More

    ಎಪಿಎಂಸಿಯಲ್ಲಿ ಚಿಲ್ಲರೆ ವಹಿವಾಟು ಸಂಕಟ

    ಹುಬ್ಬಳ್ಳಿ: ಲಾಕ್​ಡೌನ್ ಮತ್ತಷ್ಟು ಬಿಗಿಗೊಳಿಸಿದ್ದರಿಂದ ಎರಡು ದಿನದಿಂದ ಭಾಗಶಃ ವಾಣಿಜ್ಯ ನಗರಿ ಸ್ತಬ್ಧಗೊಂಡಿದ್ದರೂ, ಇಲ್ಲಿನ ಅಮರಗೋಳ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾತ್ರ ಭಾನುವಾರ ಜನಜಾತ್ರೆ ಕಂಡುಬಂತು. ಚಿಲ್ಲರೆ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿದ್ದರಿಂದ ಜನರು ಕಾರು, ಆಟೋ, ಟಂಟಂನಲ್ಲಿ ಕುಟುಂಬ ಸಮೇತರಾಗಿ ಬಂದು ದಿನಸಿ ಸಾಮಗ್ರಿಗಳ ಖರೀದಿಗೆ ಮುಗಿಬೀಳುತ್ತಿದ್ದಾರೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ, ಹಣ್ಣು, ಕಿರಾಣಿ ಸಾಮಗ್ರಿಗಳು ಸೇರಿ ಬಹುತೇಕ ವಸ್ತುಗಳು ಹೋಲ್​ಸೇಲ್ ದರದಲ್ಲಿ ಲಭ್ಯ. ಹೋಲ್​ಸೇಲ್ ಮಾರಾಟದ ಜತೆಗೆ ರೀಟೇಲ್ (ಚಿಲ್ಲರೆ) ಮಾರಾಟಕ್ಕೂ ಅವಕಾಶ ಇರುವ ಹಿನ್ನೆಲೆಯಲ್ಲಿ ಭಾನುವಾರ ಜನಜಂಗುಳಿ ಹೆಚ್ಚಾಗಿತ್ತು.

    ಕಿರಾಣಿ ಅಂಗಡಿಗಳ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಎಷ್ಟೇ ಪ್ರಯತ್ನಿಸಿದರೂ ಜನ ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಮೊಂಡುತನ ಪ್ರದರ್ಶಿಸಿದರು.

    ಇನ್ನಾದರೂ ಎಪಿಎಂಸಿ ಆಡಳಿತ ಮಗ್ರಾಹಕರಿಗೆ ಕೂಪನ್ ವ್ಯವಸ್ಥೆ

    ಕಿರಾಣಿ ಸಾಮಗ್ರಿ ಖರೀದಿಗೆ ಬಂದ ಗ್ರಾಹಕರಿಗೆ ವ್ಯಾಪಾರಸ್ಥರು ಕೂಪನ್ ವ್ಯವಸ್ಥೆ ಮಾಡಿದ್ದರು. ಎಲ್ಲರಿಗೂ ಒಂದೊಂದು ನಂಬರ್ ಕೂಪನ್ ನೀಡಿ, ಆ ಸಂಖ್ಯೆ ಕೂಗಿದಾಗ ಒಬ್ಬೊಬ್ಬರೇ ಬಂದು ಖರೀದಿಸಬೇಕು. ಉಳಿದವರು ಹೊರಗೆ ಸಾಮಾಜಿಕ ಅಂತರ ಕಾಯ್ದುಕೊಂಡು ನಿಲ್ಲುವ ವ್ಯವಸ್ಥೆ ಮಾಡಿದ್ದಾರೆ. ಂಡಳಿ ಚಿಲ್ಲರೆ ವಹಿವಾಟಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆ ಮೂಲಕ ಕರೊನಾ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

    ಪೊಲೀಸರಿಗೆ ತಲೆನೋವು: ಭಾನುವಾರ ಬೆಳಗ್ಗೆ 4 ಗಂಟೆಯಿಂದಲೇ ಎಪಿಎಂಸಿ- ನವನಗರ ಠಾಣೆ ಸಿಬ್ಬಂದಿ ಮಾರುಕಟ್ಟೆ ಪ್ರಾಂಗಣದಲ್ಲಿ ಭದ್ರತೆ ಕೈಗೊಂಡಿದ್ದರು. ಬೆಳಗ್ಗೆ 10 ಗಂಟೆವರೆಗೆ ತರಕಾರಿ ವ್ಯಾಪಾರ, ಬೆಳಗ್ಗೆ 10ರಿಂದ 6 ಗಂಟೆವರೆಗೆ ಕಿರಾಣಿ ಸಾಮಗ್ರಿ ಖರೀದಿಗೆ ವ್ಯವಸ್ಥೆ ಮಾಡಲಾಗಿತ್ತು. ತರಕಾರಿ ಖರೀದಿಗೆ ಅಲ್ಲಲ್ಲಿ ಬಾಕ್ಸ್ ನಿರ್ಮಾಣ ಮಾಡಲಾಗಿತ್ತಾದರೂ ಯಾರೂ ಅದನ್ನು ಪಾಲಿಸಲಿಲ್ಲ. ಮೈಮರೆತು ಗುಂಪು ಗುಂಪಾಗಿ ಖರೀದಿಗೆ ಮುಗಿಬಿದ್ದಿದ್ದರು. ಪೊಲೀಸರನ್ನು ಕಂಡಾಗ ದೂರ ಸರಿಯುವ ಜನ ಅವರು ಮರೆಯಾಗುತ್ತಿದ್ದಂತೆ ಮತ್ತೆ ಗುಂಪು ಸೇರುತ್ತಿದ್ದರು. ಇದು ಪೊಲೀಸರ ತಲೆನೋವಿಗೆ ಕಾರಣವಾಗಿತ್ತು.

    ಹಣ್ಣು ವ್ಯಾಪಾರಕ್ಕೆ ಮಂಕು: ಎಪಿಎಂಸಿ ಹಣ್ಣಿನ ಮಾರುಕಟ್ಟೆಯಲ್ಲಿ ವ್ಯಾಪಾರ ಮಂಕಾಗಿತ್ತು. ತರಕಾರಿ, ದಿನಸಿ ಖರೀದಿಗೆ ಇದ್ದ ಆಸಕ್ತಿ ಹಣ್ಣುಗಳ ಖರೀದಿಯಲ್ಲಿ ಕಂಡು ಬರಲಿಲ್ಲ. ಕಲ್ಲಂಗಡಿ, ಕರಬೂಜ, ಚಿಕ್ಕು, ಮೋಸಂಬಿ ಮತ್ತಿತರ ಹಣ್ಣುಗಳು ಲಭ್ಯವಿದ್ದವು. ಕಲ್ಲಂಗಡಿ ಹೆಚ್ಚು ಆವಕವಾಗಿದ್ದು, 1 ಕೆಜಿಗೆ 7 ರೂ. ಬೆಲೆ ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts