More

    ಇ-ಖಾತಾ ಅಕ್ರಮ ಯಾರಿಗೆ ಉರುಳು


    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಇ-ಆಸ್ತಿ ತಂತ್ರಾಂಶದಲ್ಲಿ ಒಟ್ಟು 1310 ಅನಕತ ಖಾತಾ ನಕಲುಗಳನ್ನು ನೀಡಿದ ಹಗರಣದ ಸಮಗ್ರ ತನಿಖೆ ನಡೆಸಲು ಜಿಲ್ಲಾಡಳಿತ ರಚಿಸಿದ್ದ ತಂಡ ಬರೋಬ್ಬರಿ 40 ದಿನಗಳ ನಂತರ ವರದಿ ಸಲ್ಲಿಕೆ ಮಾಡಿದ್ದು ತಿಳಿದು ಬಂದಿದ್ದು, ಇದು ಯಾರಿಗೆ ಉರುಳಾಗಲಿದೆ ಎಂಬ ಚರ್ಚೆಗಳು ಶುರುವಾಗಿವೆ.


    ಏನಿದು ಹಗರಣ?: ನಗರ ವ್ಯಾಪ್ತಿಯ ವ್ಯವಸಾಯ (ಗ್ರೀನ್ ಆ್ಯಂಡ್ ಯಲ್ಲೋ ಬೆಲ್ಟ್) ಜಮೀನಿನಲ್ಲಿ ಎನ್ಎ ಆಗದೆ ನಗರಾಭಿವೃದ್ಧಿ ಪ್ರಾಕಾರದಿಂದ ಲೇಔಟ್ಗಳನ್ನು ವಿನ್ಯಾಸಗೊಳಿಸಿದ ನಿವೇಶನಗಳನ್ನು ಸೃಷ್ಟಿಸಿ 2019ರಿಂದ ಈ ಸಾಲಿನ ಮಾಚರ್್ವರೆಗೆ ನಗರಸಭೆಯಲ್ಲಿ ಇ-ಖಾತಾ ನೀಡಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ 18.12 ಕೋಟಿ ರೂ. ನಷ್ಟವಾಗಿರುವುದು ಖಾತರಿಯಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಧಿಕಾರಿ ಡಾ.ಸುಶೀಲಾ, ತನಿಖಾ ತಂಡ ರಚಿಸುವಂತೆ ನಗರಾಭಿವೃದ್ಧಿ ಪ್ರಾಕಾರದ ಯೋಜನಾ ನಿರ್ದೇಶಕರಿಗೆ ಸೆ.17ರಂದು ನಿರ್ದೇಶನ ನೀಡಿದ್ದರು.


    15 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶದಲ್ಲಿ ಸ್ವಷ್ಪವಾಗಿ ತಿಳಿಸಲಾಗಿತ್ತು. ಆದರೆ, ಸುದಿರ್ಘ 40 ದಿನಗಳ ನಂತರ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ.ನಷ್ಟ ಮಾಡಿದ ಬಗ್ಗೆ ದಾಖಲೆಗಳು ಸ್ಪಷ್ಟವಾಗಿ ತೋರಿಸಿದ್ದವು. ಈ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿಯನ್ನು ರಕ್ಷಿಸುವ ಕೆಲಸ ನಡೆಯುತ್ತಿವೆಯೇ? ಎಂಬ ಅನುಮಾನ ಸಹ ಈ ಹಿಂದೆ ಸಾರ್ವಜನಿಕರನ್ನು ಕಾಡಿದ್ದು ಸುಳ್ಳೇನಲ್ಲ.


    ಇಷ್ಟೂ ಸಾಲದೆಂಬಂತೆ ನಗರದಲ್ಲಿನ ವಿವಿಧ ಪ್ರದೇಶಗಳಲ್ಲಿನ ನಗರಸಭೆ ಒಡೆತನದ ಲಕ್ಷಾಂತರ ರೂ.ಬೆಲೆ ಬಾಳುವ ಸೈಟ್ಗಳನ್ನು ಡೀಡ್ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇದರಲ್ಲಿ ಖುದ್ದಾಗಿ ನಗರಸಭೆ ಕೆಲ ಪುರಪಿತೃಗಳ ಕೈವಾಡವಿರುವುದು ಸ್ಪಷ್ಟ.

    ಮೊದಲು ಪ್ರಕಟಿಸಿದ್ದೇ `ವಿಜಯವಾಣಿ’

    ನಗರಸಭೆಯಲ್ಲಿ ನಡೆದಿರುವ ಹಗರಣಗಳನ್ನು ಪ್ರಕಟಿಸಿದ್ದೇ `ವಿಜಯವಾಣಿ’. ಸರಣಿ ಲೇಖನಗಳ ಮೂಲಕ ಸರಕಾರಿ ಹಾಗೂ ಜಿಲ್ಲಾಡಳಿತವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತ್ತು. ಇದರ ಜತೆಗೆ ಆಹಾರ ನಿಗಮದ ಗೋದಾಮು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದು, ಸೇರಿ ನಾನಾ ಹಗರಣ ಮಾಧ್ಯಮಗಳು ನಿರಂತರವಾಗಿ ವರದಿ ಪ್ರಕಟಿಸಿದ್ದವು. ಜಿಲ್ಲಾಡಳಿತ ಕೊನೆಗೂ ತನಿಖಾ ತಂಡ ರಚಿಸಿತ್ತು.

    ಯಾರಿದ್ದರು ತಂಡದಲ್ಲಿ?
    ಇ-ಖಾತಾ ಹಗರಣಕ್ಕೆ ಸಂಬಂಸಿದಂತೆ ತನಿಖೆ ನಡೆಸಲು ಜಿಲ್ಲಾಡಳಿತ 4 ಜನ ಅಧಿಕಾರಿಗಳ ತಂಡ ರಚಿಸಿತ್ತು. ಇದರಲ್ಲಿ ಯುಡಾ ಎಇ ಸೋಮು ರಾಠೋಡ್, ಸುರಪುರ ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ಸ, ಕಂದಾಯ ಅಧಿಕಾರಿ ವೆಂಕಟೇಶ ಹಾಗೂ ಕಂದಾಯ ನಿರೀಕ್ಷಕ ಶರಣಬಸವ ಇದ್ದಾರೆ. ಇದಲ್ಲದೆ, ಆಹಾರ ನಿಗಮದ ಗೋದಾಮುಗಳಿಗೆ ಅಕ್ರಮವಾಗಿ ಬೈ ನಂಬರ್ ಸೃಷ್ಠಿಸಿ ಖಾಸಗಿ ಯವರಿಗೆ ಮಾರಾಟ ಮಾಡಲಾಗಿದೆ. ಈ ಹಗರಣ ಪತ್ತೆ ಹಚ್ಚಲು ಕೆಕೆಆರ್ಡಿಬಿಯ ಇಬ್ಬರು ಅಧಿಕಾರಿಗಳ ತಂಡ ಕಳೆದ ತಿಂಗಳು ನಗರಸಭೆಯಲ್ಲಿ ನಾಲ್ಕೆದು ದಿನಗಳ ಕಾಲ ಠಿಕಾಣಿ ಹೊಡೆದಿತ್ತು. ಸಧ್ಯ ಜಂಟಿ ವರದಿ ಸಲ್ಲಿಕೆಯಾದ ಬಗ್ಗೆ ತಿಳಿದು ಬಂದಿದ್ದು ಇದು ಬಹಿರಂಗವಾದರೆ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ಹಣೆಬರಹ ತಿಳಿಯಲಿದೆ.

    ಯಾರಿಗೆ ಹೊಡೆಯಲಿದೆ ಝಟ್ಕಾ!
    ಸಧ್ಯ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರು ರಜೆ ಮೇಲಿದ್ದಾರೆ ಎನ್ನಲಾಗಿದೆ. ಅವರು ಬಂದ ತಕ್ಷಣ ತನಿಖಾ ವರದಿ ಸರಕಾರಿಕ್ಕೆ ಸಲ್ಲಿಸಲಿದ್ದು, ಈ ಹಗರಣ ಯಾರಿಗೆ ಉರುಳಾಗಲಿದೆ ಎಂಬುದು ಕುತೂಹಲ. ಹಿಂದಿನ ಪೌರಾಯುಕ್ತ ಸಂಗಪ್ಪ ಉಪಾಸೆ, ಈ ಪ್ರಕರಣದಲ್ಲಿ ಅರ್ಧ ಡಜನ್ಗೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಹೆಸರು ಉಲ್ಲೇಖಿಸಿ, ತನಿಖೆ ನಡೆಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು. ವರದಿಯಲ್ಲಿ ಯಾರಿಗೆ ಝಟ್ಕಾ ಹೊಡೆಯಲಿದೆ ಎಂಬುದು ಸಧ್ಯ ಕಾದು ನೋಡಬೇಕಿದೆ.

    ಅನಧಿಕೃತ ಖಾತಾ ನಕಲುಗಳನ್ನು ನೀಡಿದ ಹಗರಣಕ್ಕೆ ಸಂಬಂಸಿದಂತೆ ತನಿಖಾ ತಂಡ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
    | ಶರಣಬಸಪ್ಪ ಕೋಟೆಪ್ಪಗೊಳ ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts