More

    ಇಳಕಲ್ಲ ನಗರದಲ್ಲಿ ಆಕರ್ಷಕ ಪಥಸಂಚಲನ

    ಬಾಗಲಕೋಟೆ: ಜಿಲ್ಲೆಯ ಇಳಕಲ್ಲ ನಗರದಲ್ಲಿ ರಾಷ್ಟ್ರಸ್ವಯಂ ಸೇವಕ ಸಂಘದ ಆಕರ್ಷಕ ಪಥಸಂಚಲನ ಗುರುವಾರ
    ನಡೆಯಿತು.

    ಮೋಡಕವಿದ ವಾತಾರಣ ಹಾಗೂ ಅಲ್ಲಲ್ಲಿ ಜಿಟಿಜಿಟಿ ಮಳೆಯಾದರೂ ಸಹ ಅದನ್ನು ಲೆಕ್ಕಿಸದೇ ಇಳಕಲ್ಲ ನಗರದ ಚಂದ್ರಶೇಖರ ಆಜಾದ್ ಸರ್ಕಲ್ ಬಳಿಯ ಪೊಲೀಸ್ ಬಯಲಿನಲ್ಲಿ ಆರ್ ಎಸ್ ಎಸ್ ನ ಗಣವೇಷಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

    ಚಂದ್ರಶೇಖರ್ ಆಜಾದ್, ಸರ್ಕಲ್‌ನಿಂದ ಆರಂಭವಾದ ಪಥಸಂಚಲನ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ ಹತ್ತು, ಸುಭಾಷ್ ರಸ್ತೆ , ಮಹಾಂತೇಶ ಚಿತ್ರಮಂದಿರ , ಸಾಲಪೇಟೆ ಬನಶಂಕರಿ ದೇವಸ್ಥಾನ ಗಣೇಶ ಭವನ, ಗ್ರಾಮ ಚಾವಡಿ , ಗಾಂಧಿ ಚೌಕ, ನೆಹರು ಬೀದಿ, ಬಸವನಗುಡಿ, ತರಕಾರಿ ಮಾರುಕಟ್ಟೆ, ರಾಮಮಂದಿರ , ಕೊಪ್ಪರದಪೇಟೆ ಬನಶಂಕರಿ ದೇವಸ್ಥಾನ, ಅಂಬಾಭವಾನಿ ದೇವಸ್ಥಾನ, ಬನ್ನಿ ಕಟ್ಟೆ , ಹಳೆಯ ಸರ್ಕಾರಿ ಆಸ್ಪತ್ರೆ, ಸಿಂಗದವರ ಓಣಿ , ಡಮಾಮ ಗಿರಣಿ , ಎಸಿಓ ಶಾಲೆ, ಕೋಳಿ ಪೇಟೆ, ಗೊರಬಾಳ ನಾಕಾ , ಸೆಂಟ್ರಲ್ ಸ್ಕೂಲ್, ಕಂಠಿ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಮಹಾಂತ ಗಂಗೋತ್ರಿಯ ವೀರಮಣಿ ಕ್ರೀಡಾಂಗಣಕ್ಕೆ ತಲುಪಿ ಅಲ್ಲಿ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.

    ನಗರದ ವಿವಿಧ ರಸ್ತೆಗಳಲ್ಲಿ ನಡೆದ ಪಥ ಸಂಚಲನಕ್ಕೆ ಮಾರ್ಗದುದ್ದಕ್ಕೂ ದೇಶಭಕ್ತರು, ಧಾರ್ಮಿಕ ಮುಖಂಡರ ಛದ್ಮವೇಷದಲ್ಲಿ ಪುಟಾಣಿ ಮಕ್ಕಳು ಹೆಚ್ಚಿನ‌ ಮೆರಗು ತಂದುಕೊಟ್ಟರು. ಇನ್ನು ಗಣವೇಷಧಾರಿಗಳಿಗೆ ರಸ್ತೆಯುದ್ದಕ್ಕೂ ಜನರು ಹೂಮಳೆಗರೆದು ಸ್ವಾಗತ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts