More

    ಉಸಿರು ಉಳಿಯಲು ಹಸಿರು ಅತ್ಯಗತ್ಯ

    ಹುಕ್ಕೇರಿ: ಸಂಕೇಶ್ವರದ ಶ್ರೀಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಈಗಾಗಲೇ 50 ಸಾವಿರದಷ್ಟು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಲಾಗಿದೆ.ಇದೀಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೇ 5,000 ಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಾಣದ ಸಂಕಲ್ಪ ಮಾಡಿದ್ದೇವೆ ಎಂದು ಕಾರ್ಖಾನೆ ಅಧ್ಯಕ್ಷ, ಜಿಪಂ ಸದಸ್ಯ ನಿಖಿಲ ಕತ್ತಿ ಹೇಳಿದರು. ಇತ್ತೀಚೆಗೆ ಕಾರ್ಖಾನೆಯಲ್ಲಿ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಜೀವ ಸಂಕುಲದ ಉಸಿರು ಮುಂದುವರಿಯಲು ಸುತ್ತಲೂ ಹಸಿರು ನಿರ್ಮಾಣವಾಗಬೇಕು ಎಂದರು. ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ, ನಾಗರಮುನ್ನೋಳಿ ಜಿಪಂ ಸದಸ್ಯ ಪವನ ಕತ್ತಿ ಮಾತನಾಡಿ, ಈಗಾಗಲೇ ಬೆಳೆದು ನಿಂತಿರುವ ಮರಗಳನ್ನು ಯಾವುದೇ ಕಾರಣಕ್ಕೂ ಕತ್ತರಿಸದೇ ಪೋಷಿಸುವ ಕಾರ್ಯ ನಡೆಯಬೇಕು. ಜತೆಗೆ ಮುಂದಿನ ಪೀಳೆಗೆಗಾಗಿ ಆರೋಗ್ಯಕರ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಖಾನೆ ನಿರ್ದೇಶಕ ಉದಯ ದೇಸಾಯಿ, ಎಸ್.ಆರ್. ಕರ್ಕಿನಾಯಿಕ, ಪರಿಸರ ಅಧಿಕಾರಿ ಎ.ಆರ್.ಚಾಟೆ, ಎಸ್.ಪಿ. ಪಾಟೀಲ, ವಿ.ಎಸ್. ಕತ್ತಿ, ಪಿ.ಎಂ. ಖೋತ, ವಿ.ಎಂ.ಬೆಲ್ಲದ, ಜಗದೀಶ ಏಣಗಿಮಠ, ಎಂ.ಆರ್. ಪಾಟೀಲ, ಲೇಖಾಧಿಕಾರಿ ಕೆ.ಅರ್. ಬೆಟಗೇರಿ, ವಿ.ಟಿ.ಕುಲಕರ್ಣಿ, ಪಿ.ಎನ್.ಬೆಳವಿ, ಆರ್.ವಿ.ರೇವನ್ನವರ, ಬಿ.ಎಂ.ನಾಗನೂರಿ, ಬಿ.ಎಸ್.ವರ್ಜಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts