More

    ಇನ್ಮುಂದೆ ನಿನ್ನ ಆಟ ನಡೆಯಲ್ಲ: ಶಾಸಕ ರಮೇಶ್‌ಕುಮಾರ್‌ಗೆ ಮುನಿಯಪ್ಪ ಎಚ್ಚರಿಕೆ

    ಕೋಲಾರ: ಮಿಸ್ಟರ್ ರಮೇಶ್‌ಕುವಾರ್, ಬುದ್ಧಿವಂತ ಅಂತ ಹೇಳಿ ನನ್ನನ್ನು ಆಟ ಆಡಿಸೋಕೆ ನೋಡ್ತೀಯಾ? ಇನ್ನು ಮುಂದೆ ನಿನ್ನ ಆಟ ನಡೆಯಲ್ಲ ಎಂದು ಕೇಂದ್ರ ವಾಜಿ ಸಚಿವ ಕೆ.ಎಚ್.ಮುನಿಯಪ್ಪ ವಾಜಿ ಸ್ಪೀಕರ್ ರಮೇಶ್‌ಕುವಾರ್ ಅವರನ್ನು ಎಚ್ಚರಿಸಿದರು.

    ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ವಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಹೈಕವಾಂಡ್ ನಿರ್ದೇಶನದಂತೆ ಸುಮ್ಮನಿದ್ದೆ. ಆದರೆ ಎಲ್ಲೆಡೆ ಎಲ್ಲರನ್ನು ಎತ್ತಿಕಟ್ಟುವುದು, ನನ್ನ ವಿರುದ್ಧ ಪಿತೂರಿ ನಡೆಸಿದರೂ ಸುಮ್ಮನಿರಬೇಕಾ? ಇನ್ನು ಮುಂದೆ ನಿಮ್ಮೆಲ್ಲರ ಆಟ ನಡೆಯಲ್ಲ. ಡ್ರಾವಾ ಇಲ್ಲಿಗೇ ನಿಲ್ಲಿಸಬೇಕಾಗುತ್ತದೆ. ನಿಮ್ಮ ಬುದ್ದಿವಂತಿಕೆ ವಾತುಗಳಿಂದ ಯಾರನ್ನೂ ಮರುಳು ವಾಡಲಾಗುವುದಿಲ್ಲ ಎಂದರು.

    ಜೆಡಿಎಸ್ ಸೇರಿ ಎಲ್ಲ ಪಾರ್ಟಿ ಸುತ್ತಿ ಬಂದಿದ್ದೀರಿ. ಅಲ್ಲಿದ್ದಾಗ ದೇವೇಗೌಡರು ಸರಿಯಿಲ್ಲ ಎಂದು ಹೇಳಿಕೊಳ್ಳುತ್ತಿದ್ದಿರಿ. ಕಾಂಗ್ರೆಸ್‌ಗೆ ಬಂದ ಮೇಲೆ ಇಲ್ಲಿ ಅವರು ಸರಿಯಿಲ್ಲ, ಇವರು ಸರಿಯಿಲ್ಲ ಎಂದು ಹೇಳಿಕೊಂಡು ಪಕ್ಷ ಕಟ್ಟುವ ಬದಲು ಗುಂಪುಗಳನ್ನು ಕಟ್ಟಿ ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದೀರಿ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಈ ಅವಧಿಯಲ್ಲಿ ನಾನು ಏನು ಅಂತ ತೋರಿಸುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

    ನೀವು ಯಾವ ಬಡ ನಾಯಕರು? ಪಕ್ಷ ಬಿಟ್ಟು ಹೋಗುತ್ತೀನಿ ಅಂತೀರಾ? ನೀವು ಹೋದರೆ ಬೇರೆಯವರು ಬರುತ್ತಾರೆ. ಅವಿಭಜಿತ ಜಿಲ್ಲೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಿಸುವ ಶಕ್ತಿ ನನಗೆ ಇದೆ. ನಿಮ್ಮ ಯೋಗ್ಯತೆಗೆ ಯಾರ‌್ಯಾರಿಗೋ ಇಲ್ಲಸಲ್ಲದ್ದು ಹೇಳಿ ಹಾಳು ವಾಡುವ ಬದಲು ಗೆಲ್ಲಿಸಿಕೊಂಡು ಬನ್ನಿ ಎಂದು ಸವಾಲು ಹಾಕಿದರು.

    ಶ್ರೀನಿವಾಸಪುರದಲ್ಲಿ ನಿನ್ನ ಇತಿಹಾಸ ಏನೆಂದು ಎಲ್ಲರಿಗೂ ಗೊತ್ತು. ನಿಮ್ಮೂರಲ್ಲಿ ನಿನ್ನ ಕಥೆ ಬಿಚ್ಚಿಡುವಾಗ ನೀನು ಉತ್ತರ ನೀಡು. ಹೆಚ್ಚು ಮೆರೆಯಬೇಡ. ಸದ್ಯ ನಾನು ಹೈಕವಾಂಡ್ ವಾತಿಗೆ ಬದ್ಧನಾಗಿ ಸುಮ್ಮನಿದ್ದೇನೆ ಎಂದು ಏಕವಚನದಲ್ಲೇ ಗದಾಪ್ರಹಾರ ನಡೆಸಿದರು.

    ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಿ: ವಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಸೇರುತ್ತೇವೆಂದು ಪದೇಪದೆ ಹೇಳುತ್ತಿದ್ದು, ಅವರೇ ಹೇಳುವಂತೆ ಅವರಿಗೆ ಶಕ್ತಿ, ಸಾಮರ್ಥ್ಯವಿದ್ದರೆ ಅವರವರ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ನಿಂತು ಗೆದ್ದು ತೋರಿಸಲಿ ಎಂದು ಕೆ.ಎಚ್.ಮುನಿಯಪ್ಪ ಸವಾಲು ಹಾಕಿದರು.

    ಕೊತ್ತೂರು ಮಂಜುನಾಥ್, ಸುಧಾಕರ್ ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಏನೇನೋ ವಾತನಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ನಿಮಗೆ ಕಾಂಗ್ರೆಸ್ ಸೇರುತ್ತೇವೆಂದು ಹೇಳುವ ಅರ್ಹತೆ ಇದೆಯಾ? ವಾನ, ಮರ್ಯಾದೆ ಇದ್ದರೆ ಇನ್ನೊಮ್ಮೆ ಕಾಂಗ್ರೆಸ್ ಸೇರುತ್ತೇವೆ ಎಂದು ಹೇಳಬೇಡಿ. ನಿಮ್ಮನ್ನು ನಂಬಿ ಬಿಜೆಪಿ ಅಭ್ಯರ್ಥಿಗೆ ದಲಿತರು ಮತ್ತು ಮುಸ್ಲಿಮರು ಮತ ಹಾಕಿದ್ದಕ್ಕೆ ನೀವೇನು ವಾಡಿದಿರಿ? ಅವರ ರಕ್ಷಣೆಗೆ ನಿಂತಿದ್ದೀರಾ? ಎಂದು ಪ್ರಶ್ನಿಸಿದರು.

    ನಕಲಿ ಜಾತಿ ಪ್ರವಾಣ ಪತ್ರ ನೀಡಿ ಕ್ಷೇತ್ರದ ಜನರಿಗೆ ವಂಚನೆ ವಾಡಿದ ಕೊತ್ತೂರು ಮಂಜುನಾಥ್‌ಗೆ ಕೋರ್ಟ್‌ನಲ್ಲೂ ಛೀವಾರಿ ಹಾಕಲಾಗಿದೆ. ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ. ಹೀಗಿದ್ದರೂ ನೀವು ಕಾಂಗ್ರೆಸ್‌ಗೆ ಏಕೆ ಬರುತ್ತೀಯಾ? ನೀವೊಬ್ಬ ಮಹಾನಾಯಕ ಅಲ್ಲವೇ? ಹಾಗಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ತೋರಿಸಿ ಎಂದು ಛೇಡಿಸಿದರು.

    ವಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ತಂದೆ ಚೌಡರೆಡ್ಡಿ ನನ್ನ ಆತ್ಮೀಯರಾಗಿದ್ದರು. ಆದರೆ ಇವರು ನನ್ನ ವಿರುದ್ಧ ವಾತನಾಡುತ್ತಲೇ ಇದ್ದಾರೆ. ಬಿಜೆಪಿ ಸಂಸದ ಮುನಿಸ್ವಾಮಿಯನ್ನು ತಲೆ ಮೇಲೆ ಹೊತ್ತು ಗೆಲ್ಲಿಸಿದವರು ಇವರಲ್ಲವೇ? ಎಂದು ಟೀಕಿಸಿದರು.
    ಮುಖಂಡರಾದ ಊರುಬಾಗಿಲು ಶ್ರೀನಿವಾಸ್, ದಳಸನೂರು ಗೋಪಾಲಕಷ್ಣ, ಪ್ರಸಾದ್ ಬಾಬು, ಉದಯ ಶಂಕರ್, ಜಯದೇವ್, ನಾಗರಾಜ್, ಜಯರಾಮ್, ಇಕ್ಬಾಲ್, ಶಿವಕುವಾರ್, ಲಾಲ್ ಬಹದ್ದೂರ್ ಶಾಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts