More

    ಉತ್ತಮ ಸಂಸ್ಕಾರವಿದ್ದರೆ ಸಾಧನೆ ಸಾಧ್ಯ

    ಮಾಂಜರಿ: ಶಿಕ್ಷಣ ಎಂಬುದು ಅಮೂಲಾಗ್ರ ಆಸ್ತಿ. ಆ ಆಸ್ತಿ ಹಾಳು ಮಾಡಿಕೊಳ್ಳದೆ ಸಮಗ್ರವಾಗಿ ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಅತ್ಯುನ್ನತವಾದುದನ್ನು ಸಾಧಿಸಬಹುದು ಎಂದು ಶ್ರೀಶೈಲ ಜಗದ್ಗುರು ಹಾಗೂ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನಮಠದ ಧರ್ಮಾಧಿಕಾರಿ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಮೀಪದ ಇಂಗಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಾಕಾಳಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ರೂಢಿಸಿಕೊಂಡರೆ ಉನ್ನತ ಶಿಕ್ಷಣ ಹಾಗೂ ಉದ್ಯೋಗದೊಂದಿಗೆ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

    ಅಪರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಗಡೇದ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಬದುಕಿನಲ್ಲಿ ಉತ್ತಮ ಮೌಲ್ಯ ಅಳವಡಿಸಿಕೊಂಡರೆ ನೆಮ್ಮದಿ ಕಾಣಬಹುದು ಎಂದರು. ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಸಂಜಯ ಪನೆದೆ, ಭೂಪಾಲ ಪನದೆ, ಎಂ.ಲಕ್ಷ್ಮೇಶ್ವರ, ಆರ್.ಬಿ.ಹೊಸಳ್ಳಿ, ಡಾ.ಎಸ್.ಎನ್.ಬೋಲೆ, ಸದಾಶಿವ ಮಿರ್ಜಿ, ಶಶಿಕಾಂತ ಧನವಾಡೆ, ಅಪ್ಪಾಸಾಬ ಸೌಂದಲಗಿ, ಅಪ್ಪಾಸಾಹೇಬ ಜತ್ರಾಟೆ, ಶಿವಾಜಿ ಶಿಂಧೆ, ಲಕ್ಷ್ಮಣ ಮದಬಾವಿ ಇತರರು ಇದ್ದರು.

    ಅಶೋಕ ಹೊನಮಾನೆ ಸ್ವಾಗತಿಸಿದರು. ಅಜಿತ ಹಳೆ ನಿರೂಪಿಸಿದರು. ಏಕನಾಥ ಜಾಧವ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts