More

    ಕಾಗೇರಿ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ-ದೇಶಪಾಂಡೆ ಆರೋಪ

    ಕಾರವಾರ: ಮತ ಗಳಿಕೆಯ ಸಲುವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕೆಳ ಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗರ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಹೊನ್ನಾವರದ ಪರೇಶ ಮೇಸ್ತ ಪ್ರಕರಣವನ್ನು ಸಿಬಿಐ ತನಿಖೆ ಮಾಡಿ `ಬಿ’ ವರದಿ ಸಲ್ಲಿಸಿದೆ. ಹೀಗಿರುವಾಗ ಆಗಿನ ಮಂಗಳೂರು ಐಜಿಪಿ ಹೇಮಂತ ನಿಂಬಾಳಕರ್ ಅವರನ್ನು ಎಳೆತಂದು ಅವರ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ. ಪ್ರಕರಣದಲ್ಲಿ ತಪು÷್ಪ ನಡೆದಿದೆ ಎಂದಾದರೆ ಅಂದು ಶಾಸಕರಾಗಿದ್ದ ನೀವೇಕೆ ಸುಮ್ಮನಿದ್ದಿರಿ. ಪ್ರತಿಭಟನೆ ನಡೆದಾಗ ಪೊಲೀಸ್ ವಾಹನ ಹತ್ತಿ ಏಕೆ ಪಲಾಯನ ಮಾಡಿದಿರಿ ಎಂದು ದೇಶಪಾಂಡೆ ಕಾಗೇರಿ ಅವರನ್ನು ಪ್ರಶ್ನಿಸಿದರು.
    ಶಿರಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಅರಣ್ಯ ಅತಿಕ್ರಮಣ ಸಕ್ರಮಕ್ಕೆ 3 ತಲೆಮಾರಿನ ದಾಖಲೆ ಬೇಕು ಎಂಬ ನಿಯಮವನ್ನು ಸಡಿಲ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಹಲವು ವರ್ಷ ಕಳೆದಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹಾಲಕ್ಕಿ, ಕುಣಬಿಗಳನ್ನು ಪರಿಶಿಷ್ಟ ಪಟ್ಟಿಗೆ ಸೇರಿಸುವಂತೆ ಸಲ್ಲಿಸಿದ ಪ್ರಸ್ತಾವನೆ ಕೇಂದ್ರದಲ್ಲಿದೆ. ಅವುಗಳ ಬಗ್ಗೆ ಚಕಾರ ಎತ್ತದೇ ಇರುವುದೇಕೆ ಎಂದು ಪ್ರಶ್ನಿಸಿದರು.
    ರಾಜ್ಯದಲ್ಲಿ ಕುಡಿಯಲು ನೀರಿಲ್ಲ. ಕೇಂದ್ರಕ್ಕೆ ಹಣಕಾಸಿನ ನೆರಗಿಗೆ ಪ್ರಸ್ತಾವನೆ ಸಲ್ಲಿಸಿದರೆ ನೀಡಿಲ್ಲ. ಈಗ ಸುಪ್ರೀಂ ಕೋರ್ಟ್ಗೆ ಹೋದ ನಂತರ ನಮ್ಮ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಕೇಂದ್ರ 3500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
    ಪ್ರಧಾನಿ ಕಾರ್ಯಕ್ರಮದಲ್ಲಿ ಖಾನಾಪುರದ ಮಾಜಿ ಶಾಸಿಕ ಅರವಿಂದ ಪಾಟೀಲ್ ನಮ್ಮ ಅಭ್ಯರ್ಥಿ ಅಂಜಲಿ ನಿಂಬಾಳಕರ್ ಅವರ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ಅಂಜಲಿ ನಿಂಬಾಳಕರ್ ಶಾಸನ ಸಭೆಯಲ್ಲಿ ಸಕ್ರಿಯರಾಗಿರುವುದನ್ನು ನಾನು ನೋಡಿದ್ದೇನೆ. ಖಾನಾಪುರದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದರು. ಅರವಿಂದ ಪಾಟೀಲ್ ಎಂಇಎಸ್ ಶಾಸಕರಾಗಿದ್ದರು ಎಂದರು.

    https://www.vijayavani.net/a-voice-in-parliament-for-the-issue-of-tribals

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts