More

    ಇಂಧನ ಉಳಿಸಿ ಸೋರಿಕೆಗೆ ಕಡಿವಾಣ ಹಾಕಿ

    ಕಲಬುರಗಿ: ಲಾಕ್ಡೌನ್ನಿಂದಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಂದಾಜು 785.71 ಕೋಟಿ ರೂ. ನಷ್ಟವಾಗಿದೆ. ಇದನ್ನು ಸರಿದೂಗಿಸಿ ಸಂಸ್ಥೆಯನ್ನು ಸದೃಢಗೊಳಿಸಲು ಇಂಧನ ಉಳಿತಾಯಕ್ಕೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ಅನಗತ್ಯ ಸೋರಿಕೆ, ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಡಿಸಿಎಂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚಿಸಿದರು.
    ನಗರದಲ್ಲಿ ಸೋಮವಾರ ಈಶಾನ್ಯ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಿಮೀಗೆ 45 ರೂ. ವೆಚ್ಚವಾಗುತ್ತಿದ್ದು, ಕೇವಲ 31 ರೂ. ಬರುತ್ತಿದೆ. ಹೀಗಾಗಿ ಇಂಧನ ಉಳಿತಾಯ ಮಾಡುವ ಚಾಲಕರಿಗೆ 10 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ವಿಜಯಪುರ ಮತ್ತು ಹೊಸಪೇಟೆ ಡಿಪೋ ಮಾದರಿ ಅನುಸರಿಸಬೇಕು. ಮುಂದಿನ ಸಭೆಯೊಳಗೆ ಇಂಧನ ಉಳಿತಾಯ ಸಾಧನೆ ತೋರಿಸಬೇಕು ಎಂದು ತಾಕೀತು ಮಾಡಿದರು.
    ಅನಗತ್ಯವಾಗಿರುವ ಪ್ರಯಾಣಿಕರಿಲ್ಲದ ರೂಟ್ಗಳನ್ನು ರದ್ದುಗೊಳಿಸಿ. ಇಲ್ಲವೇ ಬಸ್ಗಳನ್ನು ಕಡಿಮೆ ಮಾಡಿ. ಬಸ್ ನಿಲ್ದಾಣದ ಸುತ್ತಮುತ ಖಾಸಗಿ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯುವಂತಿಲ್ಲ. ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಆರ್ಟಿಒ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು. ಸಂಸ್ಥೆ ಆರ್ಥಿಕ ಹಿತದೃಷ್ಟಿಯಿಂದ ಟೋಲ್ ನಾಕಾ ಪಾವತಿಯಿಂದ ವಿನಾಯಿತಿ ನೀಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
    ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಸುಭಾಷ ಗುತ್ತೇದಾರ್, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್ ತೆಲ್ಕೂರ, ಡಾ.ಅವಿನಾಶ ಜಾಧವ್, ಎಂಎಲ್ಸಿ ಬಿ.ಜಿ.ಪಾಟೀಲ್, ಜಿಪಂ ಅಧ್ಯಕ್ಷೆ ಸುವರ್ಣ ಮಲಾಜಿ, ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಮ್, ಸಿಟಿಒ ಶಿವಸ್ವಾಮಿ, ಸಿಟಿಎಂ ಕೊಟ್ರಪ್ಪ ಡಿ., ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅಶ್ಫಾಖ್, ಉಗ್ರಾಣ ಮತ್ತು ಖರೀದಿ ನಿಯಂತ್ರಕ ಮಂಜುನಾಥ, ಅಂಕಿ ಸಂಖ್ಯೆ ಅಧಿಕಾರಿ ಸುನೀತಾ ಜೋಷಿ ಇತರರಿದ್ದರು. ಈ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡಿದ ವಿವಿಧ ಜಿಲ್ಲೆಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಘಟಕಾಧಿಕಾರಿಗಳನ್ನು ಡಿಸಿಎಂ ಸನ್ಮಾನಿಸಿದರು.

    ಮುಂದಿನ ತಿಂಗಳಿಂದ ಕೋರಿಯರ್ ಸೇವೆ
    ಸಾರಿಗೆ ಬಸ್ಗಳ ಮೂಲಕ ಕೋರಿಯರ್ ಸೇವೆ ಜುಲೈನಿಂದ ಆರಂಭಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದೇ ರೀತಿ ಮಹಾನಗರಗಳ ಸುತ್ತಲಿನ ಗ್ರಾಮಗಳಲ್ಲಿ ರೈತರು ನಗರಗಳಿಗೆ ತರಕಾರಿ-ಹಣ್ಣು ಸಾಗಣೆಗೆ ಬಸ್ಗಳಲ್ಲಿ ಅವಕಾಶ ಮಡಿಕೊಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಡಿಸಿಎಂ ಸವದಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಎಲ್ಲ ಶಾಸಕರೊಂದಿಗೆ ಸಮಾಲೊಚಿಸಿ ಅಗತ್ಯವಿರುವ ಕಡೆ ಬಸ್ ನಿಲ್ದಾಣ ಮತು ಡಿಪೋ ಅಭಿವೃದ್ಧಿಪಡಿಸುವ ಕಾಮಗಾರಿಗಳ ಬಗ್ಗೆ ಎಸ್ಟಿಮೇಟ್ ಸಿದ್ಧಪಡಿಸುವಂತೆ ಎಂಡಿ ಜಹೀರಾ ನಸೀಮ್ ಅವರಿಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts