More

    ಇನ್ನಷ್ಟು ಜನರಿಗೆ 10ರಂದು ಲಸಿಕೆ

    ಕಾರವಾರ: ಜಿಲ್ಲೆಯಲ್ಲಿ ಎರಡನೇ ಹಂತದ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆತಿದೆ. ಕೋವಿಡ್ ಸಂದರ್ಭದಲ್ಲಿ ಫ್ರಂಟ್ ಲೈನ್ ವರ್ಕರ್ರ್ಸ್ ಎಂದು ಪರಿಗಣಿಸಲ್ಪಟ್ಟಿರುವ ಪೊಲೀಸರು, ನಗರಾಭಿವೃದ್ಧಿ, ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರರು ಸೇರಿ 5558 ಜನರನ್ನು ಲಸಿಕೆ ನೀಡಲು ಗುರುತಿಸಲಾಗಿದೆ.

    ಜಿಲ್ಲೆಯ 16 ಕೇಂದ್ರಗಳಲ್ಲಿ ಸೋಮವಾರ ಕೋವಿ ಶೀಲ್ಡ್ ಲಸಿಕೆ ನೀಡಲಾಗಿದ್ದು, ಫೆ. 10ರಂದು ಇನ್ನಷ್ಟು ಜನರಿಗೆ ನೀಡಲಾಗುತ್ತದೆ. ಮೊದಲ ದಿನ 2,678 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. 1192 ಜನ (ಶೇ.44.51)ಮಾತ್ರ ಲಸಿಕೆ ಪಡೆದಿದ್ದಾರೆ. ಫೆ.10 ರಂದು 2,880 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

    ಸಾಧನೆ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಇಲಾಖೆಯ ನೌಕರರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ 14,834 ಜನರನ್ನು ಲಸಿಕೆ ಪಡೆಯಲು ಪಟ್ಟಿ ಮಾಡಲಾಗಿತ್ತು. ಅದರಲ್ಲಿ 11,100 ಜನ ಮಾತ್ರ ಪಡೆದುಕೊಂಡಿದ್ದಾರೆ. ಲಸಿಕೆ ನೀಡಿಕೆಯಲ್ಲಿ ಜಿಲ್ಲೆ ಶೇ. 75 ರಷ್ಟು ಸಾಧನೆ ಮಾಡಿದೆ. ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಕೆಲವರ ಹೆಸರು ಎರಡೆರಡು ಬಾರಿ ದಾಖಲಾಗಿತ್ತು. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಕೆಲವು ಗಂಭೀರ ಕಾಯಿಲೆ ಇರುವವರಿಗೆ ಲಸಿಕೆ ನೀಡಿಲ್ಲ. ಇದನ್ನು ಹೊರತಾಗಿಯೂ ಪಟ್ಟಿಯಲ್ಲಿದ್ದ ಅಂದಾಜು 2700 ರಷ್ಟು ಜನ ಲಸಿಕೆ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

    ಸದ್ಯ ನಮ್ಮ ಬಳಿ ಸಂಗ್ರಹ ಇದ್ದ ಕೋವಿ ಶೀಲ್ಡ್ ಲಸಿಕೆಯನ್ನೇ ಎರಡನೇ ಹಂತದಲ್ಲಿ ಬಳಸಲಾಗಿದೆ. ಮೊದಲು ಲಸಿಕೆ ಪಡೆದವರಿಗೆ ಎರಡನೇ ಡೋಸ್ ನೀಡುವ ಕಾರ್ಯ ಫೆ. 13ರಿಂದ ಪ್ರಾರಂಭವಾಗಲಿದೆ.

    ಡಾ.ಶರದ್ ನಾಯಕ, ಡಿಎಚ್​ಒ, ಕಾರವಾರ

    ಯಾವುದೇ ಲಸಿಕೆ ಪಡೆದರೂ ಜ್ವರ, ಕೈ ನೋವು ಸಾಮಾನ್ಯ. ಲಸಿಕೆ ಅತ್ಯಂತ ಸುರಕ್ಷಿತವಾಗಿದೆ. ಅದರ ಬಗ್ಗೆ ಜನ ಭಯಪಡುವ ಅಗತ್ಯವಿಲ್ಲ.

    ಡಾ.ಹರೀಶ ಕುಮಾರ ಕೆ. ,ಜಿಲ್ಲಾಧಿಕಾರಿ ಉತ್ತರ ಕನ್ನಡ

    ಅಂಗಡಿ ಹಾಕಲು ಅವಕಾಶವಿಲ್ಲ

    ಕಾರವಾರ:ಜನರ ಜೀವನ ಹಾಗೂ ಜೀವ ಎರಡಕ್ಕೂ ನಾವು ಮಹತ್ವ ನೀಡಬೇಕಿದೆ. ಕೋವಿಡ್ ನಂತರ ಜಿಲ್ಲೆಯಲ್ಲಿ ಜಾತ್ರೆಗಳಿಗೆ ಅವಕಾಶ ನೀಡಿದರೂ ಆ ಸಂದರ್ಭದಲ್ಲಿ ಅಂಗಡಿ ಹಾಕಲು ಅವಕಾಶ ನೀಡುತ್ತಿಲ್ಲ. ಮಾಸ್ಕ್ ಕಡ್ಡಾಯ ನಿಯಮ ಇನ್ನೂ ಜಾರಿಯಲ್ಲಿದೆ. ಜನ ನಮ್ಮ ಉದ್ದೇಶವನ್ನು ಅರಿತು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಹೇಳಿದ್ದಾರೆ. ಕೇರಳದಲ್ಲಿ ಕೋವಿಡ್ ಪ್ರಕರಣ ಹೆಚ್ಚಿದರೂ ಜಿಲ್ಲೆಗೆ ಯಾವುದೇ ಆತಂಕವಿಲ್ಲ. ಇನ್ನು ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆದರೆ, ಸಾವುಗಳು ಸಂಭವಿಸುತ್ತಿಲ್ಲ. ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts