More

    ಉರುಳಿ ಬಿದ್ದ ಬೃಹತ್ ಮರ

    ಮುಂಡಗೋಡ: ಪಟ್ಟಣದ ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯಿಂದ ಯಲ್ಲಾಪುರ ರಸ್ತೆಯಲ್ಲಿ ಬುಧವಾರ ಬೃಹತ್ ಮರ ಉರುಳಿ ಬಿದ್ದ ಕಾರಣ ಸಂಜೆಯವರೆಗೂ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

    ರಸ್ತೆಯ ಅಕ್ಕ- ಪಕ್ಕ ಅನೇಕ ಹಳೆಯದಾದ ಬೃಹತ್ ಮರಗಳಿವೆ. ಅಮ್ಮಾಜಿ ಕೆರೆಯಿಂದ ಹೆಚ್ಚುವರಿ ನೀರು ಹರಿದು ಹೋಗಲು ಮರಗಳ ಬುಡದ ಪಕ್ಕದಲ್ಲಿಯೇ ಸಣ್ಣ ನೀರಾವರಿ ಇಲಾಖೆಯವರು ಅಗಲವಾದ ಕಂದಕಗಳನ್ನು ತೋಡಿದ್ದಾರೆ. ಇದರಿಂದ ಬೇರುಗಳು ಸಡಿಲಗೊಂಡು ಕಳೆದ 2-3 ದಿನಗಳ ಹಿಂದೆ ರಾತ್ರಿ ವೇಳೆ ಇದೇ ರಸ್ತೆಯಲ್ಲಿ ಮರ ಉರುಳಿ ಬಿದ್ದಿತ್ತು. ಈಗ ಮತ್ತೊಂದು ಮರ ಉರುಳಿ ಬಿದ್ದಿದೆ. ಮರದ ಕೆಳಗೆ ಇದ್ದ ಬೀಡಿ ಅಂಗಡಿ ಪೂರ್ತಿ ಜಖಂ ಆಗಿದೆ. ಅದೃಷ್ಟವಶಾತ್ ಆ ವೇಳೆ ಬಂದ ಹಸುವನ್ನು ಓಡಿಸಲು ಅಂಗಡಿಯಿಂದ ಹೊರಗೆ ಹೋದ ವೃದ್ಧನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜೂ. 24ರಂದು ನೂರಅಹ್ಮದ್ ಚಿಕ್ಕೇರಿ ಎಂಬುವರು ಅಪಾಯದಲ್ಲಿರುವ ಈ ಮರ ತೆರವುಗೊಳಿಸುವಂತೆ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಗಮನ ಹರಿಸಿರಲಿಲ್ಲ.

    ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವುದರಿಂದ ಹಳೇ ಮರಗಳು ಬೀಳುವ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಪಿಡಬ್ಲು್ಯಡಿ ಮತ್ತು ಅರಣ್ಯ ಇಲಾಖೆಯವರಿಗೆ ಈ ಹಿಂದೆಯೇ ತಿಳಿಸಲಾಗಿತ್ತು. ಆದರೆ ಅವರು ಮುಂಜಾಗ್ರತೆ ವಹಿಸಿಲ್ಲ ಎಂದು ಸ್ಥಳೀಯರಾದ ಗಂಗಾಧರ ಕೊರವರ, ಶಿವಜ್ಯೋತಿ ಹುದ್ಲಮನಿ, ಪ್ರವೀಣ ಸಾಲಗಾಂವ ಇತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts