More

    ಉತ್ತಮ ಆಹಾರ ಪದ್ಧತಿಯಿಂದ ಕಾಯಿಲೆಗಳು ದೂರ: ಡಾ. ಪ್ರವೀಣ್ ಜಾಕೋಬ್

    ಭದ್ರಾವತಿ: ನಮ್ಮ ಆರೋಗ್ಯ ರಕ್ಷಣೆ ಆಹಾರದಿಂದ ಸಾಧ್ಯವೇ ಹೊರತು ನಾವು ಸೇವಿಸುವ ಔಷಧಿಗಳಿಂದಲ್ಲ. ಉತ್ತಮ ಆಹಾರ ಪದ್ಧತಿಯಿಂದ ಅನುವಂಶೀಯ ಕಾಯಿಲೆಗಳಿಂದ ಮುಕ್ತರಾಗಲು ಸಾಧ್ಯ ಎಂದು ಶಿರಸಿಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು ಮುಖ್ಯ ಸಲಹೆಗಾರ ಫ್ರ್ರೊ. ಡಾ. ಪ್ರವೀಣ್ ಜಾಕೋಬ್ ಹೇಳಿದರು.
    ನ್ಯೂ ಟೌನ್ ಸರ್‌ಎಂವಿ ಸರ್ಕಾರಿ ಕಲಾ ಹಾಗೂ ವಾಣಿಜ್ಯ ಕಾಲೇಜು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆಹಾರ ಆರೋಗ್ಯಕ್ಕೆ ದಿವ್ಯ ಔಷಧ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
    ಬ್ರಿಟಿಷರ ಆಹಾರ ಪದ್ಧತಿಯ ಅನುಕರಣೆಯಿಂದ ದಿನಕ್ಕೆ 5 ಬಾರಿ ಆಹಾರ ಸೇವನೆ ಮಾಡುತ್ತಾ ಮಧುಮೇಹ, ರಕ್ತದೊತ್ತಡ, ಒಬಿಸಿಟಿಯಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಆರೋಗ್ಯಕರ ಜೀವನಕ್ಕಾಗಿ ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸಬೇಕು. ತಪ್ಪು ಗ್ರಹಿಕೆಗಳನ್ನು ಕೈಬಿಟ್ಟು ಬೆಣ್ಣೆ, ತುಪ್ಪದಂತಹ ಒಳ್ಳೆಯ ಕೊಬ್ಬುಯುಕ್ತ ಆಹಾರ, ತರಕಾರಿ, ದ್ರಾಕ್ಷಿ, ಗೋಡಂಬಿ, ಮೊಳಕೆ ಕಾಳುಗಳ ಹೆಚ್ಚೆಚ್ಚು ಬಳಕೆ ಮಾಡಬೇಕು ಎಂದರು.
    ಮನುಷ್ಯನ ದೇಹಕ್ಕೆ ಶಕ್ತಿ ತುಂಬುವ ಮೊದಲು ಆತನ ಮನಸ್ಸಿಗೆ, ಮೆದುಳಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಆಗ ದೇಹದ ಅಂಗಾಂಗಗಳೂ ಚಟುವಟಿಕೆಯಿಂದಿ ಇರುತ್ತವೆ ಎಂದು ತಿಳಿಸಿದರು.
    ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಮನುಷ್ಯನಿಗೆ ಅಧಿಕಾರ ಅಂತಸ್ತು ಇದ್ದರೆ ಸಾಲದು ಉತ್ತಮ ಆರೋಗ್ಯ ಇರಬೇಕು. ಆರೋಗ್ಯವಿಲ್ಲದಿದ್ದರೆ ಎಲ್ಲವೂ ಶೂನ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದನ್ನು ಕಾಪಾಡುವ ಹೊಣೆಗಾರಿಕೆ ನಮ್ಮದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts