More

    ಎಲ್ಲರಿಗೂ ಸೌಲಭ್ಯ ಸಿಗಲು ಸಹಕಾರ ನೀಡಿ

    ಹುಣಸೂರು: ವಿವಿಧ ನಿಗಮಗಳ ಯೋಜನೆಗಳಡಿ ಶಾಸಕ ಎಚ್.ಪಿ. ಮಂಜುನಾಥ್ 102 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಿದರು.


    ಗುರುವಾರ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸವಲತ್ತು ವಿತರಿಸಿ ಮಾತನಾಡಿ, ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಗಳು ಈ ಸವಲತ್ತುಗಳನ್ನು ಪಡೆದು ಸದುಪಯೋಗಪಡಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಅಭಿವೃದ್ಧಿಯಾಗುವುದರೊಂದಿಗೆ ಇತರರಿಗೆ ಪ್ರೇರಣೆಯಾಗಬೇಕು. ಸವಲತ್ತುಗಳನ್ನು ಪಡೆದವರೇ ಮತ್ತೆ ಮತ್ತೆ ಪಡೆಯದೆ, ಎಲ್ಲರಿಗೂ ಸಮಾನವಾಗಿ ಸಿಗಲು ಸಹಕಾರ ನೀಡಬೇಕು ಎಂದು ಹೇಳಿದರು.


    ಕಾರ್ಯಕ್ರಮದಲ್ಲಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದ ಅಧಿಕಾರಿ ಪರಮೇಶ್ವರಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ನಾಗರಾಜ್ ಇತರರು ಇದ್ದರು.


    ಸವಲತ್ತುಗಳು ಏನೇನು?: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ವರ್ಗಗಳ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ 28 ಫಲಾನುಭವಿಗಳಿಗೆ ಪಂಪು ಮತ್ತು ಮೋಟರ್ ಹಾಗೂ ಪೂರಕ ಸಾಮಗ್ರಿಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 20 ಜನರಿಗೆ ದ್ವಿಚಕ್ರವಾಹನ, ಭೋವಿ ಅಭಿವೃದ್ಧಿ ನಿಗಮದಿಂದ 20 ಜನರಿಗೆ, ಆದಿಜಾಂಬವ ಅಭಿವೃದ್ಧಿ ನಿಗಮದಿಂದ 10 ಸೇರಿದಂತೆ 70 ಜನರಿಗೆ ದ್ವಿಚಕ್ರವಾಹನ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 4 ಜನರಿಗೆ ಆಟೋ ಸೇರಿದಂತೆ ಒಟ್ಟು 102 ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts