More

    ಉತ್ಸವಕ್ಕೆ ತಳಿರು ತೋರಣಗಳ ಮೆರುಗು

    ಶೃಂಗೇರಿ: ಪಟ್ಟಣದ ಶ್ರೀ ಭವಾನೀ ಮಲಹಾನಿಕರೇಶ್ವರಸ್ವಾಮಿ ಮಹಾಕುಂಭಾಭಿಷೇಕ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 7 ಗಂಟೆಗೆ ಸ್ವಾಮಿ ಸನ್ನಿಧಿಯಲ್ಲಿರುವ ಶ್ರೀ ಸ್ತಂಭಗಣಪತಿಗೆ ಯತಿವರ್ಯರಿಂದ ಪೂಜೆ ನಡೆಯಿತು. 7.30ರಿಂದ ಸಹಸ್ರಕುಂಭಾಭಿಷೇಕ ಪ್ರಾರಂಭಗೊಂಡು ಬಳಿಕ 9 ಗಂಟೆಗೆ ಮೀನ ಲಗ್ನದಲ್ಲಿ ಉಭಯಶ್ರೀಗಳಿಂದ ಮಲಹಾನಿಕರೇಶ್ವರ ಸ್ವಾಮಿ ಹಾಗೂ ಶ್ರೀಭವಾನೀ ಅಮ್ಮನವರಿಗೆ ಕುಂಭಾಭಿಷೇಕ, ಮಹಾಪೂಜೆ ನೆರವೇರಿತು.

    ಪಟ್ಟಣದಲ್ಲಿ ಭಕ್ತರು ಮುಂಜಾನೆ ರಂಗವಲ್ಲಿ ಚಿತ್ತಾರ ಬಿಡಿಸಿ, ತಳಿರು ತೋರಣಗಳನ್ನು ಕಟ್ಟಿ ಮಹೋತ್ಸವಕ್ಕೆ ಮೆರುಗು ನೀಡಿದರು. ಬೆಟ್ಟದ ದೇವಾಲಯಗಳು ವಿವಿಧ ಬಣ್ಣಬಣ್ಣದ ಪುಷ್ಪಗಳಿಂದ, ವಿದ್ಯುತ್​ದೀಪಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿತ್ತು.

    ನೂತನವಾಗಿ ನಿರ್ವಿುಸಿದ ವಿಮಾನಗೋಪುರ ಮತ್ತು ರಾಜಗೋಪುರಗಳ ಕುಂಭಾಭಿಷೇಕ ಬೆಳಿಗ್ಗೆ 9.45ಕ್ಕೆ ನೆರವೇರಿತು. ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಪುಷ್ಪಗಳಿಂದ ಕುಂಭವನ್ನು ಅರ್ಚಿಸಿ ಕುಂಭಾಭಿಷೇಕ ಪ್ರಕ್ರಿಯೆ ನೆರವೇರಿಸಿದರು. ಧಾರ್ವಿುಕ ಕಾರ್ಯಕ್ರಮದ ವಿಧಿವಿಧಾನಗಳನ್ನು ವಿದ್ವಾಂಸ ಶ್ರೀ ಶಿವಕುಮಾರ್ ಶರ್ಮ ಹಾಗೂ ಸೀತಾರಾಮ ಶರ್ಮ ನಡೆಸಿಕೊಟ್ಟರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts