More

    ಆರೋಗ್ಯ-ಶಿಕ್ಷಣ ನೀಡುವಲ್ಲಿ ಕೆಎಲ್‌ಇ ಉತ್ಸುಕ

    ಬೆಳಗಾವಿ: ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

    ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯಲ್ಲಿ ಗುರುವಾರ ಜರುಗಿದ ರೋಟರಿ ಕೆಎಲ್‌ಇ ಡಯಾಲಿಸಿಸ್ ಕೇಂದ್ರ 2ನೇ ಯೂನಿಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯು ಯಾವತ್ತೂ ಆರೋಗ್ಯ ಮತ್ತು ಶಿಕ್ಷಣ ನೀಡುವಲ್ಲಿ ಉತ್ಸುಕತೆ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ನಾಗರಿಕರ ಆರೋಗ್ಯ ಕಾಳಜಿ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿದೆ ಎಂದರು.

    ಯುಎಸ್‌ಎಂ ಕಾಲೇಜಿನ ನಿರ್ದೇಶಕ ಡಾ. ಎಚ್.ಬಿ ರಾಜಶೇಖರ ಮಾತನಾಡಿ, ಕೆ.ಎಲ್.ಇ ಆಸ್ಪತ್ರೆಯು ಸತ್ಯ ಪ್ರೇಮ ಸೇವೆ ತ್ಯಾಗ ಮತ್ತು ಸ್ವಾರ್ಥತ್ಯಾಗ ಭಾವನೆ ಅಳವಡಿಸಿಕೊಂಡು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಜನರ ಸೇವೆೆ ಮಾಡುವಲ್ಲಿ ಪಾತ್ರ ಮಹತ್ವದಾಗಿದೆ. ಇಂತಹ ಸೇವೆ ಮಾಡುವಲ್ಲಿ ರೋಟರಿಯಂತಹ ದಾನಿಗಳು ನಮ್ಮ ಜೊತೆ ಕೈ ಜೋಡಿಸಿದರೆ ರೋಗಿಗಳ ಆರೋಗ್ಯ ಗುಣಪಡಿಸುವಲ್ಲಿ ಇನ್ನು ಹೆಚ್ಚಿನ ಸೇವೆಗಳನ್ನು ನೀಡಬಹುದು ಎಂದು ಹೇಳಿದರು. ರೋಟರಿ ಕ್ಲಬ್‌ನ ಗವರ್ನರ್ ಸಂಗ್ರಾಮ ಪಾಟೀಲ ಮಾತನಾಡಿ, ರೋಟರಿ ಕೆಎಲ್‌ಇ ಡಯಾಲಿಸಿಸ್ ಕೇಂದ್ರವು ಅತೀ ಕಡಿಮೆ ಅವಧಿಯಲ್ಲಿ ಇಷ್ಟು ಜನಮನ್ನಣೆಗೆ ಪಾತ್ರವಾಗಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಸಾರ್ವಜನಿಕ ಸೇವೆಯಲ್ಲಿ ಮುಂದಿರುವ ರೋಟರಿ ಸಂಸ್ಥೆಯ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಿದೆ. ಕೆಎಲ್‌ಇ ಸಂಸ್ಥೆಯು ಸಾರ್ವಜನಿಕರಿಗೆ ನೀಡುತ್ತಿರುವ ಗುಣಮಟ್ಟದ ಸೇವೆಯ ಪ್ರತೀಕವಾಗಿದೆ ಎಂದರು. ಕೆ.ಎಲ್.ಇ ಶತಮಾನೊತ್ಸವ ಚಾರಿಟೇಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ ಧಾರವಾಡ, ರೋಟರಿ ಕ್ಲಬ್ ಆಫ್ ಬೆಳಗಾವಿಯ ಮಾಜಿ ಅಧ್ಯಕ್ಷ ಶರದ ಪೈ., ಎ.ಕೆ. ಭಂಡಾರಿ, ಸುನೀಶ ಮೇತ್ರಾನಿ, ಅನೀಶ ಮೇತ್ರಾನಿ, ಬಸವರಾಜ ವಿಭೂತಿ, ಡಾ. ರಾಜೇಂದ್ರ ಭಾಂಡನಕರ, ಸಂಜಯ ಕುಲಕರ್ಣಿ, ನಿರಂಜನ ಸಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts