More

    ಆಲಮೇಲದಲ್ಲಿ ಬಿಜೆಪಿ ಪ್ರಚಾರ ಸಭೆ, ಸಿಎಂ ಬಸವರಾಜ ಬೊಮ್ಮಾಯಿ ಆರೋಪ, ಅಧಿಕಾರದ ಆಸೆಗಾಗಿ ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ

    ವಿಜಯಪುರ: ಕಾಂಗ್ರೆಸ್ ಗೆ ಅಧಿಕಾರದ ಲಾಲಸೆ, ಕೇವಲ ಅಧಿಕಾರವೊಂದೇ ಕಾಂಗ್ರೆಸ್ ನ ಗುರಿ, ಅಧಿಕಾರಕ್ಕಾಗಿಯೇ ಜೆಡಿಎಸ್ ನೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡಿತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.
    ಮಂಗಳವಾರ ಆಲಮೇಲದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆ ಭಾಗ್ಯ ಈ ಭಾಗ್ಯ ತಂದಿದ್ದೇನೆ.‌ ರಾಜ್ಯದ ಜನ ಕಾಂಗ್ರೆಸ್ ಗೆ ಗೆಲ್ಲಿಸುತ್ತಾರೆಂದು ಸಿದ್ದರಾಮಯ್ಯ ಕನಸು ಕಂಡಿದ್ದರು. ಆದರೆ ಆ ಯಾವ ಭಾಗ್ಯವೂ ಜನರ ಮನೆ ಬಾಗಲಿಗೆ ತಲುಪಲಿಲ್ಲ. ಕಾಂಗ್ರೆಸ್ ಕರ್ನಾಟಕ ದ ದೌರ್ಭಾಗ್ಯ ಎಂದು ತಿಳಿದು ಕಡಿಮೆ ಸ್ಥಾನ ನೀಡಿದರು. ಹೀಗಾಗಿ ಅಧಿಕಾರ ಲಾಲಸೆಗಾಗಿ ಅಪವಿತ್ರ ಮೈತ್ರಿ‌ ಮಾಡಿಕೊಂಡರು. ಜೆಡಿಎಸ್ ಇವರ ಮನೆ ಬಾಗಿಲಿಗೆ ಹೋಗಲಿಲ್ಲ, ಇವರೇ ಜೆಡಿಎಸ್ ಅವರ ಮನೆ ಬಾಗಿಲಿಗೆ ಹೋಗಿ ನೀವೇ ಮುಖ್ಯಮಂತ್ರಿ ಆಗಿ, ನಮಗೆ ಪ್ರಮುಖ ಖಾತೆ ಕೊಡಿ‌ ಎಂದರು. ಇದು ಜನತೆಯ ಸರ್ಕಾರ ಅಲ್ಲ ಎಂದು ಅಲ್ಲಿನ ಅನೇಕ ಶಾಸಕರು ರಾಜಿನಾಮೆ ಕೊಟ್ಟು ನಮ್ಮ ಪಕ್ಷಕ್ಕೆ ಬಂದು ಗೆದ್ದರು ಎಂದು ಬೊಮ್ಮಾಯಿ ಟೀಕಿಸಿದರು.

    ಅಧಿಕಾರಕ್ಕಾಗಿಯೇ ಕಾಂಗ್ರೆಸ್ ರಾಜಕಾರಣ. ಅಧಿಕಾರದಲ್ಲಿದ್ದಾಗ ಕಬ್ಬು ಇದ್ದಂಗೆ, ಅಧಿಕಾರ ಇಲ್ಲದಾಗ ಹತ್ತಿ ಕಟಿಗೆ ಇದ್ದಂಗೆ ಎಂದು ಆ ಪಕ್ಷದ ಶಾಸಕೊಬ್ಬರು ನನಗೆ ಹೇಳುತ್ತಿದ್ದರು‌ ಎಂದು ಸ್ಮರಿಸಿಕೊಂಡರು.

    ಕರ್ನಾಟಕದ ರಾಜಕಾರಣ ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕೆಂಬ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದಿದೆ. ಕಳೆದ ಬಾರಿ ಸಮ್ಮಿಶ್ರ ಸರ್ಕಾರದಿಂದ ದುರಾಡಳಿತ ಬಂದಿತು. ಇನ್ಮುಂದೆ ಹಾಗಗಲ್ಲ ಎಂದರು.

    ತ್ಯಾಗ- ಬಲಿದಾನ ಗೈದವರು ಯಾರು?:

    ಕಾಂಗ್ರೆಸ್ ತ್ಯಾಗ, ಬಲಿದಾನ ಮಾಡಿದೆ ಎಂದು ಸಿದ್ದರಾಮಯ್ಯ ಬಹಳ ಹೇಳುತ್ತಾ ರೆ. ಸಿದ್ರಾಮಣ್ಣ ಸುಭಾಷ್ ಚಂದ್ರ ಬೋಸ್, ತಿಲಕ, ಭಗತ್ ಸಿಂಗ್ ಇವರೆಲ್ಲ ಕಾಂಗ್ರೆಸ್ ದವರಾ? ವೀರ ಸಾವರ್ಕರ್, ಚಂದ್ರಶೇಖರ ಆಜಾದ್ ಕಾಂಗ್ರೆಸ್ ಪಕ್ಷದವರಾ? ಲಕ್ಷಾಂತರ ಜನ ಈ ದೇಶಕ್ಕಾಗಿ ಪ್ರಾಣ ಕೊಟ್ಟು ಸ್ವಾತಂತ್ರ್ಯ ಕೊಟ್ಡರಲ್ಲ ಅವರ ಹೆಸರು ಮುಚ್ಚಿಟ್ಟು ಕೇವಲ ನೆಹರು ಕುಟುಂಬ ಮಾತ್ರ ಸ್ವಾತಂತ್ರ್ಯ ಕ್ಕೆ ಹೋರಾಡಿದೆ ಎಂದು ಬಿಂಬಿಸುತ್ತಿದ್ದೀರಲ್ಲ? ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು‌ ವೀರರಿಂದ ಹೊರತು ಹೇಡಿಗಳಿಂದಲ್ಲ ಎಂದರು.
    ಕಾಂಗ್ರೆಸ್ ನಡಿಗೆ ಕೃಷ್ಣೆ ಯ ಕಡೆಗೆ ಎಂದು ಪಾದಯಾತ್ರೆ ಮಾಡಿದರು. ಐದು ವರ್ಷದಲ್ಲಿ ಪ್ರತೀ ವರ್ಷ ಕೃಷ್ಣೆಗೆ ಹತ್ತು ಸಾವಿರ ಕೋಟಿ ರೂ. ನೀಡುವುದಾಗಿ ಆಣೆ ಮಾಡಿ ವಚನ ಭ್ರಷ್ಟರಾದವರಿಗೆ ಮತ ಕೊಡಬೇಕಾ? ಎಂದರು.
    ಮಾತೆತ್ತಿದರೆ ಮೋದಿ‌ ಬಗ್ಗೆ ಮಾತನಾಡುವ‌ ಕಾಂಗ್ರೆಸ್ ನವರು ಮೋದಿ ಬಗ್ಗೆ ಮಾತನಾಡಿ ತಾವೇ ಸಣ್ಣವರಾಗುತ್ತಿದ್ದಾರೆ. ಕಾಂಗ್ರೆಸ್ ಗೆ ಅಧ್ಯಕ್ಷರು ಯಾರು ಎಂಬುದೇ ಗೊತ್ತಿರಲಿಲ್ಲ. ತಲೆ ಕೆಟ್ಟು ಸೋನಿಯಾ ಗಾಂಧಿ ನಾನೇ ಅಧ್ಯಕ್ಷ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
    ಅಚ್ಚೆ ದಿನ್ ಎಲ್ಲಿದೆ ಎಂದು ಕಾಂಗ್ರೆಸ್ ನವರು ಕೇಳುತ್ತಾರೆ. ಒಂದಂತೂ ನಿಜ ಕಾಂಗ್ರೆಸ್ ಗೆ ಅಚ್ಚೆ ದಿನ್ ಬರಲ್ಲ.
    ಹತ್ತು ಕೋಟಿ ರೈತರಿಗೆ ಹತ್ತು ಸಾವಿರ ರೂ. ಖಾತೆಗೆ ನೀಡಲಾಗಿದೆ. ಎಂಟು ಕೋಟಿ ತಾಯಂದಿರಿಗೆ ಅಡುಗೆ ಅನಿಲ ನೀಡಿದರು. ಆಯುಷ್ಮಾನ ಭಾರತದಡಿ 1.93 ಕೋಟಿ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಕರೊನಾ ಲಸಿಕೆ 100 ಕೋಟಿ‌ ಜನರಿಗೆ ನೀಡುವ ಮೂಲಕ ಮೋದಿ ದಾಖಲೆ‌ ಬರೆದಿದ್ದಾರೆ. ಅಮೃತ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲಾಗಿದೆ. ಎಸ್ ಸಿ, ಎಸ್ ಟಿ‌ ಮಕ್ಕಳಿಗೆ ಕೌಶಲ್ಯ ತರಬೇತಿ, ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ.‌ ಇದಲ್ಲವೇ ಅಚ್ಚೆ ದಿನ್ ಎಂದರು.
    ತಳವಾರ ಪರಿವಾರ ಸಮುದಾಯಕ್ಕೆ‌ ನ್ಯಾಯ ಕೊಡುವ ಸಮಯ ಬಂದಿದೆ. ಕೋಳಿ, ಕುರುಬ, ಲಿಂಗಾಯತ ಯಾವುದೇ ಸಮುದಾಯ ಇರಲಿ ಅವರ ನ್ಯಾಯ ಸಮ್ಮತ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಲಿದೆ ಎಂದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಮಾತನಾಡಿ, ಪಾಂಚಜನ್ಯ ಮೊಳಗಿದೆ, ಸೈನ್ಯ ಸಜ್ಜಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ಜೊತೆಗೆ ಹಾನಗಲ್ಲನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಬೊಮ್ಮಾಯಿ ಸರ್ಕಾರ ಸಬ್ ಕಾ ವಿಕಾಸ, ಸಬ್ ಕಾ ವಿಕಾಸ‌ ಸರ್ಕಾರ ಆದರೆ ಸಿದ್ದರಾಮಯ್ಯ ಸರ್ಕಾರ ಸಾಬ್ ಕಾ ವಿಕಾಸ್ ಸರ್ಕಾರ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತ ರ ಕಲ್ಯಾಣಕ್ಕೋಸ್ಕರ ಮತ ಕೇಳಿದರೆ ಬಿಜೆಪಿ ಸರ್ವರ ಕಲ್ಯಾಣಕ್ಕಾಗಿ ಮತ ಕೇಳುತ್ತದೆ ಎಂದರು.
    ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ‌, ದೊಡ್ಡಪುಳ್ಳಾರ ಸ್ಥಳೀಯ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದ ಸರ್ಕಾರ ಗೆಲುವು ಸಾಧಿಸಿದೆ. ಅದೇ ರೀತಿ ಈ ಎರಡು ಉಪ‌ಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ ಎಂದರು.
    ಯಡಿಯೂರಪ್ಪ ಕಂಡ ಕಲ್ಯಾಣ ಕರ್ನಾಟಕದ ಆಶಯ ಬೊಮ್ಮಾಯಿ‌ ಸರ್ಕಾರ ಈಡೇರಿಸುತ್ತಿದೆ. ದೇಶದಲ್ಲೇ ಅತ್ಯಂತ ಉತ್ತಮವಾಗಿ ಕರೊನಾ ನಿರ್ವಹಣೆ ಮಾಡಿದ ಶ್ರೇಯಸ್ಸು ಕರ್ನಾಟಕಕ್ಕೆ ಅಲ್ಲಬೇಕೆಂದರು.
    ರಾಮ ಮಂದಿರದ ಶಂಕು ಸ್ಥಾಪನೆ ಮಾಡಿದವರು ಯಾರು? ಪುಲ್ಮಾಮಾ ದಾಳಿ ಮೂಲಕ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದವರು ಯಾರು? ಕಾಶ್ಮೀರದಲ್ಲಿ 370 ನೇ ವಿಧಿ ಜಾರಿಗೆ ತಂದಿದ್ದು ಯಾರು? ಎಂದು ನಳೀನಕುಮಾರ ಕಟೀಲ ಪ್ರಶ್ನಿಸುತ್ತಿದ್ದಂತೆ ಜನ ಮೋದಿ….ಮೋದಿ‌ ಎಂದು ಧ್ವನಿಗೂಡಿಸಿದರು. ಹಾಗಾದರೆ ನಿಮ್ಮ ಮತ ಯಾರಿಗೆ ಎನ್ನುತ್ತಿದ್ದಂತೆ‌ ಸೇರಿದ ಜನ ಬಿಜೆಪಿಗೆ ಎಂದರು.
    ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜ ಒಡೆದವರು ಯಾರು? 24 ಹಿಂದು ಕಾರ್ಯ ಕರ್ತರ ಹತ್ಯೆಗೆ ಕಾರಣರಾದವರು ಯಾರು? ಹಿಂದು- ಮುಸ್ಲಿಂ ಒಡೆದು ಆಳಿದವರಾರು? ಎಂದು ಕಟೀಲ ಪ್ರಶ್ನಿಸಿದಾಗ ಜನ ಕಾಂಗ್ರೆಸ್ ಎಂದು ಕೂಗಿದರು. ಬಳಿಕ ಕಟೀಲ ಅಂಥವರಿಗೆ ಮತ ಕೊಡಬೇಕಾ ಎಂದಾಗ ಜನ ಬೇಡ ಎಂದರು.

    ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಐದು ಜನ ಮಂತ್ರಿ ಹಾಗೂ ನಾನೊಬ್ಬ ಕಾರ್ಯಕರ್ತನಾಗಿ ರಮೇಶ ಭೂಸನೂರ ಪರ‌ ಕೆಲಸ ಮಾಡುತ್ತಿದ್ದೇವೆ. ನಾವೆಲ್ಲ ಸೇರಿ ರಮೇಶ ಭೂಸನೂರ ಅವರನ್ನು ವಿಧಾನ ಸೌಧಕ್ಕೆ ತರುವ ಜವಾಬ್ದಾರಿ ನಮ್ಮದು ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಭರವಸೆ ನೀಡಿದರು.
    ಆಲಮೇಲ‌ ಹೊಸ ತಾಲೂಕಾಗಿದ್ದು ಸರ್ಕಾರದ ಎಲ್ಲ ಕಚೇರಿಗಳನ್ನು ಆಲಮೇಲದಲ್ಲಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.
    ಕಡಣಿ ಸೇತುವೆ ಆಗಬೇಕು. ಜೊತೆಗೆ ತೋಟಗಾರಿಕೆ ಕಾಲೇಜ್ ಆರಂಭವಾಗಬೇಕು ಎಂದರು.
    ಉಪ ಚುನಾವಣೆಯ ಗಾಳಿ ಆಲಮೇಲದಲ್ಲಿ ಬೀಸಿದ್ದು ಈ ಭಾಗದ ಜನ ಅಭಿವೃದ್ಧಿ ತಮ್ಮದಾಗಿಸಿಕೊಳ್ಳಬೇಕೆಂದರು.ಬಕಾಂಗ್ರೆಸ್ ಉದ್ರಿ ಕಂಪನಿಯಾಗಿದ್ದು ಇದೆಲ್ಲ ಮಾಡಲು ಸಾಧ್ಯವಿಲ್ಲ ಎಂದರು.
    ಇಡೀ ಇದೇಶದಲ್ಲಿ ಕಾಂಗ್ರೆಸ್ ಅಳಿದು ಹೋಗಿದೆ. ಸ್ವಲ್ಪ ಕರ್ನಾಟಕದಲ್ಲಿ ಇದ್ದು ಉಪ ಚುನಾವಣೆ ಬಳಿಕ ಅದು ಸಹ ಅಳಿಯಲಿದೆ ಎಂದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಹುಲ್ ಗಾಂಧಿ ಹುಚ್ಚ. ಅಫೀಮ್ ಗುಂಗಿನಲ್ಲಿರುತ್ತದೆ. ಇಂಥ ಹುಚ್ಚನ ಕೈಗೆ ಆಡಳಿತ ಕೊಡಬೇಕಾ? ಎಂದರು.
    ಆರ್.ಎಸ್ ಎಸ್ ಗೆ ಬೈಯೋದು ಬಿಡಿ. ಅವರೇನು ರಾಜಕೀಯ ಮಾಡತಾರಾ? ಎಂದು ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು. ಇನ್ಮುಂದೆ ನಿಮ್ಮ ನಾಟಕ ಕಂಪನಿ ಇನ್ಮುಂದೆ ನಡೆಯಲ್ಲ ಎಂದರು.

    ವಿಜಯಪುರಕ್ಕೆ ಮಂತ್ರಿ ಸ್ಥಾನ ಕೊಡದೆ ಅನ್ಯಾಯ ಮಾಡಿದ್ದೀರಿ. ಮುಂದಿನ ಬಾರಿ ಮಂತ್ರಿ‌ಕೊಡಲಿಲ್ಲ ಅಂದ್ರೆ ಮತ್ತೆ ಬೇರೆ ಆಗುತ್ತದೆ ಎಂದು ಎಚ್ಚರಿಸಿದರು.
    ಅಲ್ಲದೆ ವಿ.ಸೋಮಣ್ಣ ಅವರಿಗೆ ಬೆಂಗಳೂರಿನ ಉಸ್ತುವಾರಿ ಕೊಡಬೇಕು. ಅವರು ಸಮರ್ಥರಿದ್ದಾರೆ ಎಂದರು.
    ಇನ್ನು ಮೀಸಲಾತಿ ಸಮಸ್ಯೆ ಕಾಡುತ್ತಿದ್ದು ಅದನ್ನು ಬಗೆ ಹರಿಸಬೇಕು. ಬಿಜೆಪಿ ಯಾವುದೇ ಜಾತಿಗೆ ಸೀಮಿತ ಇಲ್ಲ. ಹಾಲುಮತ, ಕೋಳಿ, ಮಡಿವಾಳ, ವಾಲ್ಮೀಕಿ ಸಮಾಜದ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇನೆ ಎಂದರು.

    ಅಭ್ಯರ್ಥಿ ರಮೇಶ ಭೂಸನೂರ ಮಾತನಾಡಿ, ಈ ಹಿಂದಿನ ಎರಡು ಅವಧಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಗೆ ಶ್ರಮಿಸಿದ್ದೇನೆ. ಶೇ.70 ರಷ್ಟು ನೀರಾವರಿಯಾಗಿದೆ. ಅನೇಕ ವಸತಿ ಯೋಜನೆ ಜಾರಿಗೊಳಿಸಿದ್ದೇನೆ. ಹೀಗಾಗಿ ಅಭಿವೃದ್ಧಿ ಗೆ ಮತ ನೀಡಿ ಎಂದರು.

    ಸಚಿವ ಸಿ.ಸಿ. ಪಾಟೀಲ,‌ ಸಚಿವ ಗೋವಿಂದ ಕಾರಜೋಳ, ಸಚಿವ ವಿ.ಸೋಮಣ್ಣ, ಸಚಿವೆ ಶಶಿಜಲಾ ಜೊಲ್ಲೆ, ಸಂಸದ ರಮೇಶ ಜಿಗಜಿಣಗಿ,
    ಶಾಸಕ ಸೋಮನಗೌಡ ಪಾಟೀಲ‌ ಸಾಸನೂರ, ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮಾತನಾಡಿದರು.
    ಸಚಿವರಾದ ಹಾಲಪ್ಪ‌ ಆಚಾರ, ಪ್ರಭು ಚವಾಣ್,
    ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ಸಿದ್ದು ಸವದಿ, ದತ್ತಾತ್ರೇಯ ಪಾಟೀಲ ರೇವೂರ, ಶರಣು ಸಲಗರ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ಕೆ.ಶಿವರಾಮ, ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts