More

    ಎಂಇಎಸ್‌ನಿಂದ ಛತ್ರಪತಿ ಶಿವಾಜಿ ಪ್ರತಿಮೆ ಶುದ್ಧೀಕರಣ

    ಬೆಳಗಾವಿ: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ-ಕಾಂಗ್ರೆಸ್‌ನ ರಾಜಕೀಯ ಪ್ರತಿಷ್ಠೆಗೆ ಕಾರಣವಾಗಿದ್ದ ತಾಲೂಕಿನ ರಾಜಹಂಸಗಡದ ಶಿವಾಜಿ ಪ್ರತಿಮೆ ನಿರ್ಮಾಣ, ಅನಾವರಣ ಕ್ರೆಡಿಟ್ ಪಾಲಿಟಿಕ್ಸ್ ಅಖಾಡಕ್ಕೆ ಈಗ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪ್ರವೇಶಿಸಿದ್ದು, ಭಾನುವಾರ ಶಿವಾಜಿ ಪುತ್ಥಳಿ ಶುದ್ಧೀಕರಣ ಕಾರ್ಯಕ್ರಮ ಏರ್ಪಡಿಸಿ ಕಮಲ, ಹಸ್ತಕ್ಕೆ ಸಡ್ಡು ಹೊಡೆದಿದೆ. ನೂರಾರು ಜನರನ್ನು ಕರೆತಂದ ಎಂಇಎಸ್ ಮುಖಂಡರು ಪ್ರತಿಮೆ ಶುದ್ಧೀಕರಣದ ವಿಧಿ-ವಿಧಾನ ನೆರವೇರಿಸಿದರು. ಬಿಜೆಪಿ-ಕಾಂಗ್ರೆಸ್‌ನವರು ಪ್ರತಿಮೆ ಅನಾವರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ. ಇದರಿಂದ ಶಿವಾಜಿ ಮಹಾರಾಜರಿಗೆ ಅವನಾನ ಮಾಡಿದಂತಾಗಿದೆ ಎಂದು ಎಂಇಎಸ್‌ನವರು ಪ್ರತಿಮೆ ಶುದ್ಧೀಕರಣ ಮಾಡಿದರು.

    ಸಿಎಂ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆಗೆ ಶುದ್ಧೀಕರಣ ಮಾಡುವ ಮೂಲಕ ಎಂಇಎಸ್‌ನವರು ರಾಜ್ಯ ಸರ್ಕಾರಕ್ಕೆ ಅವಮಾನ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    43 ಅಡಿ ಶಿವಾಜಿ ಪ್ರತಿಮೆ ಎದುರು ಮಹಾರಾಜರ ಸಣ್ಣ ಪ್ರತಿಮೆ ಇಟ್ಟು ಅದನ್ನು ಮಲಪ್ರಭಾ, ಘಟಪ್ರಭಾ ಸೇರಿ ಐದು ನದಿಗಳ ನೀರು ತಂದು ತೊಳೆಯಲಾಯಿತು. 25 ಲೀಟರ್ ಹಾಲಿನಿಂದ ಅಭಿಷೇಕ ಮಾಡಲಾಯಿತು. ರಾಯಗಡದಿಂದ ಅರ್ಚಕರನ್ನು ಆಹ್ವಾನಿಸಿ, ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂರ್ಣಕುಂಭ, ಪಲ್ಲಕ್ಕಿ ಉತ್ಸವ ಜರುಗಿತು. ಎಂಇಎಸ್ ಮುಖಂಡರಾದ ದೀಪಕ ದಳವಿ, ಪ್ರಕಾಶ ಮರಹಾಳೆ, ಸುಧೀರ ಚವ್ಹಾಣ, ಶಿವಾಜಿ ಸುಂಠಕರ್, ಮನೋಹರ ಕಿಣೇಕರ್, ನೇತಾಜಿ ಜಾಧವ, ರವಿ ಸಾಳುಂಕೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts