More

    ಮಕ್ಕಳಿಗೆ ಶಿಕ್ಷಣ ಕೊಡಿಸಲು ಶ್ರಮಿಸಿ

    ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಹರ್ಷಿ ಭಗೀರಥ ಜಯಂತಿಯನ್ನು ಗ್ರಾಮಸ್ಥರು ಹಾಗೂ ಭಗೀರಥ ಯುವಕರ ಬಳಗದ ವತಿಯಿಂದ ವಿಜೃಂಭಣೆಯಿಂದ ಆಚರಿಸಿದರು.


    ಉಪ್ಪಾರ ಜನಾಂಗದ ಮುಖಂಡರು ಹಾಗೂ ಶ್ರೀ ಭಗೀರಥ ಯುವಕರ ಬಳಗದ ಯುವಕರು ಗ್ರಾಮದ ಬಸ್ ನಿಲ್ದಾಣದ ಕುರ್ಜು ಬಳಿಯಿರುವ ಶ್ರೀ ಭಗೀರಥರ ನಾಮಫಲಕಕ್ಕೆ ಅಲಂಕೃತಗೊಳಿಸಿ, ಪೂಜೆ ಸಲ್ಲಿಸಿದರು.


    ಈ ವೇಳೆ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್ ಮಾತನಾಡಿ, ಭಗೀರಥ ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಇಡೀ ಸಮಾಜ ಮುಂದೆ ಬರುತ್ತದೆ. ಈ ಹಿನ್ನಲೆ ಮಕ್ಕಳನ್ನು ಶಿಕ್ಷಣಕ್ಕೆ ಪಾಲಕರು ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.


    ಈ ಸಂದರ್ಭದಲ್ಲಿ ಮಧುವನಹಳ್ಳಿ ಗಡಿ ಯಜಮಾನ ಚಿಕ್ಕ ತಾಂಡಶೆಟ್ಟಿ, ದೊಡ್ಡ ಯಜಮಾನರಾದ ಶಿವರಾಜು, ಪುಟ್ಟಪ್ಪ, ರಾಮಸ್ವಾಮಿ, ಮಸಣಶೆಟ್ಟಿ,, ಮಹದೇವಸ್ವಾಮಿ(ಭಟ್ಟರು), ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಪ್ರಯಶಂಕರ್, ಮಧುವನಹಳ್ಳಿ ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪ, ಹಾಗೂ ಸದಸ್ಯರು ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts