More

    ಆರೋಗ್ಯವಂತ ಯುವ ಶಕ್ತಿ ಅಗತ್ಯ, ಜಾಬಿನ್ ಕಾಲೇಜಿನಲ್ಲಿ ಡಾ. ಆದಿತ್ಯ ಪಾಂಡುರಂಗಿ ಉಪನ್ಯಾಸ

    ಹುಬ್ಬಳ್ಳಿ: ದೇಶದ ಸರ್ವಾಂಗೀಣ ವಿಕಾಸಕ್ಕೆ ಆರೋಗ್ಯವಂತ, ಸದೃಢ ಮನಸ್ಸಿನ, ರಚನಾತ್ಮಕ ಮನೋಭಾವದ ಯುವ ಶಕ್ತಿಯ ಅವಶ್ಯಕತೆ ಇದೆ ಎಂದು ಧಾರವಾಡ ಡಿಮ್ಹಾನ್ಸ್ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಆದಿತ್ಯ ಪಾಂಡುರಂಗಿ ಹೇಳಿದರು.

    ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪವು ಕರ್ನಾಟಕ ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದೊಂದಿಗೆ ನಗರದ ಕೆಎಲ್​ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯುವಜನಾಂಗ ಮತ್ತು ಮಾನಸಿಕ ತುಮುಲಗಳು ಹಾಗೂ ಪರಿಹಾರ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

    ನಮ್ಮನ್ನು ಯಾರ ಜತೆಗೂ ಹೋಲಿಸಿಕೊಳ್ಳದೇ ಇಟ್ಟ ಗುರಿ ತಲುಪಲು ಸದಾ ಕ್ರಿಯಾಶೀಲವಾಗಿರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ ನಿರ್ವಹಣೆ ಅತಿ ಅವಶ್ಯವಾಗಿದೆ ಎಂದರು.

    ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಯುವಶಕ್ತಿಯು ಸಮಯ ಪರಿಪಾಲನೆಯೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.

    ಕವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ, ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಇಂತಹ ಮಹತ್ವದ ಉಪನ್ಯಾಸ ಏರ್ಪಡಿಸಲಾಗುವುದು ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿದರು.

    ಪ್ರೊ. ಸಂಗಮ್ಮನವರ, ಡಾ. ಹುಲಗೂರು, ಡಾ. ಕೌಜಲಗಿ, ಡಾ. ಶೇಡಂಕರ, ನಗರದ ಬೇರೆ ಬೇರೆ ಕಾಲೇಜಿನ 300ಕ್ಕೂ ಹೆಚ್ಚು ಸ್ವಯಂ ಸೇವಕರು ಭಾಗವಹಿಸಿದ್ದರು.

    ಪ್ರಾಚಾರ್ಯ ಡಾ. ಲಿಂಗರಾಜ ಹೊರಕೇರಿ ಸ್ವಾಗತಿಸಿದರು. ವಂದನಾ ಸತೀಶ ನೂಲ್ವಿ ಪ್ರಾರ್ಥಿಸಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಪ್ರೊ. ವಾಗ್ಮೊಡೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts