More

    ಆವತಿ ಮುಖ್ಯ ರಸ್ತೆ ದುರಸ್ತಿಗೆ ಒತ್ತಾಯ

    ಚಿಕ್ಕಮಗಳೂರು: ಆವತಿ ಹೋಬಳಿ ಮುಖ್ಯರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು, ವಿವಿಧ ಪಕ್ಷಗಳ ಮುಖಂಡರು ಶುಕ್ರವಾರ ವಾಹನ ಸಂಚಾರ ಬಂದ್ ಮಾಡಿ ಗಿಡ ನೆಟ್ಟು ಪ್ರತಿಭಟಿಸಿದರು. ಆವತಿಯಲ್ಲಿ ಒಂದು ದಶಕದಿಂದ ರಸ್ತೆ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಹಲವು ಬಾರಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರಸ್ತೆ ತೀವ್ರ ಹದಗೆಟ್ಟಿರುವುದರಿಂದ ಅಪಘಾತಗಳಾಗಿವೆ. ಇದೇ ಮಾರ್ಗದಲ್ಲಿ ಸರ್ಕಾರಿ ಬಸ್​ಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿವೆ. ತುರ್ತು ಸಂದರ್ಭದಲ್ಲಿ ನಿವಾಸಿಗಳು ನಗರಕ್ಕೆ ತೆರಳಲು ಹರಸಾಹಸ ಮಾಡಬೇಕು ಎಂದು ಅಲವತ್ತುಕೊಂಡರು.

    ರಸ್ತೆ ಕಾಮಗಾರಿಗೆ 70 ಲಕ್ಷ ರೂ. ಬಿಡುಗಡೆಯಾಗಿದೆ ಎನ್ನುತ್ತಾರೆ. ಆದರೆ ಈವರೆಗೂ ಕಾಮಗಾರಿ ನಡೆಸಿಲ್ಲ. ಕೇವಲ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಶಾಶ್ವತ ರಸ್ತೆ ನಿರ್ವಿುಸಲು ಮುಂದಾಗಿಲ್ಲ. ನಾಡಕಚೇರಿ, ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಂಘ, ಪ್ರೌಢಶಾಲೆಯನ್ನು ಹೊಂದಿರುವ ಆವತಿ ದೊಡ್ಡ ಹೋಬಳಿ. ಈ ಮಾರ್ಗವಾಗಿ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು, ಶಾಲಾ ಮಕ್ಕಳು ಪ್ರಾಣಭಯದಿಂದ ಸಂಚರಿಸುವ ಸ್ಥಿತಿ ನಿರ್ವಣವಾಗಿದೆ. ಪ್ರತಿಭಟನೆ ಮಾಡುತ್ತಾರೆಂಬ ಮಾಹಿತಿ ತಿಳಿದ ಕೂಡಲೇ ಗುತ್ತಿಗೆದಾರರು ರಸ್ತೆಗೆ ಮಣ್ಣು ಹಾಕಿಸಿ ಮತ್ತಷ್ಟು ಹದಗೆಡಿಸಿದ್ದಾರೆ ಎಂದು ದೂರಿದರು.

    ಮಳೆಯಿಂದ ಚರಂಡಿ ನೀರು ರಸ್ತೆ ಮೇಲೆ ಹರಿದು ಸಂಚರಿಸಲಾಗದ ಸ್ಥಿತಿ ನಿರ್ವಣವಾಗಿದೆ. ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಮಾತ್ರ ಗುತ್ತಿಗೆದಾರರು ಜೆಸಿಬಿ ಮೂಲಕ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts