More

    ಉತ್ತರ ಕನ್ನಡ ಜಿಲ್ಲೆಯ 36 ಜನರಿಗೆ ಕರೊನಾ

    ಕಾರವಾರ: ಜಿಲ್ಲೆಯಲ್ಲಿ ಮಂಗಳವಾರ 36 ಜನರಿಗೆ ಕರೊನಾ ಇರುವುದು ಪತ್ತೆಯಾಗಿದೆ. ಹೊರ ದೇಶ, ರಾಜ್ಯ, ಜಿಲ್ಲೆಯಿಂದ ಗ್ರಾಮೀಣ ಭಾಗಕ್ಕೆ ಬಂದವರಿಗೆ ರೋಗ ಕಂಡು ಬರುತ್ತಿದೆ. ಪ್ರತಿ ಗ್ರಾಮಗಳಲ್ಲೂ ಆತಂಕದ ವಾತಾವರಣ ನಿರ್ವಣವಾಗಿದೆ. ಐಆರ್​ಬಿ ಟೋಲ್ ನೌಕರನಿಗೂ ಸೋಂಕು ಆವರಿಸಿದ್ದು, ಪ್ರಯಾಣಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.

    ಜಿಲ್ಲೆಯ ಸೋಂಕಿತರ ಒಟ್ಟು ಸಂಖ್ಯೆ 471ಕ್ಕೆ ಏರಿದೆ. ಭಟ್ಕದಲ್ಲಿ 19, ಕಾರವಾರದಲ್ಲಿ 6, ಶಿರಸಿ, ಕುಮಟಾ, ಹೊನ್ನಾವರ, ಹಳಿಯಾಳದಲ್ಲಿ ತಲಾ 2, ಜೊಯಿಡಾ, ದಾಂಡೇಲಿ ಮತ್ತು ಮುಂಡಗೋಡಿನಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

    ಬೆಂಗಳೂರು ನಂಟು: ಬೆಂಗಳೂರಿನಿಂದ ಮುಂಡಗೋಡಿನ ಬ್ಯಾಣದಳ್ಳಿಗೆ ಬಂದ 21 ವರ್ಷದ ಯುವತಿ, ಜೊಯಿಡಾದ ನ್ಯೂ ಟೌನ್​ಶಿಪ್​ಗೆ ಬಂದ 20 ವರ್ಷದ ಯುವತಿ, ಕಾರವಾರ ಚೆಂಡಿಯಾಕ್ಕೆ ಬಂದ 53 ವರ್ಷದ ವ್ಯಕ್ತಿ, ತೋಡೂರಿಗೆ ಬಂದ 29 ವರ್ಷದ ಮಹಿಳೆಗೆ ಸೋಂಕು ಕಂಡು ಬಂದಿದೆ. ಗೋವಾದಿಂದ ಕಡವಾಡಕ್ಕೆ ಬಂದ 46 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

    ಜ್ವರ ಇದ್ದವರಿಗೆ: ಜ್ವರದ ಲಕ್ಷಣ ಇದ್ದು, ಪರೀಕ್ಷೆಗೊಳಪಟ್ಟ ಕಾರವಾರದ ಹಳಗಾದ ಇಬ್ಬರು ಪುರುಷರಿಗೆ, ಭಟ್ಕಳ ಶಿರಾಲಿಯ 7 ವರ್ಷದ ಬಾಲಕಿ, 65 ವರ್ಷದ ವೃದ್ಧೆಗೆ, ಅಂಕೋಲಾದ 62 ವರ್ಷದ ಮಹಿಳೆಗೆ ಸೋಂಕು ಕಂಡುಬಂದಿದೆ.

    ಮಹಾರಾಷ್ಟ್ರದಿಂದ ಹಳಿಯಾಳಕ್ಕೆ ವಾಪಸಾಗಿದ್ದ ಬಾಳಶೆಟ್ಟಿ ಕೊಪ್ಪದ 7 ಹಾಗೂ 12 ವರ್ಷದ ಇಬ್ಬರು ಬಾಲಕಿಯರಿಗೆ, ದಾಂಡೇಲಿಯ ಹಳಿಯಾಳ ರಸ್ತೆಯಲ್ಲಿ ಪಿ- 1457 ಸಂಪರ್ಕಕ್ಕೆ ಬಂದ 28 ವರ್ಷದ ಯುವಕನಿಗೆ, ಹೊನ್ನಾವರ ಐಆರ್​ಬಿ ಟೋಲ್​ಗೆ ಕೊಲ್ಹಾಪುರದಿಂದ ಬಂದ ವ್ಯಕ್ತಿ, ರ್ಕಗೆ ರತ್ನಾಗಿರಿಯಿಂದ ಬಂದ 46 ವರ್ಷದ ವ್ಯಕ್ತಿ, ಕುಮಟಾಕ್ಕೆ ಮುಂಬೈನಿಂದ ಆಗಮಿಸಿದ 62 ವರ್ಷದ ವ್ಯಕ್ತಿಗೆ, ಕುಮಟಾ ಗುಂದದಲ್ಲಿ ಪಿ- 23154 ಸಂಪರ್ಕಕ್ಕೆ ಬಂದ 42 ವರ್ಷದ ವ್ಯಕ್ತಿಗೆ ಸೋಂಕು ಕಂಡುಬಂದಿದೆ.

    ಮದುವೆ ಸಂಪರ್ಕ: ಭಟ್ಕಳದಲ್ಲಿ ಜೂ. 25 ರಂದು ನಡೆದ ಮದುವೆಯಲ್ಲಿ ಭಾಗವಹಿಸಿದ ಮತ್ತೆ 10 ಜನರಿಗೆ ಸೋಂಕು ಕಂಡು ಬಂದಿದೆ. ಅವರಲ್ಲಿ ನಾಲ್ವರು ಮಕ್ಕಳಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರಿಗೆ, ದುಬೈನಿಂದ ಆಗಮಿಸಿದ ಮೂವರಿಗೆ, ಮಹಾರಾಷ್ಟ್ರದಿಂದ ಬಂದ ಒಬ್ಬ ವ್ಯಕ್ತಿಗೆ ಸೋಂಕು ಖಚಿತವಾಗಿದೆ.

    ಅಲೈಡ್ ಪ್ರದೇಶ ಸೀಲ್​ಡೌನ್
    ದಾಂಡೇಲಿಯ ಹಳಿಯಾಳ ರಸ್ತೆ ಅಲೈಡ್ ಪ್ರದೇಶದ ಪಿ-14571 ಸೋಂಕಿತನ ದ್ವಿತೀಯ ಸಂಪರ್ಕಕ್ಕೆ ಬಂದ 28 ವರ್ಷದ ಯುವಕನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಸಾಂಸ್ಥಿಕ ಕ್ವಾರೈಂಟೆನ್​ನಲ್ಲಿದ್ದ ಇವರನ್ನು ಮಂಗಳವಾರ ಸೋಂಕಿನ ವರದಿ ಬಂದ ತಕ್ಷಣ ಕಾರವಾರ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts