More

    ಇಂದಿನಿಂದ ಹೋಟೆಲ್ ಪ್ರಾರಂಭ

    ಹುಬ್ಬಳ್ಳಿ: ಲಾಕ್​ಡೌನ್ ಸಡಿಲಿಕೆ ನಂತರ ಸೋಮವಾರದಿಂದ ಹೋಟೆಲ್​ಗಳು ಪ್ರಾರಂಭಗೊಳ್ಳಲಿವೆ. ಹೋಟೆಲ್​ಗಳ ಪ್ರಾರಂಭಕ್ಕಾಗಿ ನಗರದಾದ್ಯಂತ ಭಾನುವಾರ ಮಾಲೀಕರು ಹಾಗೂ ಸಿಬ್ಬಂದಿ ಪೂರ್ವ ಸಿದ್ಧತೆ ನಡೆಸಿದರು. ಇಡಿ ಹೋಟೆಲ್​ಗೆ ದ್ರಾವಣ ಸಿಂಪಡಿಸಿ, ಟೇಬಲ್, ಕುರ್ಚಿಗಳನ್ನು ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸಿದರು.

    ಸೋಮವಾರದಿಂದ ಪ್ರತಿ ಹೋಟೆಲ್ ಪ್ರವೇಶ ದ್ವಾರದ ಬಳಿ ಸ್ಯಾನಿಟೈಸರ್ ಇಡಲಾಗುತ್ತಿದ್ದು, ಹೋಟೆಲ್ ಪ್ರವೇಶಿಸುವ ಮುನ್ನ ಗ್ರಾಹಕರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ಈ ಸಂದರ್ಭದಲ್ಲಿ ದೇಹದ ತಾಪಮಾನ ಹೆಚ್ಚಾಗಿದ್ದರೆ ಹೋಟೆಲ್ ಪ್ರವೇಶಕ್ಕೆ ಅನುಮತಿ ನೀಡಲಾಗದು.

    ಹೋಟೆಲ್​ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಗ್ರಾಹಕರಿಗೆ ಕುಡಿಯಲು ಬಿಸಿನೀರು ಕೊಡಲಾಗುವುದು. ಒಂದು ಟೇಬಲ್​ಗೆ ಒಬ್ಬರಿಗೆ ಮಾತ್ರ ಕೂರಲು ಅವಕಾಶ. ಕುಟುಂಬ ಸಮೇತರಾಗಿ ಬಂದರೆ ಪರಸ್ಪರ ಅಂತರ ಕಾಯ್ದುಕೊಂಡು ಕುರ್ಚಿಗಳನ್ನು ಇಡಲಾಗುವುದು.

    ಹೋಟೆಲ್​ನ ಹವಾನಿಯಂತ್ರಿತ ಕೊಠಡಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸರ್ಕಾರದ ಆದೇಶ ಬರುವವರೆಗೆ ಇವುಗಳನ್ನು ಪ್ರಾರಂಭಿಸದಿರಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುಮಾರು 2 ಸಾವಿರ ಹೋಟೆಲ್​ಗಳಿದ್ದು, ಇವುಗಳಲ್ಲಿ ಸುಮಾರು 400 ಹೋಟೆಲ್​ಗಳು ಸಂಘದಲ್ಲಿ ಹೆಸರು ನೋಂದಾಯಿಸಿವೆ. ಎಲ್ಲರಿಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸೂಚಿಸಲಾಗಿದೆ ಎಂದು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts