More

    ಉಗ್ಗಿನಕೇರಿಯಲ್ಲಿ 3ನೇ ಹೊರಬೀಡು

    ವಿಜಯವಾಣಿ ಸುದ್ದಿಜಾಲ ಮುಂಡಗೋಡ: ತಾಲೂಕಿನ ಉಗ್ಗಿನಕೇರಿ ಗ್ರಾಮದೇವಿ ಮಾರಿಕಾಂಬಾ ಜಾತ್ರೆ ಮಾ. 25ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಂಗಳವಾರ ಮೂರನೇ ಹೊರಬೀಡು ಆಚರಣೆ ಮಾಡಿದರು.

    ಒಟ್ಟು ಐದು ಹೊರಬೀಡುಗಳನ್ನು ಆಚರಿಸಲಾಗುತ್ತಿದ್ದು, 4 ಮಂಗಳವಾರ ಹಾಗೂ 1 ಶುಕ್ರವಾರ ಹೊರ ಬೀಡು ಬಂದಿದ್ದು, ಆಗ ಗ್ರಾಮಸ್ಥರು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಜಾನುವಾರುಗಳೊಂದಿಗೆ ಗ್ರಾಮದ ಗಡಿ ಬಿಟ್ಟು ಹೊರಗೆ ಹೋಗಿ ವಾಸ್ತವ್ಯ ಮಾಡುತ್ತಾರೆ. ಬೆಳಗ್ಗೆ ಮನೆಯಿಂದ ಹೊರಡುವಾಗ ಮನೆ ಬಾಗಿಲಲ್ಲಿ ನೀರು ತುಂಬಿ ಇಡುತ್ತಾರೆ. ಸಂಜೆ 5ರ ನಂತರ ಮನೆ ಒಳಗೆ ಬರುವಾಗ ಆ ನೀರನ್ನು ಸಿಂಪಡಿಸಿ ಪೂಜೆ ಮಾಡಿ ಒಳಗೆ ಬರುವುದು ಹೊರಬೀಡು ಆಚರಣೆಯ ವಿಶೇಷವಾಗಿದೆ ಎನ್ನುತ್ತಾರೆ ಗ್ರಾಮಸ್ಥ ಮಂಜುನಾಥ ಹಿರೇಮಠ.

    ಬಿಕೋ ಎನ್ನುತ್ತಿದ್ದ ಗ್ರಾಮ: ಹೊರಬೀಡು ಆಚರಣೆಯ ದಿನವಾದ ಮಂಗಳವಾರ ಉಗ್ಗಿನಕೇರಿ ಗ್ರಾಮ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಜಾತಿ- ಧರ್ಮದ ಬೇಧವಿಲ್ಲದೆ ಎಲ್ಲರೂ ಗ್ರಾಮವನ್ನು ತೊರೆದು ಊರಾಚೆಗಿನ ತೋಟ, ಗದ್ದೆಗಳಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts