More

    ಎಪಿಎಂಸಿ ಸೆಸ್ ರದ್ದುಗೊಳಿಸಲು ಆಗ್ರಹ

    ಮುಂಡರಗಿ: ಎಪಿಎಂಸಿ ಸೆಸ್ ಅನ್ನು ಸಂಪೂರ್ಣವಾಗಿ ತಗೆದು ಹಾಕಬೇಕು ಎಂದು ಒತ್ತಾಯಿಸಿ ಪಟ್ಟಣದ ಎಪಿಎಂಸಿ ವರ್ತಕರು ಸೋಮವಾರ ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಎಪಿಎಂಸಿ ವರ್ತಕರ ಪ್ರತಿನಿಧಿ ಕೊಟ್ರೇಶ ಅಂಗಡಿ ಮಾತನಾಡಿ, ಹೊರಗಿನಿಂದ ಆಗಮಿಸುವ ವ್ಯಾಪಾರಸ್ಥರಿಂದ ಸೆಸ್ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲಿಯ ವರ್ತಕರಿಗೆ ಸೆಸ್ ವಿಧಿಸಲಾಗುತ್ತಿದೆ. ಇದರಿಂದಾಗಿ ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ. ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್​ನ ತೀರ್ವನದಂತೆ ಅನಿರ್ಧಿಷ್ಟ ಅವಧಿವರೆಗೆ ವ್ಯಾಪಾರ ವಹಿವಾಟು ಬಂದ್ ಮಾಡಲು ಎಲ್ಲ ವರ್ತಕರು ನಿರ್ಧರಿಸಿದ್ದಾರೆ. ಬೇಡಿಕೆ ಈಡೇರಿಸುವರೆಗೂ ಎಪಿಎಂಸಿ ವ್ಯಾಪಾರ ವಹಿವಾಟು ಆರಂಭಿಸಲಾಗುವುದಿಲ್ಲ ಎಂದು ತಿಳಿಸಿದರು.

    ಎಪಿಎಂಸಿ ಕಾರ್ಯದರ್ಶಿ ದೀಪಾ ಪಾಟೀಲ ಮನವಿ ಸ್ವೀಕರಿಸಿ, ವರ್ತಕರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ವೀರಣ್ಣ ಬೇವಿನಮರದ, ಉಪಾಧ್ಯಕ್ಷ ಗೌತಮಚಂದ್ ಚೋಪ್ರಾ, ಕಾರ್ಯದರ್ಶಿ ವೆಂಕಟೇಶ ಹೆಗ್ಗಡಾಳ, ಬಸವರಾಜ ಗೋಡಿ, ಪವನ ಚೋಪ್ರಾ, ಪ್ರಶಾಂತ ತಾವರಗೇರಿ, ನಾಗರಾಜ ಹೆಗ್ಗಡಾಳ, ವೀರಣ್ಣ ಮೇಟಿ, ಅಂದಪ್ಪ ಶಿವಶೆಟ್ಟರ, ಖಾಸಿಂಸಾಬ್ ಹರಿವಾಣ, ಮುದಕಣ್ಣ ಬೆಟಗೇರಿ, ಎಂ.ಬಿ. ಗೋಡಿ, ವೀರೇಶ ಬೆಟಗೇರಿ,ನಾರಾಯಣಪ್ಪ ತಾವರಗೇರಿ, ಅಬೀಬ್ ಚಿನ್ನೂರ, ಸೋಮಣ್ಣ ತಾಮ್ರಗುಂಡಿ ಉಪಸ್ಥಿತರಿದ್ದರು.

    ಸೆಸ್ ಕೈಬಿಡಲು ಮನವಿ

    ಲಕ್ಷ್ಮೇಶ್ವರ: ಎಪಿಎಂಸಿ ಸೆಸ್ ವ್ಯವಸ್ಥೆ ವಿರೋಧಿಸಿ ಅನಿರ್ದಿಷ್ಟಾವಧಿವರೆಗೆ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡುವಂತೆ ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯು ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಸ್ಥಳೀಯ ಎಪಿಎಂಸಿ ವ್ಯಾಪಾರ-ವಹಿವಾಟು ಬಂದ್ ಮಾಡಿದ ವರ್ತಕರು ಸೆಸ್ ರದ್ದು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಕೇಂದ್ರ ಸರ್ಕಾರ ಒಂದು ದೇಶ ಒಂದು ತೆರಿಗೆ ಜಾರಿಗೆ ತಂದಿದ್ದರೂ ರಾಜ್ಯ ಸರ್ಕಾರ ಎಪಿಎಂಸಿ ವ್ಯಾಪಾರಸ್ಥರಿಗೆ ತೆರಿಗೆ ವಿಧಿಸುತ್ತಿದೆ. ಆದರೆ, ಎಪಿಎಂಸಿ ಹೊರಗಡೆ ವ್ಯಾಪಾರ-ವಹಿವಾಟು ಮಾಡುವ ವ್ಯಾಪಾರಸ್ಥರಿಗೆ ಯಾವುದೇ ಮಾರುಕಟ್ಟೆ ಸೆಸ್ ಇರುವುದಿಲ್ಲ. ಇಡೀ ಮಾರುಕಟ್ಟೆ ವಹಿವಾಟಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದ್ದರಿಂದ ರಾಜ್ಯ ಸರ್ಕಾರ ಸೆಸ್ ಅನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು. ಎಪಿಎಂಸಿ ವರ್ತಕರ ಸಂಘದ ಕಾರ್ಯದರ್ಶಿ ಎಸ್.ಕೆ. ಕಾಳಪ್ಪನವರ, ನಿರ್ದೇಶಕರಾದ ಗುರುಪಾದಯ್ಯ ಗಡ್ಡದೇವರಮಠ, ಸುಭಾಸ ಓದುನವರ, ಮಹದೇವಪ್ಪ ರಗಟಿ, ಬಸವರಾಜ ಮಹಾಂತಶೆಟ್ಟರ್, ಬಸವರಾಜ ಅಂಗಡಿ, ತೋಂಟೇಶ ಮಾನ್ವಿ, ಸಂತೋಷ ಬಾಳಿಕಾಯಿ, ಸತೀಶ ಪಾಟೀಲ, ಬಸವರಾಜ ನರೇಗಲ್, ಈರಣ್ಣ ಅಕ್ಕೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts