More

    ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

    ಹಿರೇಬಾಗೇವಾಡಿ ಬೆಳಗಾವಿ: ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಪೌಷ್ಟಿಕ ಆಹಾರ ಮತ್ತು ಶುಚಿತ್ವದ ಬಗ್ಗೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಗರ್ಭಿಣಿ ಮಹಿಳೆಯರಿಗೆ, ತಾಯಂದಿರಿಗೆ ಮಾಹಿತಿ ನೀಡಲಾಯಿತು. ನಂತರ ಗ್ರಾಮದಲ್ಲಿ ಜಾಥಾ ನಡೆಯಿತು.

    ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ಪಾಟೀಲ ಮಾತನಾಡಿ, ಹುಟ್ಟುವ ಮಕ್ಕಳು ಆರೋಗ್ಯವಂತರಾಗಿ ಜನಿಸಲಿ ಎನ್ನುವ ಉದ್ದೇಶದಿಂದ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರಿಗೆ ಸರ್ಕಾರ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಲಾನುಭವಿಗಳನ್ನು ತಲುಪಲು ಆರೋಗ್ಯ ಇಲಾಖೆಯ ಸಹಾಯಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದಾರೆ. ಸಪ್ಟೆಂಬರ್ ಮಾಸಾಂತ್ಯದವರೆಗೆ ಪೋಷಕಾಂಶಯುಕ್ತ ಆಹಾರ ಸೇವನೆಯ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ ಎಂದರು. ಆರೋಗ್ಯ ಇಲಾಖೆಯ ಎಲ್‌ಎಚ್‌ವಿ ಎಸ್.ಎಸ್. ಅಮಾತೆ, ಸಿಎಚ್‌ಓ ಸವಿತಾ ಪಾರಿಶ್ವಾಡ ಮತ್ತು ಮಾಜಿ ತಾಲೂಕು ಪಂಚಾಯತ ಸದಸ್ಯೆ ಶಮೀನಾ ನದ್ಾ ಪೌಷ್ಟಿಕ ಆಹಾರದ ಬಗ್ಗೆ ಮಾತನಾಡಿದರು. ನಂತರ ಹಮ್ಮಿಕೊಂಡ ಜಾಥಾದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಭಾಗವಹಿಸಿ, ಪೌಷ್ಟಿಕ ಆಹಾರ ಸೇವನೆ ಮತ್ತು ಶುಚಿತ್ವ ಕಾಯ್ದುಕೊಳ್ಳುವ ಬಗ್ಗೆ ಘೋಷಣೆ ಕೂಗಿದರು.

    ಮಂಜುಳಾ ಹಂಚಿನಮನಿ ಸ್ವಾಗತಿಸಿದರು. ಸರೋಜಿನಿ ಪಡಿಪಾಟೀಲ ನಿರೂಪಿಸಿದರು. ಕವಿತಾ ನಾವಲಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts