More

     ಎನ್​ಡಿಆರ್​ಎಫ್ ನಿಯಮದಂತೆ ಪರಿಹಾರ ವಿತರಣೆ

    ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಮಳೆಯಿಂದ ಹಾನಿಗೊಂಡ ಪ್ರದೇಶಗಳಿಗೆ ತರೀಕೆರೆ ಉಪವಿಭಾಗಾಧಿಕಾರಿ ಸಿದ್ದಲಿಂಗ ರೆಡ್ಡಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಬನ್ನೂರು ಗ್ರಾಪಂ ವ್ಯಾಪ್ತಿಯ ಜನತಾ ಕಾಲನಿಯ ಸುಶೀಲಮ್ಮ, ಮಂಜುನಾಥ್ ಅವರ ಮನೆ ಕುಸಿದ ಸ್ಥಳ, ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಕಾನ್ಕೆರೆ ರಸ್ತೆಯಲ್ಲಿ ಧರೆ ಕುಸಿದು ಹಾನಿಯುಂಟಾದ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗೆ ಹಾನಿಯಾದ ಕುರಿತು ಲೋಕೋಪಯೋಗಿ ಇಲಾಖೆ, ಕೆರೆ ಹಾನಿ ಕುರಿತು ಸಣ್ಣ ನೀರಾವರಿ ಇಲಾಖೆ, ಜಿಪಂ ಇಂಜಿನಿಯರ್ ವಿಭಾಗ ಹಾಗೂ ಗ್ರಾಪಂ ಅಧಿಕಾರಿಗಳು ಪರಿಶೀಲಿಸಿ ವರದಿ ನೀಡುತ್ತಾರೆ. ಮನೆ ಕುಸಿದ ಬಗ್ಗೆ ಗ್ರಾಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವರದಿ ನೀಡಲಿದ್ದು ಕೇಂದ್ರ ಸರ್ಕಾರದ ಎನ್​ಡಿಆರ್​ಎಫ್ ನಿಯಮದಂತೆ ಎ ಮತ್ತು ಬಿ ವರ್ಗಕ್ಕೆ 5ಲಕ್ಷ ರೂ., ಸಿ ವರ್ಗಕ್ಕೆ 3 ಲಕ್ಷ ರೂ., ಡಿ ವರ್ಗಕ್ಕೆ 50 ಸಾವಿರ ರೂ. ಪರಿಹಾರ ವಿತರಿಸಲಾಗುವುದು ಎಂದರು. ಬೆಳೆ ಹಾನಿ ಬಗ್ಗೆ ಮೂರು ವಿಭಾಗ ಮಾಡಿದ್ದು, ಒಣ ಪ್ರದೇಶದ ಬೆಳೆ, ನೀರಾವರಿ ಬೆಳೆ ಹಾಗೂ ತೋಟಗಾರಿಕೆ ಬೆಳೆಗೆ ಹೆಕ್ಟೇರಿಗೆ 12, 23, ಹಾಗೂ 28 ಸಾವಿರ ರೂ. ಪರಿಹಾರ ನೀಡಲಾಗುವುದು. ಹಾನಿಗೊಳಗಾದವರು ಹಾಗೂ ಕೃಷಿಕರು ತೋಟಗಾರಿಕೆ, ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು. ನಾಡಕಚೇರಿ ಉಪ ತಹಸೀಲ್ದಾರ್ ನಾಗೇಂದ್ರ, ಬನ್ನೂರು ಗ್ರಾಪಂ ಅಧ್ಯಕ್ಷೆ ಮಧುರಾ ರಾಜಪ್ಪಗೌಡ, ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಭಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts