More

    ಈಜಾಟಕ್ಕೂ ಕರೊನಾ ಹಾಕಿದೆ ಲಗಾಮು

    ಕುಮಟಾ: ಕೆರೆಕಟ್ಟೆಗಳು ತುಂಬಿ ಕಂಗೊಳಿಸುತ್ತಿದ್ದರೂ ಕರೊನಾ ಸಮಸ್ಯೆಯಿಂದ ಈಜು ಪ್ರಿಯರು ನಿರಾಸೆ ಅನುಭವಿಸುವಂತಾಗಿದೆ.

    ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಲವು ಪ್ರಮುಖ ಈಜು ತಾಣಗಳಾಗಿದ್ದ ಸಣ್ಣದೊಡ್ಡ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಹೆಗಡೆ, ಹೊಲನಗದ್ದೆ, ಮಾನೀರ, ಮೂರೂರು, ಕೆರಗಜನಿ, ಗೋರೆ, ತೆಪ್ಪ, ಕಲ್ಲಬ್ಬೆ, ವಾಟೆಕೇರಿ, ಬೆದ್ರಗೇರಿ, ವಾಲಗಳ್ಳಿ, ಕಲ್ಕೆರೆ, ಖಂಡಗಾರ ಸೇರಿ 30ಕ್ಕೂ ಹೆಚ್ಚು ಕಡೆಗಳಲ್ಲಿ ಮಂದಿರಗಳ ಬಳಿ ಹಾಗೂ ಊರಂಚಿನ ಕೆರೆಕಟ್ಟೆಗಳು ಸಾರ್ವಜನಿಕರಿಗೆ ಸ್ನಾನಕ್ಕಾಗಿ ಅಥವಾ ಈಜಿಗಾಗಿ ಬಳಕೆಯಾಗುತ್ತಿದ್ದವು. ಅವೆಲ್ಲವೂ ಈ ವರ್ಷದ ಮಳೆೆಗಾಲಕ್ಕೆ ಮೈದುಂಬಿಕೊಂಡರೂ ಜನ ನೀರಿಗೆ

    ಇಳಿಯುವುದಕ್ಕೆ ಅವಕಾಶ ವಿಲ್ಲವಾಗಿದೆ. ಮುಖ್ಯವಾಗಿ ರಥಬೀದಿಯ ವೆಂಕಟರಮಣ ಮಂದಿರದ ಆಡಳಿತಕ್ಕೆ ಒಳಪಟ್ಟ ಚಿತ್ರಿಗಿಯ ವಿಷ್ಣುತೀರ್ಥವು ಕುಮಟಾ ಹಾಗೂ ಸುತ್ತಮುತ್ತಲ ಈಜುಪ್ರಿಯರಿಗೆ ಅತ್ಯಂತ ನೆಚ್ಚಿನ ತಾಣವಾಗಿದೆ. ಇಲ್ಲಿ ಈಜು ಕಲಿಕೆಯ ಅವಕಾಶದ ಜತೆಗೆ ಸ್ಪರ್ಧೆಗಳು ಕೂಡ ನಡೆಯುತ್ತವೆ. ಇಲ್ಲಿ ಈಜು ಕಲಿತ ಹಲವು ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇದೇ ಕೆರೆಯಲ್ಲಿ ಪ್ರತಿವರ್ಷ ಜೂನ್-ಜುಲೈನಲ್ಲಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ದಿ. ಮೋಹನ ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ಮುಂತಾದ ಸಂಸ್ಥೆಗಳು ಸ್ಪರ್ಧೆ ನಡೆಸುತ್ತಿದ್ದವು. ಆದರೆ, ಈ ಬಾರಿ ಕರೊನಾ ಕಾರಣಕ್ಕೆ ಮಂದಿರದ ಆಡಳಿತ ಮಂಡಳಿ ವಿಷ್ಣುತೀರ್ಥದಲ್ಲಿ ಈಜನ್ನು ನಿರ್ಬಂಧಿಸಿದೆ.

    ಮಳೆಗಾಲದಲ್ಲಿ ಹೊಳೆ, ಹಳ್ಳಗಳು ಅಪಾಯಕಾರಿ ಆಗಿರುವುದರಿಂದ ಸುರಕ್ಷಿತ ಈಜಿಗೆ ಹೇಳಿಮಾಡಿಸಿದ್ದಲ್ಲ. ಹೀಗಾಗಿ ಈಜಿನ ಮೋಜಿಗೆ ಬ್ರೇಕ್ ಬಿದ್ದಿರುವುದು ಈಜು ಪ್ರಿಯರ ಪಾಲಿಗೆ ಬೇಸರದ ಸಂಗತಿಯಾಗಿದೆ.

    ನೀರಿನ ಸಮಸ್ಯೆ ಇರುವ ನಮ್ಮ ತಾಲೂಕಿನಲ್ಲಿ ಈಜಿಗೆ ಅವಕಾಶ ಇರುವುದೇ ಮಳೆಗಾಲದಲ್ಲಿ ಎನ್ನುವುದು ಸತ್ಯ. ಆದರೆ, ಕರೊನಾ ತಡೆಯುವ ಹೊಣೆ ಎಲ್ಲರದ್ದು. ಇದು ಅತ್ಯಂತ ಗಂಭೀರ ವಿಷಯವಾಗಿದ್ದು, ಸಾರ್ವಜನಿಕರು ಕೆರೆಕಟ್ಟೆಗಳಲ್ಲಿ ಈಜುವುದರಿಂದ ದೂರ ಉಳಿಯಬೇಕು. | ಅತುಲ ಕಾಮತ್ ಈಜುಪಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts