More

    ಎಕರೆಗೆ 10 ಕೆ.ಜಿ. ಗೋವಿನಜೋಳ ಬೀಜ ವಿತರಿಸಿ

    ರಟ್ಟಿಹಳ್ಳಿ: ಪ್ರತಿ ಎಕರೆಗೆ ಎರಡು ಪ್ಯಾಕೆಟ್ (10 ಕೆ.ಜಿ.) ಗೋವಿನ ಜೋಳ ಬೀಜ ವಿತರಣೆ ಮಾಡಬೇಕು ಎಂದು ಸ್ಥಳೀಯ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಕೃಷಿ ಇಲಾಖೆ ಒಂದು ಎಕರೆಗೆ ಕೇವಲ 5 ಕೆ.ಜಿ. ಗೋವಿನ ಜೋಳ ಬಿತ್ತನೆ ಬೀಜ ವಿತರಿಸುತ್ತಿದೆ. ಎತ್ತುಗಳ ಮೂಲಕ ಬಿತ್ತನೆ ಮಾಡುವ ಸಂದರ್ಭದಲ್ಲಿ ಪ್ರತಿ ಎಕರೆಗೆ 8 ಕೆ.ಜಿ. ಬೀಜ ಅವಶ್ಯ. ಆದರೆ, ಟ್ರ್ಯಾಕ್ಟರ್ ಕೂರಿಗೆ ಮೂಲಕ ಬಿತ್ತನೆ ಮಾಡಿದರೆ ಸಾಲಿನಿಂದ ಸಾಲಿಗೆ ಅಂತರ ಕಡಿಮೆಯಾಗುವುದರಿಂದ ಎಕರೆಗೆ 10 ಕೆ.ಜಿ. ಬೀಜ ಅವಶ್ಯ. ಇದನ್ನು ಪರಿಗಣಿಸಿ ಕೃಷಿ ಸಚಿವರು ಪ್ರತಿ ಎಕರೆಗೆ 10 ಕೆ.ಜಿ ಬೀಜ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಶಂಕ್ರುಗೌಡ ಶಿರಗಂಬಿ ಮಾತನಾಡಿ, ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು. ಆದರೆ, ಕೃಷಿ ಇಲಾಖೆ ಪ್ರತಿ ಕೆ.ಜಿ. ಬೀಜಕ್ಕೆ ಕೇವಲ 20 ರೂ. ಸಹಾಯಧನ ನೀಡುತ್ತಿರುವುದು ಸರಿಯಲ್ಲ. ಕನಿಷ್ಠ ಶೇ. 75 ರಷ್ಟಾದರೂ ಸಹಾಯ ಧನದಲ್ಲಿ ಬಿತ್ತನೆ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.

    ಕೃಷಿ ಅಧಿಕಾರಿ ಪ್ರಶಾಂತ ಕುಸಗೂರ ಮತ್ತು ಸಹಾಯಕ ಕೃಷಿ ಅಧಿಕಾರಿ ಎ.ವಿ. ಪೂಜಾರ ಅವರಿಗೆ ಮನವಿ ಸಲ್ಲಿಸಲಾಯಿತು. ಶಂಭಣ್ಣ ಮುತ್ತಗಿ, ಮಲ್ಲನಗೌಡ ಮಾಳಗಿ, ಕರಬಸಪ್ಪ ಬಸಾಪುರ, ಬಸವರಾಜ ಬಣಕಾರ, ಮಹೇಂದ್ರಪ್ಪ ತಳವಾರ, ರಂಗಪ್ಪ ಮಲೆಬೆನ್ನೂರ, ಫಯಾಜಸಾಬ್ ದೊಡ್ಮನಿ, ಮಂಜನಗೌಡ ಸಣ್ಣಗೌಡ್ರ, ಶಂಕ್ರು ಪುಟ್ಟಳ್ಳೇರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts