More

    ಉತ್ತರಪ್ರದೇಶದ 65 ಜನ ಕ್ವಾರಂಟೈನ್

    ಹಾವೇರಿ: ಲಾಕ್​ಡೌನ್ ನಿಯಮ ಉಲ್ಲಂಘಿಸಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಉತ್ತರಪ್ರದೇಶದ ಮೂಲದ 65 ಜನರನ್ನು ವಶಕ್ಕೆ ಪಡೆದು ಅವರೆಲ್ಲನ್ನೂ ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಿದ ಘಟನೆ ನಗರದಲ್ಲಿ ನಡೆದಿದೆ. ಸೋಮವಾರ ನಗರದ ಜಿಲ್ಲಾಡಳಿತ ಭವನದ ಎದುರು ದೇವಗಿರಿ ಗ್ರಾಮದ ರಸ್ತೆಯಲ್ಲಿ ಉತ್ತರಪ್ರದೇಶ ಪಾಸಿಂಗ್ ಲಾರಿ ರಾಷ್ಟ್ರೀಯ ಹೆದ್ದಾರಿ ತಪ್ಪಿಸಿ ದೇವಗಿರಿ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಇದನ್ನು ಗಮನಿಸಿದ ತಹಸೀಲ್ದಾರ್ ಶಂಕರ ಜಿ. ಎಸ್., ಲಾರಿ ತಡೆದು ಪರಿಶೀಲಿಸಿದಾಗ, ಲಾರಿಯಲ್ಲಿ 65 ಜನರನ್ನು ನಿಯಮ ಉಲ್ಲಂಘಿಸಿ ಸಾಗಿಸುತ್ತಿರುವುದು ಕಂಡುಬಂತು. ನಂತರ ಲಾರಿಯಲ್ಲಿದ್ದ 65 ಜನರನ್ನೂ ಸಮಾಜಕಲ್ಯಾಣ ಇಲಾಖೆಯ ವಸತಿ ಗೃಹದಲ್ಲಿ ಸಾಂಸ್ಥಿಕ ಕ್ವಾರಂಟೈನ್​ಗೆ ಕಳುಹಿಸಲಾಗಿದೆ. ಲಾರಿಯು ಉತ್ತರಪ್ರದೇಶದಿಂದ ಇತ್ತೀಚೆಗೆ ಬೆಂಗಳೂರಿಗೆ ಬಂದಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಯಾವುದೇ ಲೋಡು ಸಿಗದ ಕಾರಣ ಚಾಲಕ ಖಾಲಿ ಲಾರಿ ವಾಪಸ್ ಹೋಗುವ ಸಮಯದಲ್ಲಿ ತನಗೆ ಪರಿಚಯದರಿಗೆ ವಿಷಯ ತಿಳಿಸಿದ್ದಾನೆ. ಆಗ ಬೆಂಗಳೂರು, ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಉತ್ತರಪ್ರದೇಶ ಮೂಲದವರೆಲ್ಲ ಲಾರಿ ಹತ್ತಿದ್ದಾರೆ. ಬೆಂಗಳೂರಿನಿಂದ ಹಾವೇರಿಯವರೆಗೆ ಹೇಗೋ ಚೆಕ್​ಪೋಸ್ಟ್ ತಪ್ಪಿಸಿಕೊಂಡು ಬಂದ ಲಾರಿ ಚಾಲಕ ಹಾವೇರಿಯಲ್ಲಿ ಸೆರೆ ಸಿಕ್ಕಿದ್ದಾನೆ. ಲಾರಿ ಚಾಲಕ ಉತ್ತರಪ್ರದೇಶದ ಅಬೀದ್​ಅಲಿ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ್ ಶಂಕರ ಜಿ.ಎಸ್., ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts