More

    ಎಐಎಂಎಲ್ ವಿಭಾಗ ಸ್ಥಾಪನೆಗೆ ಅನುಮತಿ

    ನಿಪ್ಪಾಣಿ, ಬೆಳಗಾವಿ: ಇಲ್ಲಿನ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಐಎಂಎಲ್ (ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ) ವಿಭಾಗ ತೆರೆಯಲು ಅನುಮತಿ ದೊರೆತಿದೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.

    ಪಟ್ಟಣದ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ವಿದ್ಯಾ ಸಂವರ್ಧಕ ಮಂಡಳ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ 2021-22ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಉದ್ದೇಶವಾಗಿದೆ. ಅದರ ಭಾಗವಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಎಂಬಿಎ, ಎಂಸಿಎ ಕೋರ್ಸ್ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಆರಂಭಿಸಲಾಗುತ್ತದೆ ಎಂದರು.

    ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಅವರ ಜನ್ಮದಿನದ ಅಂಗವಾಗಿ ಎಲ್ಲ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ, ಉಪನ್ಯಾಸಕ ಸಂಜಯ ಮುತ್ನಾಳೆ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ವೈ.ಎಸ್. ಪಾಟೀಲ, ಲಖಮಗೌಡ ಪಾಟೀಲ, ಸಂಚಾಲಕ ರಾವಸಾಹೇಬ ಪಾಟೀಲ, ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಹಿರಿಯ ನಿರ್ದೇಶಕ ಚಂದ್ರಕಾಂತ ತಾರಳೆ, ಉಪಾಧ್ಯಕ್ಷ ಆನಂದ ಗಿಂಡೆ, ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಸಂಚಾಲಕ ಭರತ ಕುರಬೆಟ್ಟಿ, ಶಿವಕುಮಾರ ಕಲ್ಯಾಣಶೆಟ್ಟಿ, ಸಂಜಯ ಮೊಳವಾಡೆ, ಸಮೀರ ಬಾಗೇವಾಡಿ, ಸುರೇಶ ಕೋಠಿವಾಲೆ, ವಿನಾಯಕ ಢೋಲೆ, ಅವಿನಾಶ ಪಾಟೀಲ, ಸಚಿನ ಹಾಲಪ್ಪನವರ, ಶೇಖರ ಪಾಟೀಲ, ಗಣೇಶ ಖಡೇದ, ಮಹಾಲಿಂಗೇಶ ಕೋಠಿವಾಲೆ, ಶ್ರೀಕಾಂತ ಢೋಲೆ, ಮಹೇಶ ಬಾಗೇವಾಡಿ, ರಾಜೇಶ ಪಾಟೀಲ, ಡಾ. ಸಿದ್ಧಗೌಡ ಪಾಟೀಲ, ಆರ್.ವೈ. ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts