More

    ಉದ್ಯೋಗ ಸೃಷ್ಟಿಗೆ 1 ಲಕ್ಷ ಕೋಟಿ ರೂ.

    ಶಿವಮೊಗ್ಗ: ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್​ನಲ್ಲಿ ಉದ್ಯೋಗ ಸೃಷ್ಟಿಗೆಂದು ಒಂದು ಲಕ್ಷ ಕೋಟಿ ರೂ. ಮೀಸಲಿರಿಸಿದೆ. ಉದ್ಯೋಗ ಖಾತ್ರಿ ಮೂಲಕ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುವುದು. ವರ್ಷದಲ್ಲಿ 100 ದಿನದ ಗರಿಷ್ಠ ಉದ್ಯೋಗವನ್ನು 150 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

    ಲಾಕ್​ಡೌನ್ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಸಂಜೀವಿನಿಯಂತಾಗಿದೆ. ಬೇರೆ ಊರುಗಳಲ್ಲಿ ಕೆಲಸ ತೊರೆದು ಸ್ವಗ್ರಾಮಕ್ಕೆ ಮರಳಿದವರಿಗೆ ನರೇಗಾ ಮೂಲಕ ಅವಕಾಶ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಅಂತರ್ಜಲ ಚೇತನ ಯೋಜನೆ ವಿಸ್ತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಬೀದರ್, ಕಲುಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಈ ಯೋಜನೆ ಆರಂಭವಾಗಲಿದೆ. ಇದರಿಂದ ಉದ್ಯೋಗ ಅವಕಾಶ ಹೆಚ್ಚಲಿದೆ ಎಂದರು. ಒಂದೇ ದಿನದಲ್ಲಿ ಜಾಬ್​ಕಾರ್ಡ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಇದರ ಸಂಪೂರ್ಣ ಅಧಿಕಾರ ಪಿಡಿಒಗೆ ನೀಡಲಾಗಿದೆ. ಒಂದು ವೇಳೆ ಜಾಬ್​ಕಾರ್ಡ್ ನೀಡಲು ಯಾರಾದರೂ ನಿರಾಕರಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಸಚಿವರು ಎಚ್ಚರಿಸಿದರು.

    ಅದು ಆಂತರಿಕ ವಿಷಯ: ಇದುವರೆಗೆ ನಾನು ನಿರ್ವಹಣೆ ಮಾಡಿದ ಇಲಾಖೆಗಳಲ್ಲಿ ಯಶಸ್ಸು ಕಂಡಿದ್ದೇನೆ. ಆರಂಭದಿಂದಲೂ ಪಕ್ಷ, ಸರ್ಕಾರ ಹಾಗೂ ಸಂಘಟನೆ ನನಗೆ ಬೆಂಬಲವಾಗಿ ನಿಂತಿದೆ. ಈಗ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ರಾಜ್ ಇಲಾಖೆಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಇಲಾಖೆಯಲ್ಲಿ ಅಧಿಕಾರಿಗಳ ಅಸಹಕಾರ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಇಲಾಖೆಯಲ್ಲಿ ಎಲ್ಲರೂ ಒಂದು ಕುಟುಂಬದಂತೆ ಇದ್ದೇವೆ. ಯಾರಾದರೂ ಸಹಕಾರ ನೀಡದಿದ್ದರೆ ಅದನ್ನು ಸಿಎಂ ಗಮನಕ್ಕೆ ತರುತ್ತೇನೆ. ಇದೆಲ್ಲ ಆಂತರಿಕ ಸಂಗತಿಗಳು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts