More

    ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಒತ್ತಾಯ

    ಮುಂಡರಗಿ: ಹಲವಾರು ಕಾರ್ವಿುಕ ವರ್ಗದವರಿಗೆ ನೀಡುವ ರೀತಿಯಲ್ಲಿ ತಮಗೂ ಆರ್ಥಿಕ ನೆರವು ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ತಾಲೂಕು ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ತಾಲೂಕಿನ 95 ವೃತ್ತಿನಿರತ ಛಾಯಾಗ್ರಾಹಕರ ಬದುಕು ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿ ಸಿಲುಕಿದೆ. ಮದುವೆ, ಸಮಾರಂಭಗಳು ನಡೆಯದ ಕಾರಣ ದುಡಿಮೆ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಛಾಯಾಗ್ರಾಹಕರನ್ನು ಕಾರ್ವಿುಕ ವಲಯದಲ್ಲಿ 42 ವರ್ಗಗಳಲ್ಲಿ ಗುರುತಿಸಲಾಗಿದೆ. ಕಾರ್ವಿುಕ ಇಲಾಖೆಯಿಂದ ಆರ್ಥಿಕ ನೆರವು, ರಾಜ್ಯದ ಎಲ್ಲ ವೃತ್ತಿ ಛಾಯಾಗ್ರಾಹಕರಿಗೂ ಕಾರ್ವಿುಕ ಸ್ಮಾರ್ಟ್​ಕಾರ್ಡ್​ಗಳು, ಭವಿಷ್ಯ ನಿಧಿ, ನಿರುದ್ಯೋಗ ಭತ್ಯೆ ನೀಡಬೇಕು. ಸರ್ಕಾರದ ಯಾವುದೇ ಇಲಾಖೆಯಲ್ಲಿ ಫೋಟೋ, ವಿಡಿಯೋ ಚಿತ್ರೀಕರಣದ ಅವಶ್ಯವಿದ್ದಲ್ಲಿ ಛಾಯಾಗ್ರಾಹಕರನ್ನೇ ಬಳಸಿಕೊಂಡು ಉದ್ಯೋಗ ನೀಡಬೇಕು. ಸರ್ಕಾರದ ಎಲ್ಲ ಸೂಚನೆಗಳನ್ನು ಛಾಯಾಗ್ರಾಹಕರು ಕಟ್ಟುನಿಟ್ಟಿನಿಂದ ಪಾಲಿಸಿದ್ದಾರೆ. ಇನ್ಮುಂದೆಯೂ ಕರೊನಾ ಹೋರಾಟದಲ್ಲಿ ಸಹಕರಿಸುತ್ತೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸಂಘದ ತಾಲೂಕಾಧ್ಯಕ್ಷ ಕಾಶೀನಾಥ ಕಲಬುರ್ಗಿ, ಗೌರವಾಧ್ಯಕ್ಷ ಬಿ. ಬಾಬು, ಹನುಮಂತ ರಾಮೇನಹಳ್ಳಿ, ಅಂದಾನಪ್ಪ ಕುರಡಗಿ, ನಾಗರಾಜ ಅರ್ಕಸಾಲಿ, ಮಂಜುನಾಥ ತ್ಯಾಮನವರ, ಮುತ್ತು ಹಾಳಕೇರಿ, ಸುರೇಶ ಕಲಬುರ್ಗಿ, ಕಿರಣಕುಮಾರ ಅಂಗಡಿ, ರಂಗನಾಥ ಕಂದಗಲ್, ಹಾಲೇಶ ಬಂಡಿ, ಸಂತೋಷ ಅಳವಂಡಿ, ಎಂ.ಎಸ್. ದೇವರಮನಿ, ಆರ್.ಎಂ. ಜೊಂಡಿ, ಮಹಾಂತೇಶ ಯಾವಗಲ್ಲ, ಆನಂದ ಕಲ್ಲೂರ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts