More

    ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ವಿುಕರ ಸೇವೆ ಅನನ್ಯ

    ಚಿಕ್ಕಮಗಳೂರು: ನಗರದ ಸ್ವಚ್ಛತೆ ಕಾಪಾಡುವ ಜತೆ ಜನರ ಆರೋಗ್ಯ ವೃದ್ಧಿಗೆ ಪೌರಕಾರ್ವಿುಕರ ಕೊಡುಗೆ ಅನನ್ಯ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.  ಪೌರಕಾರ್ವಿುಕರ ದಿನಾಚರಣೆ ಅಂಗವಾಗಿ ಮಂಗಳವಾರ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ವಿುಕರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ವೃದ್ಧಿಗಾಗಿ ನಿತ್ಯ ಮುಂಜಾನೆ ಬಹಳಷ್ಟು ಜನ ವಾಕ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ ಆ ಸಮಯದಲ್ಲಿ ಪೌರಕಾರ್ವಿುಕರು ಕರ್ತವ್ಯಕ್ಕೆ ಹಾಜರಾಗುವ ಮೂಲಕ ನಗರದ ಸ್ವಚ್ಛತೆಗೆ ಹೆಚ್ಚು ಶ್ರಮಿಸುತ್ತಿದ್ದಾರೆ. ಪೌರಕಾರ್ವಿುಕರು ಇಲ್ಲದಿದ್ದರೆ ನಗರ ಸ್ವಚ್ಛವಾಗಿರಲು ಹಾಗೂ ಜನ ಆರೋಗ್ಯದಿಂದಿರಲು ಸಾಧ್ಯವಿಲ್ಲ. ಅಂತಹ ಸೇವಾಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಜನರ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ವಿುಕರು ಶ್ರಮಿಸುತ್ತಿದ್ದಾರೆ. ಅವರ ಆರೋಗ್ಯ ರಕ್ಷಣೆಗೆ ಜವಾಬ್ದಾರಿ ಸರ್ಕಾರ ಮತ್ತು ಜಿಲ್ಲಾಡಳಿತದ ಮೇಲಿದೆ. ಈ ಹಿನ್ನೆಲೆಯಲ್ಲಿ ಎರಡ್ಮೂರು ತಿಂಗಳಿಗೊಮ್ಮೆ ಪೌರಕಾರ್ವಿುಕರಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕೆಂದು ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುವ ಪೌರಕಾರ್ವಿುಕರಿಗೆ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಮನೋರಂಜನೆ ಮುಖ್ಯ ಎಂದರು. ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ 11365 ಪೌರಕಾರ್ವಿುಕರ ಸೇವೆ ಕಾಯಂಗೊಳಿಸಬೇಕೆಂದು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆೆ. ಬೇರೆ ಬೇರೆ ಏಜೆನ್ಸಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ವಿುಕರನ್ನು ನೇರ ಪಾವತಿಗೆ ತರಬೇಕೆಂದು ನಿರ್ಣಯಿಸಿರುವುದಕ್ಕೆ ನಗರಸಭೆಯಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಸರ್ಕಾರದಿಂದ ನೀಡಲಾಗುತ್ತಿದ್ದ 4 ಸಾವಿರ ರೂ.ವನ್ನು ಹೆಚ್ಚುವರಿ ಮಾಡಿ 7 ಸಾವಿರ ರೂ.ವನ್ನು ಪೌರಕಾರ್ವಿುಕರ ಖಾತೆಗೆ ಜಮಾ ಮಾಡಲಾಗಿದೆ. ಪೌರಕಾರ್ವಿುಕರು, ನೀರು ಸರಬರಾಜು ಸಿಬ್ಬಂದಿ ಸೇರಿ ಎಲ್ಲರಿಗೂ ಬಟ್ಟೆ ವಿತರಣೆ ಮಾಡಲಾಗಿದೆ. ಬೆಳಗಿನಿಂದ ಸಂಜೆವರೆಗೂ ವೃತ್ತಿಯಲ್ಲಿ ತೊಡಗಿ ನಗರವನ್ನು ಸ್ವಚ್ಛ ಮಾಡಿದ ಕೆಲವೇ ಗಂಟೆಯಲ್ಲಿ ಕೆಲವರು ಅಲ್ಲಲ್ಲಿ ಕಸ ಹಾಕುತ್ತಾರೆ. ಆದರೆ ನಾವೆಷ್ಟೇ ಕೆಲಸ ಮಾಡಿದರೂ ನಾಗರಿಕರು ಆಪಾದನೆ ಮಾಡುತ್ತಾರೆ. ಅವರ ಜವಾಬ್ದಾರಿ ಮರೆತು ಆರೋಪಿಸುವುದನ್ನೇ ರೂಢಿಯಾಗಿಸಿಕೊಂಡಿದ್ದಾರೆ. ನಾವು ನಮ್ಮ ಸೇವೆ ಪ್ರಾಮಾಣಿಕವಾಗಿ ಮಾಡಿ ನಗರದ ಸ್ವಚ್ಛತೆಗೆ ಶ್ರಮಿಸಬೇಕು ಎಂದರು.   ನಿತ್ಯ ನಗರದ ಸ್ವಚ್ಛತೆಗಾಗಿ ಬೆವರು ಸುರಿಸಿ ದುಡಿಯುವ ಪೌರಕಾರ್ವಿುಕರು ಹಾಗೂ ಸಿಬ್ಬಂದಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಥ್ರೋಬಾಲ್, ಮ್ಯೂಸಿಕಲ್ ಛೇರ್, ಲೆಮನ್ ಇನ್ ದ ಸ್ಪೂನ್ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts