More

    ಇಟ್ಟಿಕೆರೆ ಹಿನ್ನೀರಿಗೆ ನಲುಗಿದ ಜನ

    ಲಕ್ಷೆ್ಮೕಶ್ವರ: ಭಾರಿ ಮಳೆಯಿಂದಾಗಿ ಪಟ್ಟಣದ ಹೊರವಲಯದ ಲಂಡಿ ಹಳ್ಳದ ನೀರಿನ ಹರಿವು ಹೆಚ್ಚಾಗಿ ಹಳ್ಳದಕೇರಿ, ಕೆಂಚಲಾಪುರ, ಆಸಾರ ಓಣಿ, ಅಂಬೇಡ್ಕರ್ ನಗರದ ಮನೆಗಳಿಗೆ ನೀರು ನುಗ್ಗಿದೆ. ಪಟ್ಟಣದ ಇಟ್ಟಿಕೆರೆ ಭರ್ತಿಯಾಗಿದ್ದರಿಂದ ಹಿನ್ನೀರಿನ ಪ್ರದೇಶದ ಅನೇಕ ಮನೆಗಳು ಜಲಾವೃತಗೊಂಡಿವೆ. ಕೆರೆ ಕೋಡಿ ಬಿದ್ದಿದ್ದರಿಂದ ಪಟ್ಟಣದ ಬಸವೇಶ್ವರ ನಗರ, ಇಂದಿರಾನಗರದ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಪರ್ವತಗೇರಿಯಲ್ಲೂ ಮನೆಗಳು ಜಲಾವೃತಗೊಂಡಿವೆ. ಶೆಟ್ಟಿಕೇರಿ ಕೋಡಿ ಬಿದ್ದು ಕಿರು ಸೇತುವೆ, ರಸ್ತೆ ಕೊಚ್ಚಿ ಹೋಗಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿವೆ. ಮಾಡಳ್ಳಿ ಗ್ರಾಮ ಸಂರ್ಪಸುವ ಮಾರ್ಗಗಳಲ್ಲಿ ಪರಸಿ ಕಿತ್ತು, ಹಳ್ಳ ತುಂಬಿ ಹರಿದು ಸಂಪರ್ಕ ಕಡಿತಗೊಂಡಿದೆ. ನೆಲೂಗಲ್ ಹತ್ತಿರ ಹಳ್ಳದ ನೀರಿನಿಂದ ಸಂಪರ್ಕ ಕಡಿತಗೊಂಡಿದೆ. ಪಟ್ಟಣದಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಪಟ್ಟಣದ ಆಸಾರ ಓಣಿಯ ಇಸ್ಮಾಯಿಲ್ ಬಸನಕೊಪ್ಪ ಎಂಬá-ವರ 4 ಆಡಿನ ಮರಿಗಳು ಹಳ್ಳದಲ್ಲಿ ಕೊಚ್ಚಿ ಹೋಗಿವೆ.
    ಇಟ್ಟಿಕೆರೆ ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ಕೆರೆ ನೀರು ಹೊರ ಹಾಕಬೇಕು ಎಂಬ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗಲೆತ್ನಿಸಿದಾಗ ಕೆಲವರು ಅವರನ್ನು ಹೊರಕ್ಕೆ ಕರೆತಂದರು.
    ಮುಂಜಾಗ್ರತೆ ಕ್ರಮ ಕೈಗೊಳ್ಳಿ
    ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಹಳ್ಳದ ನೀರು ನುಗ್ಗಿದ್ದ ಅಂಬೇಡ್ಕರ್ ನಗರ, ಇಟ್ಟಿಕೆರೆ ಕೋಡಿ ಬಿದ್ದ ಪ್ರದೇಶ ಪರಿಶೀಲಿಸಿದರು. ಈಗಾಗಲೇ ಪುರಸಭೆಯ ವಸತಿ ಗೃಹ ಮತ್ತು ಉಮಾ ವಿದ್ಯಾಲಯ ಹೈಸ್ಕೂಲ್ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಮತ್ತು ಕಾಳಜಿ ಕೇಂದ್ರ ತೆರೆಯಲಾಗಿದೆ. ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಹಾನಿ ವರದಿಯನ್ನು ಬೇಗ ಸಲ್ಲಿಸಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಸಿಇಒ ಸುಶೀಲಾ ಬಿ, ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಹೇಶ ಹೊಗೆಸೊಪ್ಪಿನ, ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts