More

    ಇದೇನಾ ಡಬಲ್ ಇಂಜಿನ್ ಸರ್ಕಾರ?

    ಕಲಬುರಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಇರೋದು ಓಕೆ. ಆದರೆ ಡಬಲ್ ಇಂಜಿನ್ ಸಕರ್ಾರ ಹೇಗಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಟುವಾಗಿ ಪ್ರಶ್ನೆ ಹಾಕಿದ್ದಾರೆ.
    ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಚರ್ಚಿಸಿದ ವಿಷಯಗಳ ಕುರಿತು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದ ಜನರಿಗೆ ಸುಳ್ಳು ಹೇಳಿ ಯಾಮಾರಿಸುವುದೇ ಡಬಲ್ ಇಂಜಿನ್ ಸರ್ಕಾರವೇ ಎಂದು ಹರಿಹಾಯ್ದರು.
    ಪ್ರವಾಹದಿಂದ ರಾಜ್ಯದಲ್ಲಿ 35,000 ಕೋಟಿ ರೂ. ಹಾನಿ ಆಗಿದ್ದರೂ ಕೇಂದ್ರ ಕೇವಲ 1860 ಕೋಟಿ ರೂ. ಬಿಡುಗಡೆ ಮಾಡಿದೆ. ಇದು ಪರಿಹಾರ ಬಿಡುಗಡೆ ಮಾಡುವ ರೀತಿಯಾ? ಕಲ್ಯಾಣ ಕನರ್ಾಟಕದಲ್ಲಿ 371(ಜೆ) ಅಡಿ ಯುವಕರಿಗೆ ಉದ್ಯೋಗ ದೊರಕಿಸಿಲ್ಲ. ಕೆಕೆಆರ್ಡಿಬಿಗೆ ಅನುದಾನ ಕಡಿತಗೊಳಿಸಲಾಗಿದೆ. ಇದನ್ನು ಅಭಿವೃದ್ಧಿ ಎನ್ನಬೇಕಾ? ಡಬಲ್ ಇಂಜಿನ್ ಎಲ್ಲಿದೆ ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿದರು.
    ಸಂಕಲ್ಪ ಸಮಾವೇಶದಲ್ಲಿ ಹಲವರು ನೀಡಿದ ಸಲಹೆಗಳನ್ನು ಪರಿಗಣಿಸಿ 2021 ಅನ್ನು ಕಾಂಗ್ರೆಸ್ ಹೋರಾಟ ಮತ್ತು ಸಂಘಟನೆ ವರ್ಷವನ್ನಾಗಿ ಘೋಷಿಸಿದರು. ಮಾಸ್ನಿಂದ ಕೇಡರ್ ಬೇಸ್(ಕಾರ್ಯಕರ್ತರ) ಪಕ್ಷವನ್ನಾಗಿಸಲು ಆದ್ಯತೆ ನೀಡಲಾಗುವುದು. 150ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಹೋರಾಟ ನಡೆಸಲಾಗುವುದು. ಎಲ್ಲ ಬ್ಲಾಕ್ ಅಧ್ಯಕ್ಷರ ನೇತೃತ್ವದಲ್ಲೇ ಹೋರಾಟ ನಡೆಯಲಿದ್ದು, ಶೀಘ್ರವೇ ವಿವರ ಪ್ರಕಟಿಸುವುದಾಗಿ ಹೇಳಿದರು.
    ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಸ್ಪಧರ್ಿಸಲು ಅಜರ್ಿ ಸಲ್ಲಿಸಿದವರ ಸಭೆ 20ರಂದು ಕರೆದಿದ್ದೇನೆ. ಚಚರ್ಿಸಿ ವರದಿಯನ್ನು ಹೈಕಮಾಂಡ್ಗೆ ಕಳಿಸುತ್ತೇನೆ ಎಂದು ಶಿವಕುಮಾರ್ ಹೇಳಿದರು.
    ಬಿಜೆಪಿ ಶಾಸಕ ಎಚ್.ವಿಶ್ವನಾಥ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿ ವಿಷಯ ಪ್ರಸ್ತಾಪಿಸಿರುವುದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಡಿಕೆಶಿ, ಯತ್ನಾಳ್ ನನ್ನನ್ನು ಫಾಲೋ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಬಹುಮತ ಕೊಡಿ, ಪಂಚರತ್ನ ಸಕರ್ಾರ ಕೊಡುತ್ತೇನೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ ಎಂದರು.
    ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ದೇಶದ ಶಕ್ತಿಯಾಗಿದೆ. ನೀವೆಲ್ಲರೂ ಪಕ್ಷದ ಶಕ್ತಿ. ನಿಮ್ಮಿಂದಲೇ ಪಕ್ಷ ಪ್ರಬಲವಾಗಿ ಬೆಳೆದು ನಾಡು ಮತ್ತು ದೇಶದಲ್ಲಿ ಒಂದು ಹೊಸ ಶಕ್ತಿಯಾಗಿ ರೂಪುಗೊಳ್ಳಬೇಕು. ನಾಯಕತ್ವ ಸಮರ್ಥವಿದ್ದರೆ ಸಾಲದು, ಎಷ್ಟು ಜನ ನಾಯಕರನ್ನು ತಯಾರು ಮಾಡಿದ್ದೀರಿ ಎಂಬುದು ಮುಖ್ಯ. ದೂರುಗಳನ್ನು ಆಲಿಸುವುದನ್ನು ನಿಲ್ಲಿಸಿ ಸಂಘಟನೆಯತ್ತ ಚಿತ್ತ ಹರಿಸಿ. ವ್ಯಕ್ತಿನಿಷ್ಠಕ್ಕಿಂತ ಪಕ್ಷದ ಪೂಜೆ ಮೂಲಕ ಎಲ್ಲ ಹಂತಗಳಲ್ಲಿ ಶಕ್ತಿ ತುಂಬಬೇಕು ಎಂದು ಸಮಾವೇಶದಲ್ಲಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
    ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ಡಾ.ಅಜಯಸಿಂಗ್ ಸ್ವಾಗತಿಸಿದರು. ಮಾಜಿ ಉಪ ಸಭಾಪತಿ ವಿ.ಆರ್. ಸುದರ್ಶನ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts