More

    ಉದ್ಯೋಗ ಖಾತ್ರಿ ಕೂಲಿಗಳ ಪ್ರತಿಭಟನೆ

    ಬೆಳಗಾವಿ: ಉದ್ಯೋಗ ಖಾತ್ರಿ ಯೋಜನೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಒತ್ತಾಯಿಸಿ ನರೇಗಾ ಕೂಲಿ ಕಾರ್ಮಿಕರ ಪರವಾಗಿ ಎನ್‌ಆರ್‌ಇಜಿಎ ಸಂಘರ್ಷ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟಿನೆ ಮಾಡಲಾಯಿತು.ಕಾರ್ಮಿಕರ ಮೇಲೆ ಶೋಷಣೆ ನಡೆಯುತ್ತಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಕೂಲಿ ಹಣಕ್ಕಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಖಾತ್ರಿ ಯೋಜನೆಯಲ್ಲಿನ ವ್ಯವಸ್ಥಿತ ಭ್ರಷ್ಟಾಚಾರ ಕೊನೆಗೊಳಿಸಬೇಕಿದೆ. ಸರಿಯಾದ ಸಮಯದಲ್ಲಿ ಕೆಲಸ ಕೊಡುವುದು, ಇಲ್ಲವೆ ನಿರುದ್ಯೋಗ ಭತ್ಯೆ ನೀಡುವುದು, ಸಮಯಕ್ಕೆ ಸರಿಯಾಗಿ ಕೂಲಿ ನೀಡುವುದು, ತಡ ಮಾಡಿದಲ್ಲಿ ದಂಡ ಸಹಿತ ನೀಡುವುದು ಸೇರಿ ಸಮರ್ಥ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

    ಎನ್‌ಆರ್‌ಇಜಿಎ ಅಡಿ ಜನರು ಕೆಲಸ ಕೇಳಲು ಗ್ರಾಪಂಗೆ ಹೋದರೆ ಕೆಲಸವಿಲ್ಲ. ಆಗ ಬನ್ನಿ, ಈಗ ಬನ್ನಿ ಎಂದು ಹೇಳುತ್ತಾರೆ. ಈ ಬಗ್ಗೆ ಮನವಿ ಸಲ್ಲಿಸಿದರೆ ಸ್ವೀಕೃತಿ ನೀಡುವುದಿಲ್ಲ. ಹೀಗಾಗಿ ನಾವು ಕೊಟ್ಟ ಅರ್ಜಿ ಕಸದ ಬುಟ್ಟಿಗೆ ಹೋಗುತ್ತದೆ. ಇದರಿಂದ ಗ್ರಾಮೀಣರಿಗೆ ಪ್ರಸ್ತುತ ಉದ್ಯೋಗ ಸಿಗುತ್ತಿಲ್ಲ. ಇನ್ನು ಕೂಲಿ ಕಾರ್ಮಿಕರಿಗೆ ನೀಡುತ್ತಿದ್ದ ಸಲಕರಣೆ ವೆಚ್ಚವನ್ನು ನಿಲ್ಲಿಸಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರದ ಬಜೆಟ್ ಕೂಡ ಕಡಿಮೆಯಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಈ ವೆಚ್ಚವನ್ನು 10 ರೂ. ನಿಂದ 40 ರೂ.ಗೆ ಹೆಚ್ಚಿಗೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು. ಡಾ. ಗೋಪಾಲ ದಾಬಡೆ, ವಿವಿಧ ಗ್ರಾಮಗಳ ನರೇಗಾ ಕೂಲಿ ಕಾರ್ಮಿಕರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts