More

    ಗಣವೇಷಧಾರಿಗಳಿಂದ ಪಥಸಂಚಲನ

    ಲಕ್ಷ್ಮೇಶ್ವರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಘೊಷ್ ಸಹಿತ ಪಥಸಂಚಲನ ನೆರವೇರಿತು.

    ಪಟ್ಟಣದ ಶ್ರೀ ರಂಭಾಪುರಿ ಜ. ವೀರಗಂಗಾಧರ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡ ಪಥಸಂಚಲನ ಪಂಪವೃತ್ತ, ವಿದ್ಯಾರಣ್ಯವೃತ್ತ, ಹಾವಳಿ ಹನುಮಂತದೇವರ ದೇವಸ್ಥಾನ, ಬ್ರಹ್ಮದೇವರ ವೃತ್ತ, ಮುಖ್ಯ ಬಜಾರ್ ರಸ್ತೆ, ಶಿಗ್ಲಿ ನಾಕಾ, ಬಸಾಪುರ ಓಣಿ, ಹಳೇ ಬಸ್ ನಿಲ್ದಾಣದ ಮೂಲಕ ಸಾಗಿ ತೋಂಟದೇವರ ಮಠದಲ್ಲಿ ಸಂಪನ್ನಗೊಂಡಿತು.

    ಪಂಥ ಸಂಚಲನ ಹಿನ್ನೆಲೆಯಲ್ಲಿ ಇಡೀ ಪಟ್ಟಣ ಕೇಸರಿಮಯವಾಗಿತ್ತು. ರಸ್ತೆಯುದ್ದಕ್ಕೂ ಮಹಿಳೆಯರು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಧ್ವಜ ಕಟ್ಟಿ ಸ್ವಯಂಸೇವಕರನ್ನು ಸ್ವಾಗತಿಸಿದರು. ಮುಂಜಾಗ್ರತಾ ಕ್ರಮವಾಗಿ ಡಿವೈಎಸ್​ಪಿ ಶಿವಾನಂದ ಪವಾಡಶೆಟ್ಟರ, ವಿದ್ಯಾಧರ ನಾಯಕ, ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಹ್ಮಮಿೊಳ್ಳಲಾಗಿತ್ತು.

    ಜಿಲ್ಲಾ ಕಾರ್ಯವಾಹ ಮಂಜುನಾಥ ಇಟಗಿ, ಜಿಲ್ಲಾ ಪ್ರಚಾರಕ ವಿಠ್ಠಲ ಜಿ, ಬೌದ್ಧಿಕ ಪ್ರಮುಖ ಉಮೇಶ ಮಡಿವಾಳರ, ಶಾರೀರಿಕ ಪ್ರಮುಖ ಶಿವಕುಮಾರ ದೇಸಣ್ಣವರ, ತಾಲೂಕು ಕಾರ್ಯವಾಹ ಚಂದ್ರು ಹಂಪಣ್ಣವರ, ಮೌನೇಶ ಬಡಿಗೇರ, ರಮೇಶ ಶೆಟ್ಟಿ, ಗಜಾನನ ಹೆಗಡೆ, ವಿಜಯ ಕುಂಬಾರ, ದುಂಡೇಶ ಕೊಟಗಿ, ಶ್ರೀಕಾಂತ ಪೂಜಾರ, ಸಂತೋಷ ಬೋಮಲೆ, ವೀರೇಶ ಸಾಸಲವಾಡ, ವಿಜಯಕುಮಾರ ಹತ್ತಿಕಾಳ, ಶಂಕರ ಬ್ಯಾಡಗಿ, ಡಾ. ಸುರೇಶ ಹೊಸಮನಿ, ಅನಿಲ ಮುಳಗುಂದ, ಶಂಕರ ಬ್ಯಾಡಗಿ, ಸುನೀಲ ಮೆಡ್ಲೇರಿ, ಶಿರಹಟ್ಟಿ, ಈಶ್ವರ ಬನ್ನಿಕೊಪ್ಪ, ಗಂಗಾಧರ ಮಲ್ಲೂರ, ಈರಣ್ಣ ಗಾಣಿಗೇರಿ, ಸೋಮೇಶ ಉಪನಾಳ, ವಿಜಯ ಮೆಕ್ಕಿ, ವಿಜಯ ಬೂದಿಹಾಳ ಮಹೇಶ ಲಮಾಣಿ, ಫಕೀರೇಶ ರಟ್ಟಿಹಳ್ಳಿ, ಗುರುನಾಥ ದಾನಪ್ಪನವರ, ಗಂಗಾಧರ ಮೆಣಸಿನಕಾಯಿ, ಆರ್.ವಿ. ವೆರ್ಣೆಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts