More

    ಉಪ್ಪಾರಹಳ್ಳಿಯ ಉದ್ಯಾನವನ ಮಾದರಿ

    ಗೌರಿಬಿದನೂರು: ತಾಲೂಕಿನ ರಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಿಗೆ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಸಿಇಒ ಬಿ.ೌಜೀಯ ತರುನ್ನುಮ್ ಮೆಚ್ಚುಗೆ ವ್ಯಕ್ತಪಡಿಸಿದರು.

    ಯೋಜನೆಯಡಿ ಹೊಸ ಉಪ್ಪಾರಹಳ್ಳಿ ಬಳಿ ಉದ್ಯಾನವನ ನಿರ್ಮಾಣ ಮಾಡಿದ್ದು, ಜಲ ಸಂರಕ್ಷಣೆಯ ದೃಷ್ಟಿಯಿಂದ ಕರ್ನಾಟಕ ನಕ್ಷೆ ಹೋಲುವ ನೀರಿನ ಹೊಂಡ ನಿರ್ಮಿಸಲಾಗಿದೆ, ಇಂತಹ ವಿಭಿನ್ನ ಯೋಜನೆಗಳು ನರೇಗಾ ಅಡಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯವೆಂದ ಜಿಪಂ ಅಧ್ಯಕ್ಷ ಹಾಗೂ ಸಿಇಒ, ಇದೇ ರೀತಿ ಇತರ ತಾಲೂಕುಗಳಲ್ಲಿ ಕಾಮಗಾರಿಗಳು ನಡೆಯಬೇಕು ಎಂದರು.

    ಹೊಸಉಪ್ಪಾರಹಳ್ಳಿ ಕೆರೆಯಲ್ಲಿ ಸುಮಾರು 1000 ದೇಶಿ ಗಿಡಗಳನ್ನು ನೆಟ್ಟಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪಿಡಿಒ ಜಿ.ಶ್ರೀನಿವಾಸ್ ಅವರನ್ನು ಅಭಿನಂದಿಸಿದರು. ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕೃಷಿ ಹೊಂಡ ನಿರ್ಮಾಣ, ಜಲ ಸಂರಕ್ಷಣೆ ಕಾಮಗಾರಿ, ಅರಣ್ಯೀಕರಣ, ಬದು ನಿರ್ಮಾಣ, ಮಳೆ ನೀರು ಕೊಯ್ಲು ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.

    ಪಿಡಿಒಗಳು ನರೇಗಾ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಜವಾಬ್ದಾರಿಯುತವಾಗಿ ಹಾಗೂ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಹಾಗೂ ಆಗಾಗ ತಾಪಂ ಕಾರ್ಯನಿರ್ವಹಣಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಪಂ ಸಿಇಒ ಬಿ.ೌಜೀಯಾ ತರುನ್ನುಮ್ ಸೂಚಿಸಿದರು.

    ಜಿಪಂ ಸದಸ್ಯರಾದ ಭವ್ಯ ರಂಗನಾಥ್, ಪ್ರಮೀಳಾ ಪ್ರಕಾಶ್ ರೆಡ್ಡಿ, ತಾಪಂ ಅಧ್ಯಕ್ಷ ಲೋಕೇಶ್, ಇಒ ಎನ್.ಮುನಿರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಸಹಾಯಕ ನಿರ್ದೇಶಕ ಆದಿನಾರಾಯಣಪ್ಪ, ಸಾಮಾಜಿಕ ಅರಣ್ಯ ಅಧಿಕಾರಿ ಪದ್ಮಶ್ರೀ, ಗ್ರಾಪಂ ಪಿಡಿಒ ಜಿ.ಶ್ರೀನಿವಾಸ್ ಇತರರಿದ್ದರು.

    ವಿವಿಧ ಪಂಚಾಯಿತಿಗಳಿಗೆ ಭೇಟಿ: ಗೌರಿಬಿದನೂರು ತಾಪಂ ವ್ಯಾಪ್ತಿಯ ಶಾಂಪುರ, ಗೌಡಗೆರೆ, ಅಲಕಾಪುರ, ಜಿ.ಬೊಮ್ಮಸಂದ್ರ, ರಮಾಪುರ, ಹೊಸೂರು, ಸೊನಗಾನಹಳ್ಳಿ, ಹುದುಗೂರು, ಮುದಲೋಡು ಹಾಗೂ ನಗರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಪಂ ಅಧ್ಯಕ್ಷ ಹಾಗೂ ಸಿಇಒ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts