More

    ಭಗೀರಥ ಮಹರ್ಷಿ ಜಯಂತಿ ಆಚರಣೆ

    ಚಾಮರಾಜನಗರ ಕೊಳ್ಳೇಗಾಲ ತಾಲೂಕು ಕಚೇರಿಯಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಮಂಗಳವಾರ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.


    ತಹಸೀಲ್ದಾರ್ ಮಂಜುಳಾ, ಅಧಿಕಾರಿಗಳು ಹಾಗೂ ಉಪ್ಪಾರ ಸಮಾಜದ ಮುಖಂಡರು ಶ್ರೀ ಭಗೀರಥರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು.


    ಈ ವೇಳೆ ತಹಸೀಲ್ದಾರ್ ಮಂಜುಳಾ ಮಾತನಾಡಿ, ಭಗೀರಥರು ಮಹಾರಾಜರಾಗಿದ್ದವರು. ಇವರು ಸಾಧನೆಯ ಪ್ರತೀಕರಾಗಿದ್ದಾರೆ. ಪುರಾಣದಲ್ಲಿ ಜನರಿಗಾಗಿ ದೇವಲೋಕದಿಂದ ಗಂಗೆಯನ್ನು ತಂದ ಮಹಾತ್ಮರು ಎಂದರು.


    ಈ ಸಂಧರ್ಭದಲ್ಲಿ ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಶ್ರೀ ಭಗೀರಥ ಸಂಘದ ತಾಲೂಕು ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಗೋವಿಂದ, ಕಾರ್ಯದರ್ಶಿ ಸೋಮಣ್ಣ ಉಪ್ಪಾರ್, ಗಡಿ ಯಜಮಾನ ಚಿಕ್ಕತಾಂಡಶೆಟ್ಟರು, ದೊಡ್ಡ ಯಜಮಾನ ಶಿವರಾಜು, ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಪ್ರೀಯಶಂಕರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts