More

    ಎಚ್ಡಿಕೆ-ಸಿದ್ದರಾಮಯ್ಯ ಜಾತಿವಾದಿಗಳು

    ಕಲಬುರಗಿ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರು ಜಾತಿವಾದಿಗಳು ಎಂದು ಕಟುವಾಗಿ ಜರಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ನಾವು ಬಿಜೆಪಿಯವರು ರಾಷ್ಟ್ರವಾದಿಗಳು ಎಂದು ಬೆನ್ನುತಟ್ಟಿಕೊಂಡರು.
    ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿರುವ ಶಶೀಲ್ ನಮೋಶಿ ಪರವಾಗಿ ಪ್ರಚಾರ ಕಾರ್ಯತಂತ್ರದ ಭಾಗವಾಗಿ ಬುಧವಾರ ನಗರದ ಗೋಲ್ಡ್ ಹಬ್ನಲ್ಲಿರುವ ಸಭಾಂಗಣದಲ್ಲಿ ಆಯೋಜಿಸಿದ್ದ ಕಲಬುರಗಿ ನಗರ ಮತ್ತು ಗ್ರಾಮಾಂತರ ಹಾಗೂ ಯಾದಗಿರಿ ಜಿಲ್ಲೆಗಳ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಇಬ್ಬರು ಏನೆ ಮಾಡಿದರೂ ಅವರ ಅಭ್ಯರ್ಥಿಗಳು ಗೆಲ್ಲಲ್ಲ ಎಂದರು.
    ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರ ಗುಂಪು ಎಂದು ಕಿತ್ತಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತು, ಸಿಎಂ ಸ್ಥಾನ ಕಳೆದುಕೊಂಡರು ಬುದ್ದಿ ಬರಲಿಲ್ಲ. ಅಲ್ಲದೆ ಇವರಿಬ್ಬರನ್ನು ಇಟ್ಟುಕೊಂಡು, ಇಷ್ಟು ದಿನ ಕಾಂಗ್ರೆಸ್ ಉಳಿದಿದ್ದೆ ಹೆಚ್ಚುಗಾರಿಕೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.
    ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಸೋಲಿಸಿದವರಿಗೆ ಶರಣಪ್ಪ ಮಟ್ಟೂರ ಯಾವ ಲೆಕ್ಕ ಎಂದು ಪ್ರಶ್ನಿಸಿದರು. ಹೀಗಾಗಿ ಎಲ್ಲರೂ ನಿಮಗೆ ನೀಡಿರುವ ಗುರಿಯಂತೆ 20 ಮತದಾರರನ್ನು ಮೇಲಿಂದ ಮೇಲೆ ಭೇಟಿ ಮಾಡಿ ಮತಯಾಚಿಸಿ ಎಂದರು.
    ಅಭ್ಯರ್ಥಿ ಶಶೀಲ್ ನಮೋಶಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ ನಾರಾಯಣ ಮಾತನಾಡಿದರು.
    ಕೆಕೆಆರ್ಡಿಬಿ ಅಧ್ಯಕ್ಷರಾಗಿರುವ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ,ಈಶಾನ್ಯ ಸಾರಿಗೆ ಸಂಸ್ಥೆ ಅದ್ಯಕ್ಷರು ಆಗಿರುವ ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರಾದ ಸುನೀಲ್ ವಲ್ಯಾಪುರೆ, ಬಿ.ಜಿ.ಪಾಟೀಲ,ಡಾ.ಅವಿನಾಶ ಜಾಧವ್, ಬಸವರಾಜ ಮತ್ತಿಮೂಡ, ಚುನಾವಣೆ ಉಸ್ತುವಾರಿ ಅಶೋಕ ಅಲ್ಲಾಪುರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್ ಮಹಾಗಾಂವ, ಕನರ್ಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಮಹಿಳಾ ಅದ್ಯಕ್ಷೆ ಭಾಗೀರಥಿ ಗುನ್ನಪುರ, ಎಪಿಎಂಸಿ ಅಧ್ಯಕ್ಷ ಗುರುಬಸಪ್ಪ (ಅಪ್ಪು) ಕಣಕಿ, ಪಕ್ಷದ ಪದಾಧಿಕಾರಿಗಳಾದ ಸೂರಜ್ ತಿವಾರಿ, ದಯಾಘನ್ ಧಾರವಾಡಕರ್, ದತು ತೂಗಾಂವ, ಶರಣಬಸವಪ್ಪ ಕಾಡಾದಿ, ಶರಣಪ್ಪ ತಳವಾರ ವೇದಿಕೆಯಲ್ಲಿದ್ದರು.
    ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಸ್ವಾಗತಿಸಿದರು. ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾರ್ಯದಶರ್ಿ ಶರಣು ಬೆಳಮಗಿ ನಿರೂಪಣೆ ಮಾಡಿದರು. ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗುರು ಕಾಮ ವಂದಿಸಿದರು.
    ಯುವ ಘಟಕ ಅಧ್ಯಕ್ಷ ಪ್ರವೀಣ ತೆಗನೂರ, ಪ್ರಮುಖರಾದ ಚಂದು ಪಾಟೀಲ್, ಶ್ರೀನಿವಾಸ ದೇಸಾಯಿ, ರಮೇಶ ಧುತ್ತರಗಿ, ವಿಜಯಕುಮಾರ ಹುಲಿ, ಅಶೋಕ ಸಾಹು ಗೋಗಿ, ಬಸವರಾಜ ತಾಳಿಕೋಟಿ, ಮಹೇಶ ರಡ್ಡಿ, ಪ್ರಲ್ಹಾದ ಭಟ್ ಪೂಜಾರಿ, ಅರುಣ ಕುಲಕಣರ್ಿ, ಶಿವಯೋಗಿ ನಾಗಹಳ್ಳಿ, ಗೀತಾ ವಾಡೇಕರ, ಆರತಿ ತಿವಾರಿ, ವಿನೋದ ವಲ್ಲಾಪುರೆ, ಅನೇಕರು ಪಾಲ್ಗೊಂಡಿದ್ದರು.
    ಕಮ್ಯೂನಿಸ್ಟ್ರ ರಾಜ್ಯದಲ್ಲಿಯೇ ಲಾಕ್ಡೌನ್ದಲ್ಲಿ ಶಿಕ್ಷಕರಿಗೆ ಸಂಬಳ ನೀಡಿಲ್ಲ, ಅದರೆ, ರಾಜ್ಯದಲ್ಲಿರುವ ಯಡಿಯೂರಪ್ಪನವರ ಸಕರ್ಾರ ಎಲ್ಲರಿಗೂ ವೇತನ ಜತಗೆ ವಿಶೇಷ ಪ್ಯಾಕೇಜ್ ನೀಡಿದರು. ಸಣ್ಣ ಪುಟ್ಟ ವಿಷಯಕ್ಕೆ ಬಾವುಟ ಹಿಡಿದುಕೊಂಡು ಬರುವ ಕಮ್ಯೂನಿಸ್ಟ್ರು, ಈಗ್ಯಾಕೆ ಮಾತನಾಡುತ್ತಿಲ್ಲ ಎಂಬುದು ಹೇಳಲಿ.
    | ಅಶ್ವಥ ನಾರಾಯಣ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts