More

    ಎಂ.ಎಲ್.ಜಿ. ಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ

    ಕೊಳ್ಳೇಗಾಲ: ತಾಲೂಕಿನ ಕುಂತೂರು ಗ್ರಾಮದ ಎಂ.ಎಲ್.ಜಿ. ಎಜುಕೇಷನ್ ಟ್ರಸ್ಟ್‌ನ ಆಂಗ್ಲ ಮಾಧ್ಯಮ ಶಾಲೆಯ 24ನೇ ವಾರ್ಷಿಕೋತ್ಸವ ಸಮಾರಂಭ ಸಂಭ್ರಮದಿಂದ ನಡೆಯಿತು.

    ಕುಂತೂರು ವೀರಸಿಂಹಾಸನ ಮಠದ ಶ್ರೀ ಶಿವಪ್ರಭುಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಂ.ಎಲ್.ಜಿ. ಸಂಸ್ಥೆ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಈ ಭಾಗದ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಬಣ್ಣಿಸಿದರು.

    ಶಾಸಕ ಎನ್.ಮಹೇಶ್ ಮಾತನಾಡಿ, 24 ವರ್ಷಗಳ ಹಿಂದೆ 15 ಮಕ್ಕಳಿಂದ ಪ್ರಾರಂಭವಾಗಿದ್ದ ಈ ಶಾಲೆ ಇದೀಗ 200 ಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವುದು ಪ್ರಶಂಸನೀಯ. ಸಂಸ್ಥೆ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದರು.

    ಕುಂತೂರು ಗ್ರಾ.ಪಂ. ಉಪಾಧ್ಯಕ್ಷೆ ಗಂಗಾಮಣಿ, ಬಿಇಒ ಚಂದ್ರ ಪಾಟೀಲ್, ಸಂಸ್ಥಾಪಕ ಕಾರ್ಯದರ್ಶಿ ಎಲ್. ಲಿಂಗರಾಜು, ಗ್ರಾಮದ ನಾಡಗೌಡ ನಾಗರಾಜಪ್ಪ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts