿದ್ದಾರೆ. ಅವುಗಳನ್ನು ಮೊದಲೇ ಪಡೆದು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

    ಜಿಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ ಮಾತನಾಡಿದರು. ತಾಪಂ ಇಒ ಮಹಾದೇವ ಬಾಬಳಗೆ, ಎಡಿ ಮಹಾದೇವ ಜಮ್ಮು, ಬಿಇಒ ಸಿಜೆ ಹಳ್ಳದ, ಉಪ ತಹಸೀಲ್ದಾರ್ ಸಂಜುಕುಮಾರ ಬೈರೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಉಪಾಧ್ಯಕ್ಷೆ ಸರಸ್ವತಿ ಬಾಲಕುಂದೆ, ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ, ಪಿಎಸ್ಐ ನಿಂಗಪ್ಪ ಮಣ್ಣೂರ, ಪ್ರಮುಖರಾದ ರಾಜಪ್ಪ ನಂದೊಡೆ, ಸೂರ್ಯಕಾಂತ ಅಡಕೆ, ಡಾ.ಆರಿಫೋದಿನ್, ರವೀಂದ್ರ ಭೋಪಳೆ, ಸೂರ್ಯಕಾಂತ ಪಾಟೀಲ್, ಭೀಮಾಶಂಕರ ಆದೆಪ್ಪ, ಜಗನ್ನಾಥ ದೇಟ್ನೆ, ರಣಜಿತ್ ಗಾಯಕವಾಡ, ಮಲ್ಲಿಕಾಜರ್ುನ ಕಾಂಬಳೆ, ರಾಜನಾಳೆ ಶಿವಕುಮಾರ, ಸಂಗಮೇಶ ಭೋಪಳೆ ಇತರರಿದ್ದರು.

    ಸೈಕಲ್ ಜಾಥಾ ಪಟ್ಟಣದ ಅಲಂಪ್ರಭು ಶೂನ್ಯ ಪೀಠ ಅನುಭವ ಮಂಟಪದಿಂದ ಪ್ರಾರಂಭವಾಗಿ ಮುಖ್ಯರಸ್ತೆ ಮಾರ್ಗವಾಗಿ ಗಾಂಧಿ ವೃತ್ತ ಮೂಲಕ ಪೊಲೀಸ್ ಠಾಣೆವರೆಗೆ ಜರುಗಿತು. ವಿವಿಧ ಶಾಲೆ ಮಕ್ಕಳು ಸಮವಸ್ತ್ರದಲ್ಲಿ ಪಾಲ್ಗೊಂಡಿದ್ದರು. ರೈತರೊಬ್ಬರು ಬಂಡಿ ಮತ್ತು ಎತ್ತುಗಳನ್ನು ಸಿಂಗರಿಸಿ ಜಾಥಾದಲ್ಲಿ ಮೆರವಣಿಗೆ ಮಾಡಿದ್ದು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts