More

    ಎರಡನೇ ದಿನವೂ ನೋ ಕರೊನಾ

    ಕಲಬುರಗಿ: ಶುಕ್ರವಾರವೂ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ. ಬದಲಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಗುಣಮುಖಗಿದ್ದಾರೆ. ಈ ಮೂಲಕ ಡಿಸ್ಚಾಚಾರ್ಜ ಆದವರ ಸಂಖ್ಯೆ 60 ಆಗಿದ್ದು, 67 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರದಂತೆಯೇ ಶುಕ್ರವಾರವೂ ಒಂದೂ ಪ್ರಕರಣ ದಾಖಲಾಗದಿರುವುದು ಜಿಲ್ಲೆ ಜನ ಮತ್ತು ಅಧಿಕಾರಿಗಳಲ್ಲಿ ನೆಮ್ಮದಿ ಮೂಡಿಸಿದೆ.
    ಶುಕ್ರವಾರ ಮೋಮಿನಪುರದ 41 ವರ್ಷದ ಪುರುಷ (ಪಿ-604), ಗಾಜಿಪುರದ 52 ವರ್ಷದ ಪುರುಷ (ಪಿ-679), ಕರೀಂ ನಗರದ 35 ವರ್ಷದ ಯುವಕ (ಪಿ-697), ಇಸ್ಲಾಮಾಬಾದ್ ಕಾಲನಿಯ 36 ವರ್ಷದ ಮಹಿಳೆ(ಪಿ-698) ಮತ್ತು 41 ವರ್ಷದ ಪುರುಷ (ಪಿ-699) ಸೋಂಕಿನ ವಿರುದ್ಧ ಹೋರಾಡಿ ನಗುಮೊಗದೊಂದಿಗೆ ಡಿಸ್ಚಾಜರ್್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. ಈವರೆಗೆ ಸೋಂಕಿತ 134 ರೋಗಿಗಳಲ್ಲಿ 7 ಜನ ಮೃತಪಟ್ಟಿದ್ದು, 60 ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 69 ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.
    ಈವರೆಗೆ 6370 ಶಂಕಿತರ ರಕ್ತ, ಕ ಮಾದರಿ ಟೆಸ್ಟ್ಗೆ ಕಳುಹಿಸಿದ್ದು, 6136 ಜನರ ನೆಗೆಟಿವ್ ರಿಪೋಟರ್್ ಬಂದಿದೆ. 162 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. 27 ಕಂಟೇನ್ಮೆಂಟ್ ಜೋನ್ಗಳಲ್ಲಿ 21 ಸಕ್ರಿಯವಾಗಿದ್ದು, ಇವುಗಳಲ್ಲಿ 49631 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರೈಮರಿ ಕಾಂಟ್ಯಾಕ್ಟ್ಸ್ 1031, ಸೆಕೆಂಡರಿ ಕಾಂಟ್ಯಾಕ್ಟ್ಸ್ 3359, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದೆ. ಹೋಂ ಕ್ವಾರಂಟೈನ್ನಲ್ಲಿ 995 ಜನರನ್ನು ಇರಿಸಲಾಗಿದೆ. ಈವರೆಗೆ 28 ದಿನ ಹೋಂ ಕ್ವಾರಂಟೈನ್ನಲ್ಲಿದ್ದ 1622, 14 ದಿನದ ಅವಧಿ ಮುಗಿಸಿದ 1817 ಜನರನ್ನು ಮುಕ್ತಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts